»   » ಈ ವಾರ ರಿಲೀಸ್ ಆಗುತ್ತಿರುವ 4 ಕನ್ನಡ ಚಿತ್ರಗಳು ಯಾವುದು?

ಈ ವಾರ ರಿಲೀಸ್ ಆಗುತ್ತಿರುವ 4 ಕನ್ನಡ ಚಿತ್ರಗಳು ಯಾವುದು?

Posted By:
Subscribe to Filmibeat Kannada

ಕನ್ನಡ ಚಿತ್ರಪ್ರೇಮಿಗಳಿಗೆ ಈ ವಾರವೂ ಸಿನಿ ಹಬ್ಬ. ಒಂದಲ್ಲ, ಎರಡಲ್ಲ ಒಟ್ಟು ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬರುತ್ತಿದೆ. ಟಿ.ಎನ್.ಸೀತಾರಾಮ್ ನಿರ್ದೇಶನದ 'ಕಾಫಿತೋಟ' ಚಿತ್ರದ ಜೊತೆ ಇನ್ನು ಮೂರು ಸದಭಿರುಚಿಯ ಚಿತ್ರಗಳು ಬಿಡುಗಡೆಯಾಗುತ್ತಿದೆ.

ಕೂಡ್ಲು ರಾಮಕೃಷ್ಣ ನಿರ್ದೇಶನದ 'ಮಾರ್ಚ್ 22' ಚಿತ್ರ ಇದೇ ವಾರ ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ನೀರಿನ ಸಮಸ್ಯೆ, ಸಾಮರಸ್ಯ ಮುಂತಾದ ಸೂಕ್ಷ್ಮ ವಿಚಾರಗಳನ್ನ ಅಡಗಿಸಿಕೊಂಡಿರುವ ಹಾಗೂ ಧರ್ಮಕ್ಕಿಂತ ಬದುಕು ಮುಖ್ಯವೆಂಬ ಭಿನ್ನ ಬಗೆಯ ಕಥಾ ಹಂದರವನ್ನ ಈ ಚಿತ್ರ ಹೊಂದಿದೆ.

4 Kannada Movie are Releasing on august 18th

ಮಂಗಳೂರು ಮೂಲದ ದುಬೈ ಉದ್ಯಮಿ ಹರೀಶ್ ಶೇರಿಗಾರ್ ಹಾಗೂ ಅವರ ಪತ್ನಿ ಶರ್ಮಿಳಾ ಶೇರಿಗಾರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಆರ್ಯವರ್ಧನ್ ಹಾಗೂ ಕಿರಣ್ ರಾಜ್ ಎಂಬ ನವ ನಟರು ಈ ಚಿತ್ರದಲ್ಲಿ ನಾಯಕನಟರಾಗಿದ್ದು, ಮೇಘಶ್ರೀ ಮತ್ತು ದೀಪ್ತಿ ಶೆಟ್ಟಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅನಂತ್ ನಾಗ್, ಗೀತಾ, ರಮೇಶ್ ಭಟ್, ಸಾಧುಕೋಕಿಲಾ, ಜೈಜಗದೀಶ್, ಆಶಿಶ್ ವಿದ್ಯಾರ್ಥಿ, ಪದ್ಮಜಾ ರಾವ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಕೂಡ ಕಾಣಿಸಿಕೊಂಡಿದ್ದಾರೆ.

4 Kannada Movie are Releasing on august 18th

ಟಿ.ಎನ್ ಸೀತಾರಾಮ್ ನಿರ್ದೇಶನದ 'ಕಾಫಿತೋಟ' ಈ ವಾರದ ನಿರೀಕ್ಷೆಯ ಸಿನಿಮಾ. ರಘುಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತ ಹೊರನಾಡು, ರಾಹುಲ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

4 Kannada Movie are Releasing on august 18th

ದೇವನೂರು ಮಹದೇವರ ಅವರ ಕೃತಿಗಳ ಆಧರಿತವಾಗಿ ನಿರ್ಮಾಣ ಮಾಡಿರುವ ಚಿತ್ರವೇ 'ಮಾರಿಕೊಂಡವರು'. ಕೆ.ಶಿವರುದ್ರಯ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್, ಸರ್ದಾರ್ ಸತ್ಯ, ನಟ ಸಂಚಾರಿ ವಿಜಯ್, ನಟ ದಿಲೀಪ್ ಮುಂತಾದವರು ಅಭಿನಯಿಸಿದ್ದಾರೆ.

4 Kannada Movie are Releasing on august 18th

ಜೂಮ್ ರವಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಪರ್ಚಂಡಿ ಸಿನಿಮಾ ಈ ವಾರವೇ ಬಿಗ್ ಸ್ಕ್ರೀನ್ ಮೇಲೆ ಬರ್ತಿದೆ. ಶಿವಾನಂದ ಅವರು ನಿರ್ಮಾಣ ಮಾಡಿದ್ದು, ಶೋಭ್ ರಾಜ್, ಮಹೇಶ್ ದೇವ್ರು, ಕಲ್ಪನಾ, ಕುರಿಬಾಂಡ್ ರಂಗ, ಶಿವಾಜಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

English summary
nagathihalli chandrashekar Directional Kaafi thota along with Maarikondavaru, Parchandi, and March 22 Movies Are Releasing on august 18th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada