For Quick Alerts
  ALLOW NOTIFICATIONS  
  For Daily Alerts

  ದೇವ್ ಸನ್ ಆಫ್ ಮುದ್ದೇಗೌಡ ರಿಲೀಸ್‍‌ಗೆ ಗ್ರೀನ್ ಸಿಗ್ನಲ್

  By Rajendra
  |

  ಸಾಕಷ್ಟು ವಾದ ವಿವಾದ, ಚರ್ಚೆಗೆ ಕಾರಣವಾಗಿದ್ದ ಇಂದ್ರಜಿತ್ ಲಂಕೇಶ್ ನಿರ್ದೇಶನದ "ದೇವ್ ಸನ್ ಆಫ್ ಮುದ್ದೇಗೌಡ" ವಿವಾದ ಫಿಲಂ ಚೇಂಬರ್ ಮಧ್ಯಸ್ಥಿಕೆಯಲ್ಲಿ ಗುರುವಾರ (ಏ.5) ಮಧ್ಯಾಹ್ನ ಬಗೆಹರಿದಿದೆ. ಇದೇ ಶುಕ್ರವಾರ (ಏ.6) ರಾಜ್ಯದಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದರು.

  ವಿಶ್ವ ಒಕ್ಕಲಿಗರ ಒಕ್ಕೂಟ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡುವೆ ನಡೆದ ಮಾತುಕತೆ ಫಲಪ್ರದವಾಗಿದ್ದು, ಚಿತ್ರ ಬಿಡುಗಡೆಗೆ ಯಾವುದೇ ಅಡ್ಡಿ ಇಲ್ಲ ಎಂದು ಚಂದ್ರಶೇಖರ್ ವಿವರ ನೀಡಿದರು. ವಿಶ್ವ ಒಕ್ಕಲಿಗರ ಒಕ್ಕೂಟದ ಕೆಲವು ಷರತ್ತುಗಳನ್ನು ಇಂದ್ರಜಿತ್ ಲಂಕೇಶ್ ಒಪ್ಪುವ ಮೂಲಕ ವಿವಾದ ಸುಖಾಂತ್ಯವಾಗಿದೆ. ಅವುಗಳಲ್ಲಿ ದಿಗಂತ್ ಪ್ಯಾಂಟ್ ಬಿಚ್ಚಿರುವ ಪೋಸ್ಟರ್‌ಗಳನ್ನು ಎಲ್ಲೂ ಬಳಸಿಕೊಳ್ಳ ಬಾರದು ಎಂಬ ಷರತ್ತು ಇದೆ.

  'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದ ಪೋಸ್ಟರ್‌ನಲ್ಲಿ ದಿಗಂತ್ ತಮ್ಮ ಪ್ಯಾಂಟನ್ನು ಬಿಚ್ಚಿ ಅಸಭ್ಯವಾಗಿ ಪೋಸು ನೀಡಿದ್ದಾರೆ. 'ಸನ್ ಆಫ್ ಮುದ್ದೇಗೌಡ' ಎಂಬ ಚಿತ್ರದ ಅಡಿಬರಹ ಮೇಲೆ ದಿಗಂತ್ ಈ ರೀತಿ ಪೋಸು ನೀಡಿರುವುದು ಒಕ್ಕಲಿಗರ ಸಂಘದ ಆಕ್ರೋಶಕ್ಕೆ ಕಾರಣವಾಗಿತ್ತು. ಒಕ್ಕಲಿಗ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಒಕ್ಕಲಿಗರ ಒಕ್ಕೂಟ ಆರೋಪಿಸಿತ್ತು. (ಒನ್‌ಇಂಡಿಯಾ ಕನ್ನಡ)

  English summary
  Dev Son of Mudde Gowda title controverys finally ends in intervention of Karnataka Film Chamber of Commerce (KFCC) on Thursday (April 5th) at KFCC office. The movie is releasing on 06th April 2012 all over Karntaka said the KFCC chairperson K.V.Chandrashekhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X