»   » ಶಿವಣ್ಣನ 'ಮಾಸ್ ಲೀಡರ್' ನೋಡಲು ಈ 6 ಕಾರಣಗಳು ಸಾಕು!

ಶಿವಣ್ಣನ 'ಮಾಸ್ ಲೀಡರ್' ನೋಡಲು ಈ 6 ಕಾರಣಗಳು ಸಾಕು!

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಸಿನಿಮಾ ಈ ವಾರ ರಾಜ್ಯಾದ್ಯಂತ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಈ ಚಿತ್ರವನ್ನ ಮೊದಲ ದಿನವೇ ನೋಡಲೇಬೇಕು ಎಂದು ಚಿತ್ರಪ್ರೇಮಿಗಳು ಕಾಯುತ್ತಿದ್ದಾರೆ.

'ಮಾಸ್ ಲೀಡರ್' ಚಿತ್ರವನ್ನ ಯಾಕೆ ಮೊದಲ ದಿನವೇ ನೋಡಬೇಕು? ಶಿವಣ್ಣನ ಈ ಚಿತ್ರದಲ್ಲಿ ಏನಿದೆ ಅಂತಹ ವಿಶೇಷತೆ? ರೆಗ್ಯೂಲರ್ ಚಿತ್ರಗಳಿಗಿಂತ ಈ ಚಿತ್ರವೇಕೆ ಕುತೂಹಲ ಮೂಡಿಸಿದೆ? ಇಂತಹ ಪ್ರಶ್ನೆಗಳು ಕಾಡುವುದು ಸಹಜ.

ಅಂತಹ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. 'ಮಾಸ್ ಲೀಡರ್' ಚಿತ್ರವನ್ನ ಯಾಕೆ ನೋಡಬೇಕು ಎನ್ನುವುದಕ್ಕೆ ಮುಖ್ಯವಾದ 6 ಕಾರಣಗಳನ್ನ ಪಟ್ಟಿ ಮಾಡಿದ್ದೀವಿ. ಈ 6 ಕಾರಣ ಸಾಕು ಈ ಚಿತ್ರವನ್ನ ಮೊದಲ ದಿನವೇ ನೋಡುವುದಕ್ಕೆ. ಏನದು ಪ್ರಮುಖ ಕಾರಣಗಳು? ಮುಂದೆ ಓದಿ.....

ಶಿವರಾಜ್ ಕುಮಾರ್ ಚಿತ್ರ

ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಚಿತ್ರವೆಂಬುದೇ 'ಮಾಸ್ ಲೀಡರ್' ಚಿತ್ರಕ್ಕೆ ಬಹುದೊಡ್ಡ ಶಕ್ತಿ. ಹೀಗಾಗಿ, ದೊಡ್ಮನೆ ಅಭಿಮಾನಿಗಳು ಈ ಚಿತ್ರವನ್ನ ನೋಡಲೇಬೇಕು.

ಮೊದಲ ಪ್ರೇಕ್ಷಕನಾಗಿ 'ಮಾಸ್ ಲೀಡರ್' ದರ್ಶನ ಪಡೆಯಲಿರುವ ಸುದೀಪ್

ಆರ್ಮಿ ಆಫೀಸರ್

ಶಿವಣ್ಣ ಈ ಚಿತ್ರದಲ್ಲಿ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಯೋಧನಾಗಿ ಭಾರತದ ಗಡಿ ಭಾಗದಲ್ಲಿ ಸಿಪಾಯಿ ಆಗಿ ಮಿಂಚಿದ್ದಾರೆ. ತುಂಬಾ ವರ್ಷದ ನಂತರ ಶಿವಣ್ಣ ಅವರನ್ನ ಈ ರೀತಿಯ ಪಾತ್ರದಲ್ಲಿ ನೋಡುವ ಅವಕಾಶ 'ಮಾಸ್ ಲೀಡರ್' ಚಿತ್ರದಿಂದ ಸಿಕ್ಕಿದೆ.

