For Quick Alerts
  ALLOW NOTIFICATIONS  
  For Daily Alerts

  ಈ ವಾರ ಹೊಸಬರ ಐದು ಸಿನಿಮಾಗಳು ಬಿಡುಗಡೆ

  By Naveen
  |

  ಈ ವರ್ಷದ ಆರು ತಿಂಗಳಿನಲ್ಲಿ ಕನ್ನಡದಲ್ಲಿ 98 ಸಿನಿಮಾಗಳು ಬಿಡುಗಡೆಯಾಗಿವೆ. ಈ ಪೈಕಿ ಗೆದ್ದಿರುವುದು ಮಾತ್ರ ಎರಡ್ಮೂರು ಸಿನಿಮಾಗಳು. ಅದರಲ್ಲಿಯೂ ಹೊಸಬರ ಸಿನಿಮಾಗಳು ಈ ವರ್ಷ ಸೊತ್ತಿದೆ ಹೆಚ್ಚು. ಆದರೂ ಈ ವಾರ ಕನ್ನಡದಲ್ಲಿ ಹೊಸಬರ ಐದು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

  ಶುಭ ಪೂಂಜಾ ನಟನೆಯ 'ಕೆಲವು ದಿನಗಳ ನಂತರ', 'ಸೂರ್ಯ ಇವ ವೃಕ್ಷ ಮಿತ್ರ', 'ಮಿಸ್ಟರ್ ಚೀಟರ್ ರಾಮಾಚಾರಿ', 'ಅರಣ್ಯಕಾಂಡ', ಹಾಗೂ 'ಮಸ್ತ್ ಕಲಂದರ್' ಸಿನಿಮಾಗಳು ನಾಳೆ ಚಿತ್ರಮಂದಿರಕ್ಕೆ ಬರಲಿವೆ. ಅಂದಹಾಗೆ, ನಾಳೆ ರಿಲೀಸ್ ಆಗುತ್ತಿರುವ ಈ ಸಿನಿಮಾಗಳ ಕೆಲವು ವಿವರ ಮುಂದಿದೆ ಓದಿ...

  ಫಸ್ಟ್ ಹಾಫ್ ರಿಪೋರ್ಟ್: ಆರು ತಿಂಗಳಲ್ಲಿ ಮಕಾಡೆ ಮಲಗಿದ ಚಿತ್ರಗಳೇ ಹೆಚ್ಚು.! ಫಸ್ಟ್ ಹಾಫ್ ರಿಪೋರ್ಟ್: ಆರು ತಿಂಗಳಲ್ಲಿ ಮಕಾಡೆ ಮಲಗಿದ ಚಿತ್ರಗಳೇ ಹೆಚ್ಚು.!

  ಕೆಲವು ದಿನಗಳ ನಂತರ

  ಕೆಲವು ದಿನಗಳ ನಂತರ

  `ಕೆಲವು ದಿನಗಳ ನಂತರ' ಹಲವು ಹೊಸ ವಿಚಾರಗಳನ್ನು ಇಟ್ಟುಕೊಂಡು ಈ ವಾರ ರಜತ ಪರದೆಯ ಮೇಲೆ ರಾರಾಜಿಸಲಿದೆ. ಸಾಮಾಜಿಕ ಕಳಕಳಿ ಜೊತೆಗೆ ಹಾರರ್ ಅಂಶ ಸಹ ಸೇರಿಸಿ ನಿರ್ದೇಶಕ ಶ್ರೀನಿ ಸಿನಿಮಾ ಮಾಡಿದ್ದಾರೆ. ಮುತುರಾಜ್, ವಸಂತ್ ಕುಮಾರ್ ಹಾಗೂ ಚಂದ್ರಕುಮಾರ್ ಜಂಟಿ ನಿರ್ಮಾಣದ ಚಿತ್ರಕ್ಕೆ ರಾಕಿ ಸೋನು ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಒಂದು ಅಪರೂಪದ ಹಾಡನ್ನು ಬರಹಗಾರ, ನಿರ್ದೇಶಕ ಬ ಲ ಸುರೇಶ್ ಅವರು ನೀಡಿದ್ದಾರೆ. ಶುಭ ಪೂಂಜಾ, ಪವನ್, ಲೋಕೇಶ್, ಜಗದೀಶ್, ಸೋನು ಪಾಟಿಲ್, ರಮ್ಯ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

