Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ 5 ವಿಷ್ಯ ತಿಳಿದು 'ಐ ಲವ್ ಯೂ' ನೋಡೋದಕ್ಕೆ ನಿರ್ಧರಿಸಿ.!
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾ ಜೂನ್ 14 ರಂದು ಅಂದ್ರೆ ಇದೇ ವಾರ ಚಿತ್ರಮಂದಿರಕ್ಕೆ ಬರ್ತಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಉಪ್ಪಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಹವಾ ಸ್ವಲ್ಪ ಜೋರಾಗಿಯೇ ಇದೆ.
ರಿಲೀಸ್ ಗೂ ಮುಂಚೆ ಭಾರಿ ಸದ್ದು ಮಾಡುತ್ತಿರುವ ಈ ಸಿನಿಮಾ, ಟ್ರೈಲರ್ ನಿಂದಲೇ ಸಖತ್ ಹವಾ ಉಂಟು ಮಾಡಿತ್ತು. ಉಪ್ಪಿ ಸ್ಟೈಲ್ ಡೈಲಾಗ್ಸ್, ರಚಿತಾ ರಾಮ್ ಅವರ ಬೋಲ್ಡ್ ಆಕ್ಟಿಂಗ್, ಪ್ರೀತಿ ಬಗ್ಗೆ ಸೆನ್ಸಾರ್ ಲೆಸ್ ಕಾನ್ಸೆಪ್ಟ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
'ಐ ಲವ್ ಯೂ' ಹಾಡಿನ ಬಗ್ಗೆ ಪ್ರಿಯಾಂಕ ತೀವ್ರ ಬೇಸರ : ಚಂದ್ರು, ರಚಿತಾ ಮಾಡಿದ್ದು
ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು ಕೂಡ ಐ ಲವ್ ಯೂ ಸಿನಿಮಾದ ಬಗ್ಗೆ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಕನ್ನಡ ಇಂಡಸ್ಟ್ರಿಯ ಟ್ರೆಂಡ್ ಬದಲಿಸುವ ಸಿನಿಮಾ ಆಗಲಿದೆ ಎಂದು ಪ್ರಚಾರ ಮಾಡಿದ್ದಾರೆ. ಯಾರೇ ಎಷ್ಟೇ ಹೇಳಿದ್ರು ಈ ಸಿನಿಮಾ ನೋಡೋಕೆ ಒಂದಿಷ್ಟು ಕಾರಣಗಳು ಇರಬೇಕು ಅಲ್ವಾ? ಮುಂದೆ ಓದಿ....

ಉಪೇಂದ್ರ ಶೈಲಿಯ ಸಿನಿಮಾ
ಸಿನಿಮಾ ಟೈಟಲ್, ಟ್ರೈಲರ್, ಡೈಲಾಗ್, ಸ್ಕ್ರೀನ್ ಪ್ಲೇ, ದೃಶ್ಯಗಳು, ಹೀರೋಯಿನ್ಸ್, ಉಪ್ಪಿ ಕ್ಯಾರೆಕ್ಟರ್ ಇದೆಲ್ಲ ಗಮನಿಸುತ್ತಿದ್ದರೇ ಇದು ಪಕ್ಕಾ ಉಪೇಂದ್ರ ಅವರ ಶೈಲಿಯ ಸಿನಿಮಾ ಎಂಬ ಕುತೂಹಲ ಕಾಡದೇ ಇರಲ್ಲ. ಈ ಎಲಿಮೆಂಟ್ಸ್ ಗಳಿಂದಲೇ ಉಪ್ಪಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ.
'KGF' ಗಿಂತ ಅಧಿಕ ಚಿತ್ರಮಂದಿರಗಳಲ್ಲಿ 'ಐ ಲವ್ ಯೂ'!

ಟ್ರೈಲರ್ ಮಾಡಿದ ಹವಾ
ಉಪೇಂದ್ರ ಸಿನಿಮಾ ಅಂದ್ರೆನೇ ಹಾಗೆ, ರಾ ಸ್ಟೈಲ್ ಮೇಕಿಂಗ್ ಗಮನ ಸೆಳೆಯುತ್ತೆ. ಆರ್ ಚಂದ್ರು ನಿರ್ದೇಶನದ ಈ ಚಿತ್ರದಲ್ಲೂ ಅಂತಹದ್ದೇ ಮೇಕಿಂಗ್ ಟ್ರೈಲರ್ ನಲ್ಲಿ ಕಾಣುತ್ತಿದೆ. ಲವ್ ಅಂದ್ರೆ ಏನು ಎಂದು ಓಪನ್ ಆಗಿ ಹೇಳಲು ಹೊರಟಿರುವ ಈ ಸಿನಿಮಾ, ಇದೇ ವಿಚಾರಕ್ಕೆ ನಿರೀಕ್ಷೆ ಹುಟ್ಟುಹಾಕಿದೆ. ಪ್ರೀತಿ ಬಗ್ಗೆ ಉಪ್ಪಿ ಹೇಳಿರುವುದು ಸಾಕಷ್ಟಿದೆ. ಇದು ಬರಿ ಟ್ರೈಲರ್, ಸಿನಿಮಾದಲ್ಲಿ ಮತ್ತೇನಿದೆ ಎಂಬ ಆತುರ ಅಭಿಮಾನಿಗಳದ್ದು.
ರಚ್ಚು ಮೇಲೆ ಫ್ಯಾನ್ಸ್ ಬೇಸರ: ಅಭಿಮಾನಿಗಳಿಗಾಗಿ 'ಖಡಕ್' ನಿರ್ಧಾರ ಘೋಷಿಸಿದ ಬುಲ್ ಬುಲ್

