»   » ಹುಟ್ಟುಹಬ್ಬ ಅಂತ ಆರ್.ಜಿ.ವಿಗೆ ವಿಶ್ ಮಾಡಿದ್ರೀ..ಜೋಕೆ..!

ಹುಟ್ಟುಹಬ್ಬ ಅಂತ ಆರ್.ಜಿ.ವಿಗೆ ವಿಶ್ ಮಾಡಿದ್ರೀ..ಜೋಕೆ..!

Posted By:
Subscribe to Filmibeat Kannada

ಹುಟ್ಟುಹಬ್ಬ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ. ಎಲ್ಲರೂ ತಮ್ಮ ತಮ್ಮ ಬರ್ತಡೆಯನ್ನ ದೊಡ್ಡದಾಗಿ ಸೆಲೆಬ್ರೇಟ್ ಮಾಡ್ಬೇಕು ಅಂತ ಕನಸು ಕಾಣ್ತಾರೆ. ಅದ್ರಲ್ಲೂ ಸೆಲೆಬ್ರಿಟಿಗಳಂತೂ, ತಮ್ಮ ಬರ್ತಡೆಯನ್ನ ಗ್ರ್ಯಾಂಡಾಗಿ ಅಭಿಮಾನಿಗಳೊಂದಿಗೆ ಆಚರಿಸುತ್ತಾರೆ.

ಆದ್ರೆ, ರಾಮ್ ಗೋಪಾಲ್ ವರ್ಮಾ ಹಾಗಲ್ಲ. ಊರಿಗೆ ಒಂದು ದಾರಿ ಆದ್ರೆ, ವರ್ಮಾ ರದ್ದೇ ಬೇರೆ. ಹುಟ್ಟುಹಬ್ಬ ಅಂದ್ರೆ ರಾಮ್ ಗೋಪಾಲ್ ವರ್ಮಾಗೆ ಅಲರ್ಜಿ. ಯಾರಾದ್ರೂ 'ಹ್ಯಾಪಿ ಬರ್ತಡೆ' ಅಂದ್ರೆ ಉರಿದು ಬೀಳ್ತಾರೆ.

ಬೇಕಾದ್ರೆ, ಇಂದು ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ಗಳನ್ನ ನೋಡಿ. ಇವತ್ತು ವರ್ಮಾ ಸಾಹೇಬರ ಹುಟ್ಟುಹಬ್ಬ. ಸಾವಿರಾರು ಅಭಿಮಾನಿಗಳು ಅವರಿಗೆ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ಆದ್ರೆ, ಅದಕ್ಕೆಲ್ಲಾ ಕೆಂಡಮಂಡಲವಾಗಿರುವ ವರ್ಮಾ, ಟ್ವಿಟ್ಟರ್ ನಲ್ಲಿ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿ.....

53ನೇ ವಸಂತಕ್ಕೆ ಕಾಲಿಟ್ಟ ರಾಮ್ ಗೋಪಾಲ್ ವರ್ಮಾ

ನಿರ್ದೇಶಕ ಕಮ್ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಇಂದು 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಾಗಂತ ಅವರಿಗೆ 'ಹ್ಯಾಪಿ ಬರ್ತಡೆ' ಅಂತ ಟ್ವೀಟ್ ಮಾಡಿದ್ರೀ...ಜೋಕೆ...! ಯಾಕಂದ್ರೆ, ವರ್ಮಾ ಅವರಿಗೆ ವಿಶ್ ಮಾಡೋರನ್ನ ಕಂಡರೆ ಆಗಲ್ಲ. [ವರ್ಮಾ ಸಾಹೇಬ್ರೇ ಇದೆಲ್ಲಾ ನಿಮ್ಗೆ ಬೇಕಾ?]

''ನಾನು ಎಂದೋ ಸತ್ತು ಹೋಗಿದ್ದೇನೆ''

''ನಾನು ಮಾಡಿರುವ ಪಾಪಗಳಿಗೆ ಎಂದೋ ಸತ್ತು ಹೋಗಿದ್ದೇನೆ. ನಾನು ಮತ್ತೊಮ್ಮೆ ಹುಟ್ಟಿ ಬರುತ್ತೇನೆ ಅನ್ನುವ ನಂಬಿಕೆ ಕೂಡ ನನಗಿಲ್ಲ. ಹೀಗಾಗಿ ನನ್ನ ಬರ್ತಡೆಗೆ ವಿಶ್ ಮಾಡಿ ಟೈಮ್ ವೇಸ್ಟ್ ಮಾಡ್ಬೇಡಿ'' ಅಂತ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಯಾರು ವಿಶ್ ಮಾಡಿದ್ರೇನು..?!

''ನನ್ನ ಆತ್ಮೀಯರ ಶುಭಹಾರೈಕೆಯಿಂದ ಒಳ್ಳೆಯದಾಗೋಲ್ಲ. ಹಾಗೇ, ನನ್ನನ್ನ ದ್ವೇಷಿಸುವವರ ಶಾಪದಿಂದ ಕೆಟ್ಟದಾಗುವುದಿಲ್ಲ.'' - ರಾಮ್ ಗೋಪಾಲ್ ವರ್ಮಾ [ಜೂ.NTR-ಪ್ರಿನ್ಸ್ ಮಹೇಶ್ ಮಧ್ಯೆ ಬತ್ತಿಯಿಟ್ಟ ವರ್ಮಾ!]

