»   » ಅಣ್ಣಾವ್ರು ಡಾಕ್ಟರೇಟ್ ಪಡೆದ ಆ ಕ್ಷಣಕ್ಕೆ 42 ವರ್ಷ: ಹೇಗಿತ್ತು ಆ ದಿನ?

ಅಣ್ಣಾವ್ರು ಡಾಕ್ಟರೇಟ್ ಪಡೆದ ಆ ಕ್ಷಣಕ್ಕೆ 42 ವರ್ಷ: ಹೇಗಿತ್ತು ಆ ದಿನ?

Posted By:
Subscribe to Filmibeat Kannada
ಅಣ್ಣಾವ್ರು ಡಾಕ್ಟರೇಟ್ ಪಡೆದ ಆ ಕ್ಷಣಕ್ಕೆ 42 ವರ್ಷ | Filmibeat Kannada

ರಸಿಕರ ರಾಜ, ಗಾನಗಂಧರ್ವ, ವರನಟ, ನಟ ಸಾರ್ವಭೌಮ, ಅಣ್ಣಾವ್ರು ಎಂದೆಲ್ಲ ಕರೆಸಿಕೊಳ್ಳವ ರಾಜ್ ಕುಮಾರ್ ರವರಿಗೆ 'ಡಾ.ರಾಜ್ ಕುಮಾರ್' ಎಂದು ಕರೆಯಲು ಶುರುಮಾಡಿ ಇಂದಿಗೆ 42 ವರ್ಷವಾಯಿತ್ತು.

ಹೌದು, ಇವತ್ತಿಗೆ ಸರಿಯಾಗಿ 42 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯ ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.

ಈ ಅಪರೂಪದ ಕ್ಷಣವನ್ನ ಅದೇಷ್ಟೂ ಜನ ನೋಡಿದ್ದಾರೋ ಇಲ್ವೋ ಗೊತ್ತಿಲ್ಲ. ಆದ್ರೆ, ಆ ಕ್ಷಣದ ಕೆಲವು ಫೋಟೋಗಳು ಫಿಲ್ಮಿಬೀಟ್ ಕನ್ನಡಗೆ ಲಭ್ಯವಾಗಿದೆ. ಮುಂದೆ ನೋಡಿ.

ಅಣ್ಣಾವ್ರ ಡಾಕ್ಟರೇಟ್ ಗೆ 42 ವರ್ಷ

ಫೆಬ್ರವರಿ 8, 1976 ರಂದು ಕನ್ನಡ ಕಲಾ ಕಂಠೀರವ ರಾಜ್ ಕುಮಾರ್ ಅವರಿಗೆ ಮೈಸೂರಿನ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಡಾ.ರಾಜ್ ಡಾಕ್ಟರೇಟ್ ಪಡೆದ ಆ ಕ್ಷಣ..

ಮೈಸೂರಿನ ವಿಶ್ವವಿದ್ಯಾಲಯ ಆವರಣದಲ್ಲಿ ರಾಜ್ ಕುಮಾರ್ ಅವರು ಡಾಕ್ಟರೇಟ್ ಪಡೆದ ಕ್ಷಣ ಇದು. ಡಾ.ರಾಜ್ ಅವರನ್ನ ನೋಡಲು ಹೆಚ್ಚು ಅಭಿಮಾನಿಗಳು ಸೇರಿದ್ದರು. ಈ ವೇಳೆ ಪಾರ್ವತಮ್ಮ ರಾಜ್ ಕುಮಾರ್ ಅವರು ಕೂಡ ಸಾಕ್ಷಿಯಾಗಿದ್ದರು.

ಡಾಕ್ಟರೇಟ್ ಬಗ್ಗೆ ಡಾ.ರಾಜ್ ಏನ್ ಹೇಳಿದ್ದರು?

ವೇದಿಕೆವೊಂದರಲ್ಲಿ ಮಾತನಾಡುತ್ತಿದ್ದ ಡಾ.ರಾಜ್ ಕುಮಾರ್ ಅವರು, ತಮಗೆ ನೀಡಿರುವ ಡಾಕ್ಟರೇಟ್ ಬಗ್ಗೆ ಹೀಗೆ ಕೇಳಿದ್ದರಂತೆ. ''ಏನ್ ನೋಡಿ ನನಗೆ ಡಾಕ್ಟರೇಟ್ ಕೊಡ್ತಿದ್ದೀರಾ? ನಾನು ವಿದ್ಯಾವಂತನಲ್ಲ, ಓದಿದವನಲ್ಲ, ನಾನೇನೂ ಎಂ.ಎ ಆಗಲಿ ಪಿ.ಎಚ್.ಡಿ ಮಾಡಿದ್ದೀನಾ. ಬಾಲ್ಯದಲ್ಲಿ ನಾನು ಹಳ್ಳಿನಲ್ಲಿ ಎಮ್ಮೆ ಮೇಯಸ್ತಾ ಇದ್ದೆ ನಾನು'' ಅಂತಾ ಹೇಳಿದ್ದರು.

ಶಿವಣ್ಣನಿಗೆ ಡಾಕ್ಟರೇಟ್ ಸಿಕ್ಕಿದೆ

2014 ರಲ್ಲಿ ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಸಾಧನೆಯನ್ನ ಗೌರವಿಸಿ ಡಾಕ್ಟರೇಟ್ ನೀಡಿತ್ತು.

ಸ್ಯಾಂಡಲ್ ವುಡ್ ಕಿಂಗ್ ಗೆ ಗೌರವ ಡಾಕ್ಟರೇಟ್

ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಡಾಕ್ಟರೇಟ್

2015ರ ಮೇ ತಿಂಗಳಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.

ಬೆಂಗಳೂರು ವಿವಿಯಿಂದ ಪಾರ್ವತಮ್ಮ ರಾಜ್ ಕುಮಾರ್ ಗೆ ಗೌರವ ಡಾಕ್ಟರೇಟ್

English summary
Exactly 42 years back, Late Kannada Actor Rajkumar received Honorary Doctorate from Mysore University. check in pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada