For Quick Alerts
  ALLOW NOTIFICATIONS  
  For Daily Alerts

  ಎಲೆಕ್ಷನ್, ಐಪಿಎಲ್ ಮುಗಿಸಿ ನಾಳೆ ಚಿತ್ರಮಂದಿರಕ್ಕೆ ಬರುತ್ತಿವೆ 5 ಸಿನಿಮಾಗಳು

  By Naveen
  |

  ಇಷ್ಟು ದಿನ ಎಲ್ಲಿ ಕೇಳಿದರು ಬರೀ ಎಲೆಕ್ಷನ್ ಹಾಗೂ ಐಪಿಎಲ್ ಬಗ್ಗೆ ಮಾತಿತ್ತು. ಈ ಎರಡರ ನಡುವೆ ಹೆಚ್ಚು ಜನರು ಸಿನಿಮಾ ನೋಡುವ ಮೂಡ್ ನಲ್ಲಿ ಇರಲಿಲ್ಲ. ಆದರೆ ಈಗ ಐಪಿಎಲ್ ಮುಗಿದಿದೆ, ಚುನಾವಣೆಯ ಬಿಸಿ ಬಿಸಿ ಸುದ್ದಿಗಳು ಕೂಡ ಕೊಂಚ ತಣ್ಣಗಾಗಿದೆ. ಇವುಗಳ ನಂತರ ನಾಳೆ ಕನ್ನಡದಲ್ಲಿ ಐದು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

  ಜಯತೀರ್ಥ ನಿರ್ದೇಶನದ 'ವೆನಿಲ್ಲಾ', ಪ್ರಿಯಾಂಕ ಉಪೇಂದ್ರ ಅವರ '2nd ಹಾಫ್', 'ನವಿಲಕಿನ್ನರಿ', 'ಆದರ್ಶ್' ಹಾಗೂ ಸೈಲೆಂಟ್ ಸೈಕೋಲಾಜಿಕಲ್ ಸಿನಿಮಾ 'ಪರಿಧಿ' ಈ ಐದು ಸಿನಿಮಾಗಳ ಅದೃಷ್ಟ ಪರೀಕ್ಷೆ ನಾಳೆ ನಡೆಯಲಿದೆ.

  ಸಿಹಿಯಾದ, ರುಚಿಯಾದ 'ವೆನಿಲ್ಲಾ' ಈಗ ಸವಿಯಲು ಸಿದ್ಧ ಸಿಹಿಯಾದ, ರುಚಿಯಾದ 'ವೆನಿಲ್ಲಾ' ಈಗ ಸವಿಯಲು ಸಿದ್ಧ

  ಅಂದಹಾಗೆ, ನಾಳೆ ಬಿಡುಗಡೆಯಾಗುತ್ತಿರುವ ಈ 5 ಸಿನಿಮಾಗಳ ವಿವರ ಮುಂದಿದೆ ಓದಿ...

  ವೆನಿಲ್ಲಾ

  ವೆನಿಲ್ಲಾ

  ಇಷ್ಟು ದಿನ ಹಾಡುಗಳ ಮೂಲಕ ಎಲ್ಲ ಕಡೆ ಸದ್ದು ಮಾಡಿದ್ದ 'ವೆನಿಲ್ಲಾ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. 'ಬ್ಯೂಟಿಫುಲ್ ಮನಸುಗಳು' ಚಿತ್ರದ ನಂತರ 'ವೆನಿಲ್ಲಾ' ಸಿನಿಮಾವನ್ನು ಜಯತೀರ್ಥ ಅವರು ನಿರ್ದೇಶನ ಮಾಡಿದ್ದಾರೆ. ವೆನಿಲ್ಲಾ' ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಅವಿನಾಶ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇದು ಅವರ ಮೊದಲ ಸಿನಿವಾಗಿದೆ. ಸ್ವಾತಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಖಿಲ ಕಂಬೈನ್ಸ್ ಲಾಂಛನದಲ್ಲಿ ಜಯರಾಮು ಅವರು ನಿರ್ಮಿಸಿರುವ 'ವೆನಿಲ್ಲಾ' ಚಿತ್ರವನ್ನ ಜಯಣ್ಣ ಕಂಬೈನ್ಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

