»   » ಟಿವಿ ಚಾನೆಲ್ ಶುರು ಮಾಡುತ್ತಿದ್ದಾರಂತೆ ನಟಿ ನಿಧಿ ಸುಬ್ಬಯ್ಯ.!

ಟಿವಿ ಚಾನೆಲ್ ಶುರು ಮಾಡುತ್ತಿದ್ದಾರಂತೆ ನಟಿ ನಿಧಿ ಸುಬ್ಬಯ್ಯ.!

By: ಫಿಲ್ಮಿಬೀಟ್ ಕನ್ನಡ ಡೆಸ್ಕ್
Subscribe to Filmibeat Kannada

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಿಧಿ ಸುಬ್ಬಯ್ಯ ಈಗ ಟಿವಿ ಚಾನೆಲ್ ಶುರು ಮಾಡುತ್ತಿದ್ದಾರೆ ಎಂದ ಕೂಡಲೆ ನೀವೆಲ್ಲರೂ ಕಣ್ಣರಳಿಸಬಹುದು. ಹಾಗೆ ಕಣ್ಣರಳಿಸಿ, ಬಾಯಿ ಮೇಲೆ ಬೆರಳಿಡುವ ಮುನ್ನ ಇದು ರಿಯಲ್ ಅಲ್ಲ, 'ರೀಲ್' ಸುದ್ದಿ ಅನ್ನೋದು ನಿಮಗೆ ನೆನಪಿರಲಿ.

ನೂತನ ಬಾಳಿಗೆ ಕಾಲಿಟ್ಟ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ

''ನಿಧಿ ಸುಬ್ಬಯ್ಯ ಟಿವಿ ಚಾನೆಲ್ ಓಪನ್ ಮಾಡುತ್ತಿದ್ದಾರೆ.!'' ಎಂದು ಸಾರಿ ಸಾರಿ ಹೇಳುತ್ತಿದೆ ಕನ್ನಡದ '5G' ಸಿನಿಮಾ ಪೋಸ್ಟರ್ ಗಳು... ಬೇಕಾದ್ರೆ ನೀವೂ ಒಮ್ಮೆ ನೋಡಿಬಿಡಿ...

5G Poster: Kannada Actress Nidhi Subbaiah to start a new channel

ನಿಧಿ ಸುಬ್ಬಯ್ಯ, 5G, 500 ರೂ. ನೋಟು: ಏನಿದು ಲಿಂಕ್?

''ಕರ್ನಾಟಕದ ಪ್ರತಿಯೊಬ್ಬ ಎಂಪ್ಲಾಯಿ ಹತ್ರಾನೂ, ಒಂದೊಂದು ರೂಪಾಯಿ ತಗೊಂಡು ಒಂದು ಟಿವಿ ಚಾನೆಲ್ ಓಪನ್ ಮಾಡ್ತೀನಿ... ಪಬ್ಲಿಕ್ ದೇ ದುಡ್ಡು, ಪಬ್ಲಿಕ್ಕಿಗೆ ನ್ಯೂಸ್... ನೋ ಡೀಲ್, ನೋ ಕಮಿಟ್ಮೆಂಟ್'' ಎಂಬ ಸಂದೇಶ ಹೊತ್ತಿರುವ, ನಿಧಿ ಸುಬ್ಬಯ್ಯ ನ್ಯೂಸ್ ಚಾನೆಲ್ ಲೋಗೋ ಹಿಡಿದಿರುವ '5G' ಚಿತ್ರದ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಂದ್ಹಾಗೆ, '5G' ಚಿತ್ರದಲ್ಲಿ ನಟಿ ನಿಧಿ ಸುಬ್ಬಯ್ಯರವರದ್ದು 'ನ್ಯೂಸ್ ಚಾನೆಲ್ ಓನರ್' ಅಥವಾ ನ್ಯೂಸ್ ರಿಪೋರ್ಟರ್ ಪಾತ್ರವೇ.? ಈ ಪ್ರಶ್ನೆಗೆ ಉತ್ತರ ನಮಗಂತೂ ಗೊತ್ತಿಲ್ಲ. ನಿರ್ದೇಶಕ ಗುರುವೇಂದ್ರ ಶೆಟ್ಟಿ ರವರನ್ನ ಕೇಳಿದರೆ 'ಅದೇ ಸಸ್ಪೆನ್ಸ್' ಎಂಬ ಉತ್ತರ ಕೊಡುತ್ತಾರೆ.

'ಗಾಂಧಿ'ಯಿಂದ 'ಮೋದಿ'ವರೆಗೂ ನಡೆಯುವ ಕಥೆಯೇ '5G'

ವಿಭಿನ್ನ ರೀತಿಯ ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿರುವ ಜಗದೀಶ್ ನಿರ್ಮಾಣದ ನಿಧಿ ಸುಬ್ಬಯ್ಯ, ಪ್ರವೀಣ್ ಮುಖ್ಯಭೂಮಿಕೆಯಲ್ಲಿರುವ '5G' ಇದೇ ಶುಕ್ರವಾರ (ಆಗಸ್ಟ್ 25)ಕ್ಕೆ ಬಿಡುಗಡೆ ಆಗಲಿದೆ.

English summary
Check out the new poster of Kannada Movie '5G'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada