»   » ಶಿವಣ್ಣನ 'ಅಂದರ್ ಬಾಹರ್' ಚಿತ್ರಕ್ಕೆ ಮುಹೂರ್ತ

ಶಿವಣ್ಣನ 'ಅಂದರ್ ಬಾಹರ್' ಚಿತ್ರಕ್ಕೆ ಮುಹೂರ್ತ

Posted By:
Subscribe to Filmibeat Kannada
Shivarajkumar Parvathi Menon
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ಅಂದರ್ ಬಾಹರ್, ಇದೇ ತಿಂಗಳು 12 (ಮಾರ್ಚ್ 12, 2012) ರಂದು ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತವನ್ನು ಆಚರಿಸಿಕೊಳ್ಳಲಿದೆ. ಶಿವಣ್ಣನಿಗೆ ನಾಯಕಿಯಾಗಿ ಮಲೆಯಾಳಂ ಬೆಡಗಿ ಪಾರ್ವತಿ ಮೆನನ್ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಶಿವಣ್ಣರ ಬಹುನಿರೀಕ್ಷಿತ 'ಶಿವ' ಚಿತ್ರದ ಚಿತ್ರೀಕರಣ ಮುಗಿದಿದೆ.

ಲೀಜೆಂಡ್ ಇಂಟರ್ ನ್ಯಾಷನಲ್ ಮೇಡನ್ ವೆಂಚರ್ ಬ್ಯಾನರ್ ನಲ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಫಣೀಶ್. ರಾಘವೇಂದ್ರ ರಾಜ್ ಕುಮಾರ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಘಣ್ಣ ದೀಪ ಬೆಳಗಲಿದ್ದು ಕ್ರೇಜಿಸ್ಟಾರ್ ರವಿಚಂದ್ರನ್ ಮುಹೂರ್ತಕ್ಕೆ ಕ್ಲಾಪ್ ಮಾಡಲಿದ್ದಾರೆ. ಜೊತೆಗೆ ಗೀತಾ ಶಿವರಾಜ್ ಕುಮಾರ್ ಕೂಡ ಭಾಗಿಯಾಗಲಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಟಿ ಪಾರ್ವತಿ ಮೆನನ್ ಅವರ ಆಕರ್ಷಕ ಭಾವಚಿತ್ರ ಆಮಂತ್ರಣ ಪತ್ರಿಕೆಯ ಪ್ರಮುಖ ಆಕರ್ಷಣೆಯಾಗಿದೆ. ಪಾರ್ವತಿ ಮೆನನ್ ಇದಕ್ಕೂ ಮೆದಲು ಕನ್ನಡದಲ್ಲಿ ಪುನೀತ್ ಜೋಡಿಯಾಗಿ ಮಿಲನ ಹಾಗೂ ಶ್ರೀನಗರ ಕಿಟ್ಟಿ ಜೋಡಿಯಾಗಿ ಮಳೆಯಿರಲಿ ಮಂಜೂ ಬರಲಿ ಚಿತ್ರಗಳಲ್ಲಿ ನಟಿಸಿದ್ದರು. ಒಟ್ಟಿನಲ್ಲಿ ಹೊಸ ನಿರೀಕ್ಷೆಯೊಂದಿಗೆ ಅಂದರ್ ಬಾಹರ್ ಸೆಟ್ಟೇರುತ್ತಿದೆ. (ಒನ್ ಇಂಡಿಯಾ ಕನ್ನಡ)

English summary
Century Star Shivaraj Kumar movie Ander Bahar launches on 12th March 2012 at Kanteerava Stadium, Bangalore. Phaneesh is the Director of this movie. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X