»   » ಕ್ರೇಜಿಪುತ್ರನ 'ಬೃಹಸ್ಪತಿ' ನೋಡೋಕೂ ಮುಂಚೆ ಈ ಅಂಶಗಳನ್ನ ಗಮನಿಸಿ

ಕ್ರೇಜಿಪುತ್ರನ 'ಬೃಹಸ್ಪತಿ' ನೋಡೋಕೂ ಮುಂಚೆ ಈ ಅಂಶಗಳನ್ನ ಗಮನಿಸಿ

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯಿಸಿದ್ದ 'ಸಾಹೇಬ', ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಆದ್ರೆ, ಮನೋರಂಜನ್ ಅಭಿನಯ, ಡ್ಯಾನ್ಸ್, ಫೈಟ್ಸ ಎಲ್ಲವೂ ಚಿತ್ರಪ್ರೇಮಿಗಳಿಗೆ ಇಷ್ಟವಾಯಿತು. ಹೀಗಾಗಿ, ರವಿಪುತ್ರನ ಎರಡನೇ ಚಿತ್ರದ ಮೇಲೆ ಸಹಜವಾಗಿ ನಿರೀಕ್ಷೆ ಹೆಚ್ಚಿದೆ.

ನಿರೀಕ್ಷೆಯಂತೆ ಮನೋರಂಜನ್ ಅಭಿನಯದ ಎರಡನೇ ಚಿತ್ರ 'ಬೃಹಸ್ಪತಿ' ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಟ್ರೈಲರ್ ಮತ್ತು ಗೆಟಪ್ ಮೂಲಕ ಈ ಸಿನಿಮಾ ಸೌಂಡ್ ಮಾಡ್ತಿದೆ. ಇದೇ ವಾರ (ಜನವರಿ 5) ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ.

'ಬೃಹಸ್ಪತಿ' ನೋಡಿ ಅದ್ಧೂರಿ ಸ್ವಾಗತ ಕೋರಿದ ಕನ್ನಡಿಗರು

ಹಾಗಿದ್ರೆ, 'ಬೃಹಸ್ಪತಿ' ಚಿತ್ರದ ಮೇಲೆ ಅಭಿಮಾನಿಗಳಿಗೇಕೆ ಇಷ್ಟು ನಿರೀಕ್ಷೆ. ಯಾವ ಮುಖ್ಯ ಅಂಶಗಳಿಗಾಗಿ ಈ ಸಿನಿಮಾ ನೋಡಬೇಕು ಎಂದು ಕಾಯುತ್ತಿದ್ದಾರೆ ಎಂಬುದನ್ನ ಪಟ್ಟಿ ಮಾಡಲಾಗಿದೆ. ಮುಂದೆ ಓದಿ....

ಮನೋರಂಜನ್ 2ನೇ ಚಿತ್ರ

ಮನೋರಂಜನ್ ಮೊದಲ ಸಿನಿಮಾ 'ಸಾಹೇಬ' ನಂತರ ಅಭಿನಯಿಸಿರುವ ಎರಡನೇ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಹೇಗೆ ಅಭಿನಯಿಸಿದ್ದಾರೆ ಎಂಬ ಕುತೂಹಲ ಕಾಡುತ್ತಿದೆ. ಇನ್ನು ಚೊಚ್ಚಲ ಚಿತ್ರಕ್ಕಿಂತ ಈ ಚಿತ್ರದಲ್ಲಿ ಹೆಚ್ಚು ರಂಜಿಸಬಹುದು ಎಂಬ ಲೆಕ್ಕಾಚಾರ ಕೂಡ ಪ್ರೇಕ್ಷಕರಲ್ಲಿದೆ.

ನಂದಕಿಶೋರ್ ಡೈರೆಕ್ಷನ್

'ವಿಕ್ಟರಿ', 'ಅಧ್ಯಕ್ಷ', 'ರನ್ನ', ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ ನಂದಕಿಶೋರ್ ಅವರ ಸಿನಿಮಾ ಎನ್ನುವುದು ಮತ್ತೊಂದು ಪ್ಲಸ್ ಪಾಯಿಂಟ್.

'ವಿಐಪಿ' ರೀಮೇಕ್

ಅಂದ್ಹಾಗೆ, ಕನ್ನಡದ 'ಬೃಹಸ್ಪತಿ' ತಮಿಳಿನ 'ವಿಐಪಿ' ಚಿತ್ರದ ರೀಮೇಕ್. ಹೀಗಾಗಿ, ತಮಿಳಿನಲ್ಲಿ ನೋಡಿರುವ ಜನ, ಕನ್ನಡದಲ್ಲಿ ಹೇಗೆ ಬಂದಿದೆ ಎಂಬ ಕುತೂಹಲದಿಂದ ನೋಡಲು ಚಿಂತಿಸಿದ್ದಾರೆ. ಅಲ್ಲಿ ಧನುಶ್ ಮಾಡಿದ್ದ ಪಾತ್ರವನ್ನ, ಇಲ್ಲಿ ಮನೋರಂಜನ್ ನಿರ್ವಹಿಸಿದ್ದು, ಯಾವ ಭಾಷೆಯಲ್ಲಿ ಚೆನ್ನಾಗಿದೆ ಎಂಬ ಪ್ರತಿಷ್ಠೆಯೂ ಅಲ್ಲೆಗಳೆಯುವಂತಿಲ್ಲ.

ರವಿಚಂದ್ರನ್ ಪುತ್ರ ಮನೋರಂಜನ್ ಎರಡನೇ ಚಿತ್ರದ ನಾಯಕಿ ಇವರೇ ನೋಡಿ

ಬಿಗ್ ಬ್ಯಾನರ್

'ಬೃಹಸ್ಪತಿ' ಚಿತ್ರಕ್ಕೆ ಬಂಡವಾಳ ಹಾಕಿರುವುದು ರಾಕ್ ಲೈನ್ ವೆಂಕಟೇಶ್. ರಾಕ್ ಲೈನ್ ಪ್ರೊಡಕ್ಷನ್ ಕನ್ನಡದ ಅತಿ ದೊಡ್ಡ ನಿರ್ಮಾಣ ಸಂಸ್ಥೆ. ಸಿನಿಮಾದ ಮೇಕಿಂಗ್, ಅದ್ಧೂರಿತನದ ಮೇಲೆ ವೀಕ್ಷಕರಿಗೆ ವಿಶ್ವಾಸ ಹೆಚ್ಚಿದೆ. ಇದಕ್ಕು ಮುಂಚೆ ರವಿಚಂದ್ರನ್ ಅಭಿನಯದ ಹಲವು ಚಿತ್ರಗಳನ್ನ ರಾಕ್ ಲೈನ್ ನಿರ್ಮಾಣ ಮಾಡಿದ್ದಾರೆ,

ಟ್ರೈಲರ್ ಮೇಲಿನ ಭರವಸೆ

'ಬೃಹಸ್ಪತಿ' ಚಿತ್ರದ ಟ್ರೈಲರ್ ಮೇಲೆ ಭರವಸೆ ಮೂಡಿಸಿದೆ. ಈ ಚಿತ್ರದಲ್ಲಿ ಮನೋರಂಜನ್ ಅವರ ಪಾತ್ರಕ್ಕೆ ಹೆಚ್ಚಿನ ಆಧ್ಯತೆ ಇದ್ದು, ಡಿಫರೆಂಟ್ ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಮಸ್ತ್, ಡೈಲಾಗ್, ಸೂಪರ್ ಡ್ಯಾನ್ಸ್ ಹಾಗೂ ಜಬರ್ ದಸ್ತ್ ಫೈಟ್ಸ್ ಕೂಡ ಗಮನ ಸೆಳೆಯುತ್ತಿದೆ.

ವಿಡಿಯೋ : ಮನೋರಂಜನ್ 'ಬೃಹಸ್ಪತಿ' ಚಿತ್ರದ ಟೀಸರ್ ಬಿಡುಗಡೆ

ಸಿಕ್ಸ್ ಪ್ಯಾಕ್

ಹೀರೋಗಳಿಗೆ ಸಿಕ್ಸ್ ಪ್ಯಾಕ್ ಇರ್ಬೇಕು ಎನ್ನುವುದು ಈಗನಿ ಟ್ರೆಂಡ್. ಇದನ್ನ ಫಾಲೋ ಮಾಡಿರುವ ಮನೋರಂಜನ್ ಎರಡನೇ ಚಿತ್ರದಲ್ಲೇ ಕಾರ್ಯರೂಪಕ್ಕೆ ತಂದಿದ್ದಾರೆ. ಬೃಹಸ್ಪತಿ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಮಾಡಿರುವ ಮನೋರಂಜನ್ ಪ್ರೇಕ್ಷಕರನ್ನ ಆಕರ್ಷಣೆ ಮಾಡ್ತಿದ್ದಾರೆ.

English summary
kannada actor manoranjan starrer 'brihaspati' is releasing on friday (january 5th) all Over Karnataka. The Movie also features mishti chakravarthy. Here Are 5 Reasons As to why you should watch 'brihaspati'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X