»   » ಕನ್ನಡದ ಈ ನಟಿಯರ ನಿರ್ಧಾರವನ್ನ ಮೆಚ್ಚಲೇಬೇಕು

ಕನ್ನಡದ ಈ ನಟಿಯರ ನಿರ್ಧಾರವನ್ನ ಮೆಚ್ಚಲೇಬೇಕು

Posted By:
Subscribe to Filmibeat Kannada
Priyanka Upendra' to play Police Constable in her next movie | Oneindia Kannada

'ಒಬ್ಬ ನಟಿ ಸಾಕಷ್ಟು ಸಿನಿಮಾ ಮಾಡ್ತಾರೆ... ದಶಕಗಳ ಕಾಲ ಚಿತ್ರರಂಗವನ್ನ ಆಳುತ್ತಾರೆ.. ಒಳ್ಳೆಯ ಹೆಸರು, ಫ್ಯಾನ್ಸ್ ಫಾಲೋಯಿಂಗ್, ದೊಡ್ಡ ಜನಪ್ರಿಯತೆ ಎಲ್ಲ ಇರುತ್ತದೆ. ಹೀಗಿರುವಾಗ ಆ ಪ್ರತಿಭಾವಂತ ನಟಿ ಮದುವೆ ಆಗಿದ್ದೇ ತಡ ಹೇಳದೆ ಕೇಳದೆ ಚಿತ್ರರಂಗದಿಂದ ದೂರ ಉಳಿದು ಬಿಡುತ್ತಾರೆ.' ಇದು ಸಿನಿಮಾ ಇಂಡಸ್ಟ್ರಿಯಲ್ಲಿ ಪದೇ ಪದೇ ಮರುಕಳಿಸುತ್ತಿರುವ ಸಂಗತಿ.

ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ನಟಿಯರು ಮದುವೆ ಬಳಿಕ ಸಿನಿಮಾ ಮಾಡುವುದು ಬಹಳ ಕಡಿಮೆ. ಅದು ವೈಯಕ್ತಿಕ ಕಾರಣವೋ ಅಥವಾ ಮದುವೆಯ ಬಳಿಕ ಆ ನಟಿಯರಿಗೆ ಡಿಮ್ಯಾಂಡ್ ಕಡಿಮೆಯಾಗುತ್ತದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ವಿವಾಹದ ನಂತರ ನಟಿಯರು ಗಂಡ, ಮನೆ, ಸಂಸಾರ ಎಂದು ಬಣ್ಣದ ಲೋಕದಿಂದ ದೂರ ಆಗ್ತಾರೆ.

ಈ ರೀತಿ ಇದ್ದರೂ ಸಹ ಕನ್ನಡದ ಇತ್ತೀಚಿನ ನಟಿಯರು ಮದುವೆ ಬಳಿಕವೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಿದ್ರೆ, ಯಾವೆಲ್ಲಾ ನಟಿಯರು ಮದುವೆಯ ಬಳಿಕವೂ ನಟಿಸುತ್ತಿದ್ದಾರೆ ಎಂದು ಮುಂದೆ ಓದಿ....

ಪ್ರಿಯಾಂಕ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರೀತಿಯ ಪತ್ನಿ ಪ್ರಿಯಾಂಕ ಉಪೇಂದ್ರ ಮದುವೆ ಬಳಿಕವೂ ಸಿನಿಮಾ ಮಾಡುತ್ತಿದ್ದಾರೆ. ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿ ಕೆಲಸ ಮಾಡಿರುವ ಪ್ರಿಯಾಂಕ, ಸದ್ಯ 'ಸೆಂಕೆಂಡ್ ಆಫ್' ಮತ್ತು 'ಹೌರಾ ಬ್ರಿಡ್ಜ್' ಎನ್ನುವ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಅಪ್ಪ-ಅಮ್ಮನಂತೆ ಸಿನಿಲೋಕಕ್ಕೆ ಕಾಲಿಟ್ಟ ಉಪೇಂದ್ರ ಮುದ್ದಿನ ಮಗಳು

ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ಸ್ಟಾರ್ ನಟಿ ಎನಿಸಿಕೊಂಡಿರುವ ರಾಧಿಕಾ ಪಂಡಿತ್ ಕೂಡ ಮದುವೆ ನಂತರ ಸಿನಿಮಾ ಮಾಡುತ್ತಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ರಾಧಿಕಾ ಸಿನಿಮಾ ಮಾಡುತ್ತಿದ್ದು, ಚಿತ್ರ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಮದುವೆ ಬಳಿಕ ರಾಧಿಕಾ ಪಂಡಿತ್ ಬರೋಬ್ಬರಿ 20 ಕಥೆಗಳನ್ನ ಕೇಳಿದ್ದರಂತೆ.!

ಶ್ವೇತಾ ಶ್ರೀವತ್ಸವ್

ಸಿಂಪಲ್ ಹುಡುಗಿ ಶ್ವೇತ ಶ್ರೀವತ್ಸವ್ ಸಹ ಮದುವೆ ಬಳಿಕ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಭಿನ್ನ ಸಿನಿಮಾಗಳನ್ನು ಮಾಡುತ್ತಿರುವ ಶ್ವೇತ ಮದುವೆ ನಂತರವೂ ಸಿನಿಮಾ ಮಾಡಿ ಗೆದ್ದಿದ್ದಾರೆ.

ಶ್ವೇತಾ ಶ್ರೀವಾತ್ಸವ್ ಅವರ ಪುಟ್ಟ ಕಂದಮ್ಮನ ಮುದ್ದಾದ ಕ್ಷಣಗಳು

ಪ್ರಿಯಾಮಣಿ

ಪಂಚಭಾಷ ನಟಿ ಪ್ರಿಯಾಮಣಿ ಇತ್ತೀಚೆಗಷ್ಟೆ ತಮ್ಮ ಗೆಳೆಯ ಮುಸ್ತಫಾ ಅವರೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟರು. ಪ್ರಿಯಾಮಣಿ ಕೂಡ ಮದುವೆ ಬಳಿಕ ಸಿನಿಮಾ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಸಿಂಪಲ್ ಆಗಿ ನೆರವೇರಿತು ಪ್ರಿಯಾಮಣಿ-ಮುಸ್ತಫಾ ರಾಜ್ ವಿವಾಹ

ರಶ್ಮಿಕಾ ಮಂದಣ್ಣ

ಕಿರಿಕ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ರಿಯಲ್ ಲೈಫ್ ನಲ್ಲಿಯೂ ಒಂದಾಗುತ್ತಿದ್ದಾರೆ. ಇಬ್ಬರ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಯ ನಂತರ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಅನಿತಾ ಭಟ್

'ಬಿಗ್ ಬಾಸ್ ಸೀಸನ್ 1' ಖ್ಯಾತಿಯ ನಟಿ ಅನಿತಾ ಭಟ್ ಅವರಿಗೆ ಬಾಲ್ಯ ವಿವಾಹ ಆಗಿತ್ತಂತೆ. ಆದರೂ ಸಹ ಅವರು 'ಸೈಕೋ' ಸೇರಿದಂತೆ ಕೆಲ ಸಿನಿಮಾಗಳನ್ನು ಮಾಡಿದ್ದಾರೆ.

English summary
List of 6 kannada actress who decided to act in films after their marriage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada