For Quick Alerts
  ALLOW NOTIFICATIONS  
  For Daily Alerts

  ಚುನಾವಣೆಯ ಫಲಿತಾಂಶದ ನಡುವೆ ನಾಳೆ 4 ಸಿನಿಮಾಗಳು ಬಿಡುಗಡೆ

  |

  ಇಂದು (ಮೇ 23) ಚುನಾವಣಾ ಫಲಿತಾಂಶ ಏನಾಗುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಇಡೀ ಭಾರತದ ಜನ ಕಾಯುತ್ತಿದ್ದಾರೆ. ಚುನಾವಣಾ ಫಲಿತಾಂಶ ನಡುವೆ ನಾಳೆ (ಮೇ 24) ನಾಲ್ಕು ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದೆ.

  ಈ ವಾರ 'ರೇಸ್'ಗೆ ಇಳಿಯಲಿದ್ದಾರೆ ಬಿಗ್ ಬಾಸ್ ದಿವಾಕರ್

  ನಟಿ ಹರಿಪ್ರಿಯಾ ಹಾಗೂ ಸುಮಲತಾ ಅಭಿನಯದ 'ಡಾಟರ್ ಆಫ್ ಪಾರ್ವತಮ್ಮ', 'ವೀಕ್ ಎಂಡ್', 'ರೇಸ್' 'ದಿಗ್ಬಯಂ' ಸಿನಿಮಾಗಳು ಈ ವಾರ ತೆರೆಗೆ ಬರುತ್ತಿದೆ.

  'ಡಾಟರ್ ಆಫ್ ಪಾರ್ವತಮ್ಮ' ಚಿತ್ರ ಟ್ರೇಲರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿದೆ. ಚಿತ್ರದಲ್ಲಿ ಹರಿಪ್ರಿಯಾ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಡಿಫೆರೆಂಟ್ ಆಗಿದೆ. ಮಾಸ್ ಡೈಲಾಗ್ ಹೊಡೆದು, ಫೈಟ್ ಸಹ ಮಾಡಿದ್ದಾರೆ.

  ಈ ಚಿತ್ರದ ಜೊತೆಗೆ 'ವೀಕ್ ಎಂಡ್' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಬಿಗ್ ಬಾಸ್ ಸೀಸನ್ 5' ರನ್ನರ್ ಅಪ್ ದಿವಾಕರ್ 'ರೇಸ್' ಸಿನಿಮಾದಲ್ಲಿ ನಾಯಕನಾಗಿದ್ದಾರೆ.

  'ದಿಗ್ಭಯಂ' ಸಿನಿಮಾವನ್ನು ಅಮಿತ್ ನಿರ್ದೇಶನ ಮಾಡಿದ್ದು, ಅವರೇ ನಾಯಕರಾಗಿದ್ದಾರೆ. ಈ ಸಿನಿಮಾಗೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಇದೊಂದು ಹಾರರ್ ಟಚ್ ಇರುವ ಸಿನಿಮಾವಾಗಿದೆ.

  English summary
  Daughter Of Parvathamma, Race, Week End, Digbhayam kannada movie releasing on this friday (May 23th)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X