  ಮುಖ್ಯ ಚಿತ್ರಮಂದಿರ : ಭೂಮಿಕಾ

  ಸೂರ್ಯ ಇವ ವೃಕ್ಷ ಮಿತ್ರ

  ಸೂರ್ಯ ಇವ ವೃಕ್ಷ ಮಿತ್ರ

  `ಸೂರ್ಯ ಇವ ವೃಕ್ಷ ಮಿತ್ರ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಅಣ್ಣಯ್ಯ.ಪಿ ನಿರ್ದೇಶಿಸಿದ್ದಾರೆ. ನಮ್ಮ ದೇಶದಲ್ಲಿ ಸುಮಾರು ಐನೂರು ವಿವಿಧ ಜಾತಿ ಜೈವಿಕ ಇಂಧನ ತೆಗೆಯುವ ಮರಗಳಿವೆ. ನಮ್ಮ ಕರ್ನಾಟಕದಲ್ಲಿ ಸುಮಾರು 150 ರಿಂದ 200 ಜಾತಿ ಮರಗಳಿವೆ. ಮರ ಹೆಚ್ಚಾದರೆ ಮಳೆ ಹೆಚ್ಚಾಗುತ್ತದೆ ಎಂಬ ಸಾರಾಂಶವಿರುವನ್ನು ಸಿನಿಮಾ ಹೊಂದಿದೆಯಂತೆ.

  ಬೆಂಗಳೂರು, ಶಿವಮೊಗ್ಗ ಹಾಗೂ ಹಾಸನದಲ್ಲಿ ಈ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ಸಲ್ಮಾನ್, ರಾಧಾ, ಗಿರೀಶ್, ಚಂದ್ರಕಲಾ ಮೋಹನ್, ಯತಿರಾಜ್, ರಮೇಶ್ ಪಂಡಿತ್, ಬಿ.ರಾಮಮೂರ್ತಿ, ಗಿರಿಜಾ ಲೋಕೇಶ್ ಸೇರಿದಂತೆ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ಮುಖ್ಯ ಚಿತ್ರಮಂದಿರ : ಸ್ವಪ್ನ

   ಅರ್ಧ ವರ್ಷ ಫ್ಲಾಪ್ ಶೋ ಗುರು: ಇದಕ್ಕೆ ಕಾರಣ ಏನಿರಬಹುದು.? ಅರ್ಧ ವರ್ಷ ಫ್ಲಾಪ್ ಶೋ ಗುರು: ಇದಕ್ಕೆ ಕಾರಣ ಏನಿರಬಹುದು.?

  ಮಿಸ್ಟರ್ ಚೀಟರ್ ರಾಮಾಚಾರಿ

  ಮಿಸ್ಟರ್ ಚೀಟರ್ ರಾಮಾಚಾರಿ

  ಪರ್ವಿಕ್ ಮೀಡಿಯಾ ಲಾಂಛನದಲ್ಲಿ ಪ್ರವೀಣ ರವೀಂದ್ರ ಕುಲಕರ್ಣಿ ಅವರು ನಿರ್ಮಿಸಿರುವ `ಮಿಸ್ಟರ್ ಚೀಟರ್ ರಾಮಾಚಾರಿ` ಚಿತ್ರ ಈ ವಾರ ರಾಜ್ಯಾದ್ಯಂತ ರಿಲೀಸ್ ಆಗಲಿದೆ. ಚಿತ್ರದ ತಾರಾಬಳಗದಲ್ಲಿ ರಾಮಾಚಾರಿ, ಶಾಲಿನಿ, ಮೇಘನ, ರಾಶಿ ಮೇಘನ, ಕ್ಯಾಪ್ಟನ್ ಚೌಧರಿ, ರಾಮಾಂಜನೇಯಲು ಮುಂತಾದವರಿದ್ದಾರೆ. ರಾಮಾಚಾರಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪ್ರದ್ಯೋತನ್ ಸಂಗೀತ ನೀಡಿದ್ದಾರೆ. ವಿಜಯಕುಮಾರ್ ಎಸ್.ವಿಕೆ ಛಾಯಾಗ್ರಹಣ ಹಾಗೂ ಬಿ ಎಸ್ ಪಿ ರಾಯ್ ಅವರ ಸಂಕಲನ ಚಿತ್ರಕ್ಕಿದೆ.