ರಚಿತಾ ರಾಮ್ ಬೋಲ್ಡ್
ಡಿಂಪಲ್ ಕ್ವೀನ್ ರಚಿತಾ ರಾಮ್ ಇದೇ ಮೊದಲ ಬಾರಿಗೆ ಇಷ್ಟೊಂದು ಬೋಲ್ಡ್ ಆಗಿ ನಟಿಸಿದ್ದಾರೆ. ಇಂತಹ ಪಾತ್ರ ಯಾಕೆ ಒಪ್ಪಿಕೊಂಡರು ಅಂದ್ರೆ ಚಿತ್ರದ ಕಥೆ ಅಷ್ಟು ಇಷ್ಟು ಆಯ್ತು ಅಂತಾರೆ. ಇದು ಸಹಜವಾಗಿ ನಿರೀಕ್ಷೆ ಮೂಡಿಸಿದೆ. ಇನ್ನು ಈ ರೀತಿ ಪಾತ್ರ ಮತ್ತೆ ಮಾಡಲ್ಲ ಎಂದಿರುವುದು, ಉಪೇಂದ್ರ ಪತ್ನಿ ರಚಿತಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದೆಲ್ಲವೂ ಸಿನಿಮಾದಲ್ಲಿ ಅಂತಹದ್ದೇನಿದೆ ಎಂಬ ಪ್ರಶ್ನೆ ಹುಟ್ಟಿಸಿದೆ.

ಆರ್.ಚಂದ್ರು ಸಿನಿಮಾ
ತಾಜ್ ಮಹಾಲ್, ಚಾರ್ ಮಿನರ್, ಮೈಲಾರಿ ಅಂತಹ ಕ್ಲಾಸಿಕ್ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ಆರ್.ಚಂದ್ರು ಈ ಲವ್ ಯೂ ಅಂತ ಟಿಪಿಕಲ್ ಲವ್ ಸ್ಟೋರಿ ಹೇಳಲು ಮುಂದಾಗಿದ್ದಾರೆ. ಈ ಹಿಂದೆ ಉಪ್ಪಿ ಮತ್ತು ಚಂದ್ರು ಜೋಡಿಯಲ್ಲಿ ಬ್ರಹ್ಮ ಸಿನಿಮಾ ಬಂದಿತ್ತು. ಅದನ್ನ ಮೀರಿಸುವಂತಹ ಸಿನಿಮಾ ಇದಾಗಲಿದೆ ಎಂಬ ಭರವಸೆ ಮೂಡಿಸಿದ್ದಾರೆ ಆರ್.ಚಂದ್ರು.

ಟ್ರೆಂಡ್ ಬದಲಿಸುವ ಚಿತ್ರವಂತೆ
ಐ ಲವ್ ಯೂ ಚಿತ್ರಕ್ಕೆ ಸಿಕ್ಕಿರುವ ಪ್ರಚಾರ ಜೋರಾಗಿದೆ. ಉಪೇಂದ್ರ ಅವರ ಎ, ಉಪೇಂದ್ರ ಅಂತಹ ಚಿತ್ರಗಳನ್ನ ಹೋಲುವಂತಹ ಸಿನಿಮಾ ಇದು ಬಿಂಬಿಸಲಾಗಿದೆ. ರಚಿತಾ ರಾಮ್ ಪಾತ್ರ ಎಲ್ಲರ ಮನಸ್ಸಿನಲ್ಲಿ ಉಳಿಯುತ್ತಂತೆ. ಇಡೀ ಸಿನಿಮಾನೇ ಅದ್ಭುತ ಎನ್ನುವಂತಿರುತ್ತಂತೆ. ಈ ಚಿತ್ರ ಕನ್ನಡ ಇಂಡಸ್ಟ್ರಿಯಲ್ಲಿ ಟ್ರೆಂಡ್ ಬದಲಿಸಿದರೂ ಅಚ್ಚರಿಯಿಲ್ಲ ಎಂಬ ಮಾತು ಚಿತ್ರತಂಡದಿಂದ ಬರ್ತಿದೆ. ಇಷ್ಟೆಲ್ಲಾ ಕೇಳಿದ್ಮೇಲೆ ಐ ಲವ್ ಯೂ ಸಿನಿಮಾ ಒಮ್ಮೆಯಾದರೂ ನೋಡಬೇಕು ಅಲ್ವಾ ಎಂಬ ಭಾವನೆ ಸಿನಿಪ್ರಿಯರಲ್ಲಿ ಬರದೇ ಇರಲ್ಲ.