For Quick Alerts
  ALLOW NOTIFICATIONS  
  For Daily Alerts

  ಡಬ್ಬಿಂಗ್ ಚಿತ್ರಗಳಿಗೆ ಉಪರಾಷ್ಟ್ರಪತಿ ಗ್ರೀನ್ ಸಿಗ್ನಲ್

  By Rajendra
  |

  ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳು ಬೇಕೆ ಬೇಡವೆ ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಚಿತ್ರೋದ್ಯಮದಲ್ಲೇ ಒಮ್ಮತವಿಲ್ಲ. ಕೆಲವರು ಡಬ್ಬಿಂಗ್ ಚಿತ್ರರಂಗಕ್ಕೆ ಪೂರಕ ಎಂದರೆ ಮತ್ತೆ ಕೆಲವರು ಮಾರಕ ಎನ್ನುತ್ತಿದ್ದಾರೆ. ಈ ಗೊಂದಲದ ಪರಿಸ್ಥಿತಿಯಲ್ಲೇ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಅವರು ಡಬ್ಬಿಂಗ್ ಚಿತ್ರಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಒಂದು ಭಾಷೆಯ ಚಿತ್ರಗಳು ಮತ್ತೊಂದು ಭಾಷೆಗೆ ಡಬ್ ಆಗುವುದರಿಂದ ಒಂದು ಭಾಗದ ಸಂಸ್ಕೃತಿಯನ್ನು ಮತ್ತೊಂದು ಭಾಗದ ಜನ ಅರಿಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.

  ಆದರೆ ಇತ್ತೀಚೆಗೆ ಹೆಚ್ಚಾಗಿ ಡಬ್ಬಿಂಗ್ ಚಿತ್ರಗಳು ಬರುತ್ತಿಲ್ಲ. ಇದು ಆತಂಕಕಾರಿ ಬೆಳವಣಿಗೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಹನ್ಸಾರಿ. ಡಬ್ಬಿಂಗ್ ಜೊತೆಗೆ ಅವರು ಸಬ್ ಟೈಟ್ಲಿಂಗ್‌ಗೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಡಬ್ಬಿಂಗ್ ಚಿತ್ರಗಳಿಗೆ ಉಪರಾಷ್ಟ್ರಪತಿಗಳು ಗ್ರೀನ್ ಸಿಗ್ನಲ್ ನೀಡಿದಂತಾಗಿದೆ. (ಏಜೆನ್ಸೀಸ್)

  English summary
  Regional movies should be dubbed in different languages and released with subtitles to reach out to a larger audience on the lines of foreign movies as it would help in forging greater cultural integrity, Vice President M Hamid Ansari said in his address at the 59th National Film Awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X