For Quick Alerts
  ALLOW NOTIFICATIONS  
  For Daily Alerts

  ಈ ವಾರ ಬಿಡುಗಡೆಯಾಗುತ್ತಿರುವ 4 ಚಿತ್ರಗಳ ಪಟ್ಟಿ

  |

  ಪ್ರತಿ ವಾರ ಕೂಡ ಕನ್ನಡದಲ್ಲಿ ಹೊಸ ಹೊಸ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತವೆ. ಕಳೆದ ವಾರ '99', 'ಗರ' ಸೇರಿದಂತೆ ಐದು ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ವಾರವೂ 4ಚಿತ್ರಗಳು ರಿಲೀಸ್ ಗೆ ರೆಡಿ ಇವೆ.

  ನಟಿ ಹರಿಪ್ರಿಯಾ ಹಾಗೂ ಯಶ್ ಶೆಟ್ಟಿ ನಟನೆಯ 'ಸೂಜಿದಾರ' ಸಿನಿಮಾ ಇದೇ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಚಿತ್ರದ ಜೊತೆಗೆ 'ಅನುಷ್ಕ', 'ಖನನ', ಸಂಯುಕ್ತ ಹೊರನಾಡು ಅಭಿನಯದ 'ತ್ರಯ' ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ.

  13 ದಿನಗಳ ಅಂತರದಲ್ಲಿ ಹರಿಪ್ರಿಯಾ ನಟನೆಯ 2 ಸಿನಿಮಾ ರಿಲೀಸ್

  ಈ ಎಲ್ಲ ಚಿತ್ರತಂಡಗಳು ತಮ್ಮ ಶ್ರಮ ಹಾಕಿ ಸಿನಿಮಾ ಮಾಡಿದ್ದು, ಅದರ ಫಲಕ್ಕಾಗಿ ಕಾಯುತ್ತಿದ್ದಾರೆ. ಅವರ ಕೆಲಸಕ್ಕೆ ಪ್ರೇಕ್ಷಕರು ಶುಕ್ರವಾರ ಮಾರ್ಕ್ ನೀಡಲಿದ್ದಾರೆ.

  ಅಂದಹಾಗೆ, ಈ ವಾರ ಬಿಡುಗಡೆಯಾಗುತ್ತಿರುವ ನಾಲ್ಕು ಸಿನಿಮಾಗಳ ಬಗ್ಗೆ ಒಂದಷ್ಟು ವಿವರ ಇಲ್ಲಿದೆ ಓದಿ...

  ಮೈ ಮನ ಪೋಣಿಸೊ 'ಸೂಜಿದಾರ'

  ಮೈ ಮನ ಪೋಣಿಸೊ 'ಸೂಜಿದಾರ'

  ನಟಿ ಹರಿಪ್ರಿಯಾ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ಅವರು ಮತ್ತೊಂದು ಸಾವಾಲಿನ ಪಾತ್ರವನ್ನು 'ಸೂಜಿದಾರ' ಸಿನಿಮಾದಲ್ಲಿ ಮಾಡಿದ್ದಾರೆ. ಯಶ್ ಶೆಟ್ಟಿ ಸಿನಿಮಾದ ನಾಯಕರಾಗಿದ್ದಾರೆ. ಮೌನೇಶ್ ಬಡಿಗೇರ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಗಮನ ಸೆಳೆದಿದ್ದು, ಚಿತ್ರದ ಮೇಲೆ ನಿರೀಕ್ಷೆ ಇದೆ.

  'ಅನುಷ್ಕ' ಆಗಮನ

  'ಅನುಷ್ಕ' ಆಗಮನ

  'ಅನುಷ್ಕ' ಕನ್ನಡ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಸುಮಾರು 130 ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಐತಿಹಾಸಿಕ ಹಿನ್ನಲೆಯ ಸಿನಿಮಾ ಇದಾಗಿದೆ. 'ಡೇಂಜರ್ ಜೋನ್' ಹಾಗೂ 'ನಿಶ್ಯಬ್ಧ 2' ಚಿತ್ರಗಳನ್ನು ಮಾಡಿದ್ದ ದೇವರಾಜ್ ಕುಮಾರ್ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ರೂಪೇಶ್ ಶೆಟ್ಟಿ ಚಿತ್ರದ ನಾಯಕನಾಗಿದ್ದಾರೆ. ಅನುಷ್ಕ ಪಾತ್ರದಲ್ಲಿ ಅಮೃತ ನಟಿಸಿದ್ದಾರೆ.

  ಟ್ರೆಂಡಿಂಗ್ ನಲ್ಲಿ 'ಸೂಜಿದಾರ' ಸಿನಿಮಾದ ಟ್ರೇಲರ್

  'ಖನನ'ಕ್ಕೆ ದಾರಿ ತೆರೆಯುತ್ತೆ

  'ಖನನ'ಕ್ಕೆ ದಾರಿ ತೆರೆಯುತ್ತೆ

  'ಖನನ' ಎಂಬ ಸಿನಿಮಾ ಕೂಡ ಮೇ 10 ರಂದು ಬಿಡುಗಡೆಯಾಗುತ್ತಿದೆ. ಕನ್ನಡ, ತಮಿಳು ಹಾಗೂ ತೆಲಗು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಆಗಿದೆ. ರಾಧ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಆರ್ಯವರ್ಧನ್ ಚಿತ್ರದ ನಾಯಕನಾಗಿದ್ದು, ಕರಿಷ್ಮಾ ನಾಯಕಿಯಾಗಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿದ್ದು, ಬಹುತೇಕ ಹೊಸಬರೇ ನಟಿಸಿದ್ದಾರೆ.

  'ತ್ರಯ' ಚಿತ್ರ ಬಿಡುಗಡೆ

  'ತ್ರಯ' ಚಿತ್ರ ಬಿಡುಗಡೆ

  'ತ್ರಯ' ಒಂದು ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಸಿನಿಮಾವಾಗಿದೆ. ಕೃಷ್ಣಸಾಯಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮೂರು ಜನ ಯುವಕರು ಹಾಗೂ ಒಬ್ಬ ಯುವತಿಯ ಪ್ರೇಮ ಕಥೆ ಸಿನಿಮಾದಲ್ಲಿದೆ. ಸಂಯುಕ್ತ ಹೊರನಾಡು ಚಿತ್ರದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಾರ 'ತ್ರಯ' ಸಿನಿಮಾ ತೆರೆಗೆ ಬರುತ್ತಿದೆ.

  English summary
  Soojidara, Anushka, Kannana, Traya, kannada movie releasing on this friday (May 10th)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X