For Quick Alerts
  ALLOW NOTIFICATIONS  
  For Daily Alerts

  ಪ್ರೇಮಿಗಳ ದಿನ ಅರ್ಜುನ್ 'ಅದ್ದೂರಿ' ಆಡಿಯೋ

  |

  ಅದ್ದೂರಿ ಚಿತ್ರದ ಆಡಿಯೋ ಬಿಡುಗಡೆಯಾಗುವ ದಿನ ಪಕ್ಕಾ ಆಗಿದೆ. ನಿರ್ದೇಶಕ, ಅಂಬಾರಿ ಖ್ಯಾತಿಯ ಎ. ಪಿ. ಅರ್ಜುನ್ ಅವರ ಬರಲಿರುವ ಚಿತ್ರ 'ಅದ್ದೂರಿ'ಯ ಆಡಿಯೋ ಬಿಡುಗಡೆ ಪ್ರೇಮಿಗಳ ದಿನ, ಫೆಬ್ರವರಿ 14ರಂದು ಹೊರಬರಲಿದೆ. ಅದ್ದೂರಿ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಅರ್ಜುನ್, ಆಡಿಯೋ ಬಿಡುಗಡೆ ಮೂಲಕ ಪ್ರೇಕ್ಷಕರೆದುರು ಮೊದಲ ಹೆಜ್ಜೆ ಇಟ್ಟಂತಾಗಿದೆ.

  ಸಾಕಷ್ಟು ಸಿದ್ಧತೆಯೊಂದಿಗೆ ಮಾಡಿರುವ 'ಅದ್ದೂರಿ', ಅಂಬಾರಿಯನ್ನೂ ಮೀರಿಸಲಿದೆ ಎಂಬುದು ನಿರ್ದೇಶಕ ಅರ್ಜುನ್ ಹಾಗೂ ಇಡೀ ಚಿತ್ರತಂಡದ ಅನಿಸಿಕೆ. ನಾಯಕ ಧ್ರುವ ಸರ್ಜಾ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಪಡೆಯಲಿದ್ದಾರೆ. ನಾಯಕ ಹೊಸಬನಾದರೂ ನಾಯಕಿ ರಾಧಿಕಾ ಪಂಡಿತ್ ಕಥೆಯನ್ನು ಇಷ್ಟಪಟ್ಟು ಈ ಸಿನಿಮಾ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ.

  ಅದ್ದೂರಿ ಹಾಡುಗಳು ಎಲ್ಲ ಅಭಿರುಚಿಯ ಜನರೂ ಇಷ್ಟಪಡುವಂತಿದೆ ಎಂದಿದೆ ಚಿತ್ರತಂಡ. ಪ್ರೇಮಿಗಳ ದಿನದಂದು 'ಅದ್ದೂರಿ'ಯಾಗಿ ಬಿಡುಗಡೆಯಾಗಲಿರುವ ಅದ್ದೂರಿ ಆಡಿಯೋ, ಸಂಗೀತಪ್ರಿಯರನ್ನು ಸೆಳೆದರೆ ಅರ್ಜುನ್ ಶ್ರಮ ಸಾರ್ಥಕ. ಹಾಡುಗಳನ್ನು ಜನ ಇಷ್ಟಪಟ್ಟರೆ ಬಿಡುಗಡೆಗೆ ಮೊದಲೇ ಚಿತ್ರಕ್ಕೆ ಪ್ರಚಾರದ ಜೊತೆ ಪ್ಲಸ್ ಪಾಯಿಂಟ್. (ಒನ್ ಇಂಡಿಯಾ ಕನ್ನಡ)

  English summary
  Director A P Arjun Movie 'Adduri' Audio Releases on on 14th February 2012. This is produced by Shankar Reddy. Dhruva Sarja and Radhika Pandit acted in lead role. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X