For Quick Alerts
  ALLOW NOTIFICATIONS  
  For Daily Alerts

  ಜಗ್ಗೇಶ್ ಬಾಯಲ್ಲಿ ಕುಡುಕರ ಹಾಡು ರತ್ನನ್ ಪದ

  |

  ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿರುವ 'ಮಂಜುನಾಥ ಬಿಎ ಎಲ್‌ಎಲ್‌ಬಿ' ಚಿತ್ರಕ್ಕೆ ಅವರೊಂದು ಹಾಡನ್ನೂ ಹಾಡಿದ್ದಾರೆ. ಆ ಹಾಡು ರತ್ನನ್ ಪದ. "ಬ್ರಹ್ಮ ನಿಂಗೆ ಜೋಡಿಸ್ತೀನಿ ಹೆಂಡ ಮುಟ್ಟಿದ್ ಕೈನ..." ಎಂಬ ಈ ಮೊದಲು ಪಿ ಕಾಳಿಂಗರಾವ್ ಹಾಡಿದ ಹಾಡಿಗೆ ಇದೀಗ ಜಗ್ಗೇಶ್ ದನಿಯಾಗಿದ್ದಾರೆ. ಅಂದಹಾಗೆ, ಜಗ್ಗೇಶ್ ಈ ಚಿತ್ರದಲ್ಲಿ ಕುಡುಕನ ಪಾತ್ರ ಮಾಡುತ್ತಿದ್ದಾರೆ. ಅದಕ್ಕಾಗಿಯೇ ರತ್ನನ್ ಪದ ಹಾಡಿಸಿದ್ದು, ನೆನಪಿರಲಿ...

  ಈ ಮೊದಲು ಜಗ್ಗೇಶ್, 'ಬಾಡಿಗಾರ್ಡ್' ಚಿತ್ರದಲ್ಲಿ 'ಮಂಟೆ ಸಾ...' ಎಂಬ ಹಾಡೊಂದನ್ನು ಹಾಡಿದ್ದರು. ಈಗ ಜಗ್ಗೇಶ್ ಬಾಯಲ್ಲಿ ರತ್ನನ್ ಪದ ಹಾಡಿಸಿದ್ದಾರೆ ಸಂಗೀತ ನಿರ್ದೇಶಕ ವಿನಯ್ ಚಂದ್ರ. "ಪಿ ಕಾಳಿಂಗರಾಯರ ಅದೇ ಟ್ಯೂನ್ ಗೆ ಹೊಸ ರಿದಮ್ ಬಳಸಿದ್ದೇನೆ. ಆ ಹಾಡನ್ನು ಜಗ್ಗೇಶ್ ಹಾಡಿದರೇ ಚೆಂದ ಅನ್ನಿಸಿ ಹಾಡಿಸಿದ್ದೇನೆ" ಎಂದಿದ್ದಾರೆ. ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮುಗಿದಿದೆ.

  ಈಗ 'ಮಂಜುನಾಥ ಬಿಎ ಎಲ್‍ಎಲ್‌ಬಿ' ಶತಾಯಗತಾಯ ಗೆಲ್ಲಿಸಬೇಕು ಎಂಬ ಹಠದಲ್ಲಿ ಜಗ್ಗೇಶ್ ಹಾಗೂ ನಿರ್ದೇಶಕ ಮದನ್ ಶ್ರಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಜಗ್ಗೇಶ್‌ಗೆ ನಾಯಕಿಯಾಗಿ ನಿಖಿತಾ ತುಕ್ರಲ್ ಅಭಿನಯಿಸುತ್ತಿದ್ದಾರೆ. ಈಗಷ್ಟೆ 'ಗೌರಿಪುತ್ರ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ ನಿಖಿತಾ ತುಕ್ರಲ್. (ಒನ್‌ಇಂಡಿಯಾ ಕನ್ನಡ)

  English summary
  Navarasa Nayaka Jaggesh forth coming movie Manjunatha BA.LLB shooting progressing briskly. This has remake Hindi film Raja and it will be directed by actor/writer Mohan. Nikita Thukral plays lady lead role in the film.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X