  ಮುಖ್ಯ ಚಿತ್ರಮಂದಿರ : ತ್ರಿವೇಣಿ

  2nd ಹಾಫ್

  2nd ಹಾಫ್

  ಪೊಲಿಟಿಕಲ್ ಥ್ರಿಲ್ಲಿಂಗ್ ಕಥೆ ಹೊಂದಿರುವ '2nd ಹಾಫ್' ಚಿತ್ರ ನಾಳೆ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ ಮೊದಲ ಬಾರಿಗೆ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಪೊಲೀಸ್ ಪೇದೆಯ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಕೂಡ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪರಿಚಯವಾಗ್ತಿದ್ದಾರೆ. ಮಹಿಳೆಯರ ಅಪಹರಣ, ಅತ್ಯಾಚಾರ, ರಾಜಕೀಯ ನಂಟು, ಹಿರಿಯ ಅಧಿಕಾರಿ ಕಿರುಕುಳ, ಪೊಲಿ ಹುಡುಗರ ಹಾವಳಿ, ಹೀಗೆ ಈ ಎಲ್ಲ ಅಂಶಗಳನ್ನ ಪೊಲೀಸ್ ಪೇದೆಯೊಬ್ಬಳು ಹೇಗೆ ಭೇದಿಸುತ್ತಾಳೆ ಎಂಬುದು ಈ ಥ್ರಿಲ್ಲಿಂಗ್ ಸ್ಟೋರಿ. ಯೋಗಿ ದೇವಗಂಗೆ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

  ಮುಖ್ಯ ಚಿತ್ರಮಂದಿರ : ಅನುಪಮ

  ಮಹಿಳೆಯರ ರಕ್ಷಣೆಗೆ ನಿಂತ ಪ್ರಿಯಾಂಕಾ ಉಪೇಂದ್ರ ಮಹಿಳೆಯರ ರಕ್ಷಣೆಗೆ ನಿಂತ ಪ್ರಿಯಾಂಕಾ ಉಪೇಂದ್ರ

  ಆದರ್ಶ್

  ಆದರ್ಶ್

  'ಆದರ್ಶ್' ಎಂಬ ಹೊಸ ಕನ್ನಡ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ. ನಟ ನಾಗಕಿರಣ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಕೆಲ ಸಿನಿಮಾ ಮಾಡಿದರುವ ನಟಿ ಪ್ರಜ್ಜು ಪೂವಯ್ಯ ಈ ಸಿನಿಮಾದ ನಾಯಕಿ ಆಗಿದ್ದಾರೆ. ಈ ಸಿನಿಮಾ ಒಂದು ಲವ್ ಸ್ಟೋರಿಯಾಗಿದೆ. ಶ್ರೀ ಪ್ರಭಾಕರ್ ನಿರ್ದೇಶನ ಹಾಗೂ ಹೇಮಂತ್ ಕುಮಾರ್ ಸಂಗೀತ ಚಿತ್ರಕ್ಕಿದೆ.

  ಮುಖ್ಯ ಚಿತ್ರಮಂದಿರ : ಸ್ವಪ್ನ

  ನವಿಲಕಿನ್ನರಿ

  ನವಿಲಕಿನ್ನರಿ

  ನಾಳೆ ಚಿತ್ರಮಂದಿರಕ್ಕೆ ಬರುತ್ತಿರುವ 'ನವಿಲ ಕಿನ್ನರಿ' ಎಂಬ ಸಿನಿಮಾದಲ್ಲಿ ಹುಳಿಕಲ್ ನಟರಾಜ್ ನಟಿಸಿದ್ದಾರೆ. ಹುಲಿಕಲ್ ಎಂಟರ್‌ಟೈನ್ ಮೆಂಟ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಈ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾ ಇದಾಗಿದೆ. ಈ ಚಿತ್ರವನ್ನು ವೆಂಕಿ ಚಲ್ಲಾ ಎಂಬುವವರು ನಿರ್ದೇಶನ ಮಾಡಿದ್ದಾರೆ. ಳಿಕಲ್ ನಟರಾಜ್ ಅವರ ಜೊತೆಗೆ ಹಿಮಾನ್ಸೀ ಚೌಧುರಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಿಮಾನ್ಸೀ ಚೌಧುರಿ ಕೂಚಿಪುಡಿ ನೃತ್ಯಪಟು ಆಗಿದ್ದಾರೆ.

  ಮುಖ್ಯ ಚಿತ್ರಮಂದಿರ : ಮೂವಿಲ್ಯಾಂಡ್

  ಪರಿಧಿ

  ಪರಿಧಿ

  'ಪರಿಧಿ' ಎಂಬ ಹೊಸ ಸಿನಿಮಾ ಕೂಡ ಇದೇ ಶುಕ್ರವಾರ ಥಿಯೇಟರ್ ಅಂಗಳಕ್ಕೆ ಬರುತ್ತಿದೆ. ಇದೊಂದು ಸೈಲೆಂಟ್ ಸೈಕೋಲಾಜಿಕಲ್ ಸಿನಿಮಾ ಆಗಿದೆ. ಹೊಸ ಕಲಾವಿದರ ಹೊದ ಪ್ರಯತ್ನದ ಸಿನಿಮಾ ಇದಾಗಿದೆ. ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

  English summary
  5 kannada movies are releasing on June 1st. vennila kannada movie release. '2nd Half' and 'Vennila' kannada movie will release tomorrow (June 1st ).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X