  ಮುಖ್ಯ ಚಿತ್ರಮಂದಿರ : ಭೂಮಿಕಾ (2 ಪ್ರದರ್ಶನ) ಅಭಿನಯ (1 ಪ್ರದರ್ಶನ)

   ಮಸ್ತ್ ಕಲಂದರ್

  ಮಸ್ತ್ ಕಲಂದರ್

  'ಮಸ್ತ್ ಕಲಂದರ್' ಸಿನಿಮಾ ಕೂಡ ನಾಳೆ ರಿಲೀಸ್ ಆಗುತ್ತಿದೆ. ಸ್ವಾಮಿ ಫ್ಯಾಮಿಲಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ರಾಜ್‍ ಕುಮಾರ್ ಆದಿತ್ಯ-ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ನಿತಿನ್, ಸ್ವರೂಪಿಣಿ, ಶ್ರೀಧರ್, ಸ್ವಾತಿ, ಗಿರಿ, ರಿಷಿಕುಮಾರಸ್ವಾಮಿಜಿ, ರಾಕ್‍ಲೈನ್ ಸುಧಾಕರ್, ರಜನಿ ಕಾಂತ, ಲೋಕೇಶ್, ಮುಂತಾದವರಿದ್ದಾರೆ.

  ಮುಖ್ಯ ಚಿತ್ರಮಂದಿರ : ಮೂವಿ ಲ್ಯಾಂಡ್

  ಅರಣ್ಯಕಾಂಡ

  ಅರಣ್ಯಕಾಂಡ

  ಅನಿಲ್ ಬ್ರಹ್ಮಾವರ್ - ಲಕ್ಷ್ಮಿ ಅನಿಲ್ ನಿರ್ಮಾಣದ ‘ಅರಣ್ಯಕಾಂಡ' ಪ್ರಯೋಗಾತ್ಮಕ ಚಿತ್ರವು ಈ ವಾರ ಬಿಡುಗಡೆಯಾಗುತ್ತಿದೆ. ರಘುನಂದನ್ ಎಸ್ -ನಿರ್ದೇಶನದ ಈ ಚಿತ್ರದಲ್ಲಿ ಅಮರ್, ಅರ್ಚನ ಕೊಟ್ಟಿಗೆ, ಗುರುರಾಜ್ ಶೆಟ್ಟಿ, ತಕ್ಕಡೆ ಪವನ್ ದಾಮೋದರ್, ಆಯುಶ್, ಮುನಿಪ್ರಸಾದ್, ಚಂದನ್ ರಾವ್, ಸುಷ್ಮಗೌಡ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ನಾಯಕ ಒಬ್ಬ ಬುದ್ದಿವಂತ ಕಳ್ಳನಾಗಿ ಹಾಗೂ ನಾಯಕಿ ವಾರಪತ್ರಿಕೆಯ ಪತ್ರಕರ್ತೆ ಪಾತ್ರವನ್ನು ಮಾಡಿದ್ದಾರೆ.

  English summary
  5 kannada movies are releasing on June 21st. 'Kelavu Dinagala Nanthara', 'MR Cheater Ramachari', 'Aranya kanda' and 'Mast Kalandar' movies are releasing Tomorrow (June 21st)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X