'ಅನ್ ಹ್ಯಾಪಿ ಬರ್ತಡೆ'

''ನನ್ನ ಸೋ ಕಾಲ್ಡ್ ಹ್ಯಾಪಿ ಬರ್ತಡೆ ಇವತ್ತು ಅನ್ ಹ್ಯಾಪಿ ಬರ್ತಡೆ ಆಗಿದೆ.'' - ರಾಮ್ ಗೋಪಾಲ್ ವರ್ಮಾ [ಭಾರತ ಸೋತಿದಕ್ಕೆ ಟ್ವಿಟ್ಟರ್ ನಲ್ಲಿ ಪಟಾಕಿ ಹಚ್ಚಿದ ವರ್ಮಾ]

ಡೆತ್ ಡೇ ಸ್ಪೆಷಲ್

ಇಷ್ಟು ಸಾಲದು ಅಂತ ಖಾಸಗಿ ವಾಹಿನಿಯೊಂದಕ್ಕೆ ರಾಮ್ ಗೋಪಾಲ್ ವರ್ಮಾ, ಹುಟ್ಟುಹಬ್ಬದ ಪ್ರಯುಕ್ತ 'ಡೆತ್ ಡೇ' ಸ್ಪೆಷಲ್ ಸಂದರ್ಶನ ನೀಡಿದ್ದಾರೆ. ಅದರಲ್ಲಿ, ''ನನಗೆ ಯಾರಾದರೂ 'ಹ್ಯಾಪಿ ಬರ್ತಡೆ' ಅಂತ ವಿಶ್ ಮಾಡಿದ್ರೆ, ಅಲರ್ಜಿ ಆಗುತ್ತೆ. ಯಾಕಂದ್ರೆ, ಬರ್ತಡೆ ಬಂದ್ರೆ, ನಿಮ್ಮ ಆಯಸ್ಸಿನ ಒಂದು ವರ್ಷ ಕಳೆದು ಹೋದ ಹಾಗೆ. ಬರ್ತಡೆ ಸೆಲೆಬ್ರೇಟ್ ಮಾಡಿಕೊಳ್ಳುವವರು ಲೂಸರ್ಸ್. ಯಾಕಂದ್ರೆ, 20-30 ಜನ ಅವರಿಗೆ ಫೋನ್ ಮಾಡಿ ವಿಶ್ ಮಾಡುತ್ತಾರೆ ಅಂತ ಅವತ್ತು ಮಾತ್ರ ಅವರು ಸ್ಟಾರ್ ಆಗಿರುತ್ತಾರೆ'' ಅಂತ ಹೇಳಿದ್ದಾರೆ. ಅದರ ವಿಡಿಯೋ ಲಿಂಕ್ ಇಲ್ಲಿದೆ.

''ನಾನು ಗ್ಯಾರೆಂಟಿ ನರಕಕ್ಕೆ ಹೋಗುತ್ತೇನೆ''

''ಎಲ್ಲರೂ ನನಗೆ ಹ್ಯಾಪಿ ಬರ್ತಡೆ ಅಂತ ಹೇಳುವುದನ್ನ ನಾನು ಹೇಟ್ ಮಾಡುತ್ತೇನೆ. ನನ್ನ ಟ್ವಿಟ್ಟರ್ ಫಾಲೋವರ್ಸ್ 'ಹ್ಯಾಪಿ ಬರ್ತಡೆ' ಅಂತ ವಿಶ್ ಮಾಡುತ್ತಾರೆ. ಯಾಕಂದ್ರೆ ಅವರೆಲ್ಲಾ ನನ್ನನ್ನ ಹೇಟ್ ಮಾಡುತ್ತಾರೆ. ನನಗೆ ಗೊತ್ತು ನಾನು ಗ್ಯಾರೆಂಟಿ ನರಕಕ್ಕೆ ಹೋಗೋದು ಅಂತ. ನಾನು ಮಾಡಿರುವ ಪಾಪ ಅಂತದ್ದು. ನನ್ನ ಬರ್ತಡೆಯನ್ನ ಯಾರಾದ್ರೂ ಸೆಲೆಬ್ರೇಟ್ ಮಾಡಿದ್ರು ಅಂದ್ರೆ, ಅದು ನನ್ನ ಡೆತ್ ಡೇ ಸೆಲೆಬ್ರೇಟ್ ಮಾಡಿದ ಹಾಗೆ.'' ಅಂತೆಲ್ಲಾ ವರ್ಮಾ ಮಾತನಾಡಿದ್ದಾರೆ. ಹೀಗಾಗಿ, ಅವರಿಗೆ ವಿಶಸ್ ಕಳುಹಿಸುವ ಮುನ್ನ ಜಾಗರೂಕರಾಗಿರಿ.

English summary
Director Ram Gopal Varma is in news again for his controversial tweets. He has once again come up with the debatable topic called 'Birthday celebration'. RGV's shocking tweets on his birthday and death day has created a new debate in Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada