Just In
Don't Miss!
- Automobiles
ಗ್ಲಾಸಿ ಆರೇಂಜ್ ವ್ಯಾರ್ಪ್ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್ಯುವಿ
- Sports
ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್
- News
ಕೊರೊನಾ ಸೋಂಕು ಹೆಚ್ಚಳ: ಮಹಾರಾಷ್ಟ್ರ ಸಿಎಂ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು
- Finance
2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುದೀಪ್ ಅಭಿಮಾನಿ ಬಳಗ ಸೇರಿದ 5000 ಮಹಿಳೆಯರು!
ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಸುದೀಪ್, ಹೊರ ರಾಜ್ಯ, ದೇಶಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.
ಬಹುತೇಕ ನಟರಿಗೆ ಅಭಿಮಾನಿ ಸಂಘಗಳು ಇರುತ್ತವೆ, ಇದು ಬಹುತೇಕ ಸಹಜ ಸಹ. ಬಹುತೇಕ ನಟರಿಗೆ ಪುರುಷ ಅಭಿಮಾನಿ ಸಂಘಗಳು ಮಾತ್ರವೇ ಇರುತ್ತವೆ. ಆದರೆ ಸುದೀಪ್ ಅವರಿಗೆ ಮಹಿಳಾ ಅಭಿಮಾನಿ ಸಂಘವೂ ಇದೆ. ಈ ರೀತಿ ಮಹಿಳಾ ಅಭಿಮಾನಿ ಸಂಘ ಹೊಂದಿರುವ ವಿರಳ ನಟರಲ್ಲಿ ಸುದೀಪ್ ಸಹ ಒಬ್ಬರು.
5000 ಮಹಿಳಾ ಸದಸ್ಯರೇ ಹೊಂದಿರುವ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ ಮಹಿಳಾ ಮಹಾ ಸೇನೆಯನ್ನು ಮಹಿಳೆಯರೇ ಸೇರಿ ಕಟ್ಟಿದ್ದಾರೆ. ಈ ಸೇನೆಗೆ 'ಮಹಾಸೇವನ ಬಾದ್‌ಷಾ ಕಿಚ್ಚ ಸುದೀಪ್ ಮಹಿಳಾ ಸೇನೆ' ಎಂದು ಹೆಸರಿಡಲಾಗಿದೆ. ಈ ರೀತಿ 5000 ಮಹಿಳೆಯರೇ ಇರುವ ಅಭಿಮಾನಿ ಸಂಘ ಭಾರತದಲ್ಲಿಯೇ ಪ್ರಥಮ ಎನ್ನಲಾಗುತ್ತಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಮಹಿಳೆಯರು ಸೇರಿ ಈ ಸಂಘ ಕಟ್ಟಿದ್ದು, ಈ ಮಹಿಳಾ ಅಭಿಮಾನಿ ಸಂಘವು ಕಿಚ್ಚ ಚಾರಿಟೇಬಲ್ ಸೊಸೈಟಿ ಅಡಿಯಲ್ಲಿ ಕೆಲಸ ಮಾಡಲಿದೆ. ತಮ್ಮ ಸಂಘದ ಮುಖ್ಯ ಮಹಿಳೆಯರು ವಿಡಿಯೋ ಒಂದನ್ನು ಸಹ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಟ ಸುದೀಪ್, 'ಇದು ಬಹಳ ಮಧುರವಾದುದ್ದು, ಎಲ್ಲರಿಗೂ ಧನ್ಯವಾದ' ಎಂದು ಕೈಮುಗಿದಿದ್ದಾರೆ.
ನಟ ಸುದೀಪ್ ಅವರ ಬೆಂಬಲದೊಂದಿಗೆ ಅಭಿಮಾನಿಗಳು ನಡೆಸುತ್ತಿರುವ 'ಸುದೀಪ ಚಾರಿಟೇಬಲ್ ಟ್ರಸ್ಟ್' ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ಬಗ್ಗೆ ಚಾರಿಟೇಬಲ್ ಟ್ರಸ್ಟ್ ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ, ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳಲಾಗುತ್ತದೆ.
ನಟ ಸುದೀಪ್ ಕನ್ನಡ ಚಿತ್ರರಂಗ ಪ್ರವೇಶಿಸಿ 25 ವರ್ಷಗಳಾಗಿದ್ದು, ಕೆಲವು ದಿನಗಳ ಹಿಂದಷ್ಟೆ ಈ ಸಡಗರವನ್ನು ದುಬೈ ನ ಬುರ್ಜ್ ಖಲೀಫಾ ಐಶಾರಾಮಿ ಹೋಟೆಲ್‌ನಲ್ಲಿ ಆಚರಿಸಲಾಯಿತು. ಸುದೀಪ್ ಅಭಿನಯದ ಕೋಟಿಗೊಬ್ಬ 3 ಹಾಗೂ ವಿಕ್ರಾಂತ್ ರೋಣ ಬಿಡುಗಡೆಗೆ ತಯಾರಾಗಿದೆ. ಬಿಗ್‌ಬಾಸ್ ಸೀಸನ್ 8 ಸಹ ಶೀಘ್ರದಲ್ಲಿಯೇ ಆರಂಭವಾಗಲಿದೆ.