ದೇಶಭಕ್ತಿ ಕಥೆ

ಸ್ವತಂತ್ರ ದಿನೋತ್ಸದ ವಿಶೇಷವಾಗಿ ತೆರೆ ಕಾಣುತ್ತಿರುವ 'ಮಾಸ್ ಲೀಡರ್' ಚಿತ್ರ ದೇಶಭಕ್ತಿಯ ಕಥೆಯನ್ನ ಹೊಂದಿದೆ. ಡ್ರಗ್ಸ್ ಮಾಫಿಯಾ ದಂಧೆಯಿಂದ ದೇಶಕ್ಕೆ ಆಗುವ ಸಮಸ್ಯೆ, ಅನ್ಯಾಯ ವಿರುದ್ಧ ಹೋರಾಡುವ ನಾಯಕನಾಗಿ ಸೆಂಚುರಿ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಇಂತಹ ಪಾತ್ರದಲ್ಲಿ ಶಿವಣ್ಣನನ್ನ ನೋಡಬಹುದು ಎಂಬ ಆಶಯ.

'ಮಾಸ್ ಲೀಡರ್'ಗಾಗಿ ಒಂದಾದ ಸ್ಯಾಂಡಲ್ ವುಡ್ ತಾರೆಯರು

ಶಿವಣ್ಣ ವರ್ಸಸ್ ಲೂಸ್ ಮಾದ

ಶಿವರಾಜ್ ಕುಮಾರ್ ನಾಯಕನಾಗಿರುವ ಈ ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಕೂಡ ಅಭಿನಯಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಲೂಸ್ ಮಾದ ಅವರದ್ದು ವಿಲನ್ ಪಾತ್ರ. ಹಾಗಾಗಿ, ಶಿವಣ್ಣ ಎದುರು ಲೂಸ್ ಮಾದ ಖಳನಾಯಕನಾಗಿ ಖದರ್ ತೋರಿಸಲಿದ್ದಾರೆ. ಈ ಮೂಲಕ ಯೋಗಿ ಅಭಿಮಾನಿಗಳಿಗೂ ಇದು ತುಂಬ ಸ್ಪೆಷಲ್ ಸಿನಿಮಾ.

ಬಹುದೊಡ್ಡ ತಾರಬಳಗ

'ಮಾಸ್ ಲೀಡರ್' ಬಹುದೊಡ್ಡ ತಾರಬಳಗವನ್ನ ಹೊಂದಿರುವ ಚಿತ್ರ. ಶಿವರಾಜ್ ಕುಮಾರ್ ಜೊತೆಯಲ್ಲಿ ಪ್ರಣೀತಾ, ವಿಜಯ ರಾಘವೇಂದ್ರ, ಲೂಸ್ ಮಾದ ಯೋಗೀಶ್, ಗುರು ಜಗ್ಗೇಶ್, ಶರ್ಮಿಳಾ ಮಾಂಡ್ರೆ, ವಂಶಿ ಕೃಷ್ಣ, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಅವರ ಮಗಳು, ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಟೈಟಲ್ ವಿವಾದ ಅಂತ್ಯ: 'ಮಾಸ್ ಲೀಡರ್' ಆಗಸ್ಟ್ 11ಕ್ಕೆ ರಿಲೀಸ್

ಸ್ವಮೇಕ್ ಸಿನಿಮಾ

ಈ ಎಲ್ಲ ಕಾರಣಗಳ ಜೊತೆ ಮತ್ತೊಂದು ಮುಖ್ಯವಾದ ಕಾರಣ ಅಂದ್ರೆ, ಮಾಸ್ ಲೀಡರ್ ಸ್ವಮೇಕ್ ಸಿನಿಮಾ. ರೀಮೇಕ್ ಸಿನಿಮಾಗಳು ಅಂದ್ರೆ ಅಸಡ್ಡೆ ತೋರುವ ಕನ್ನಡ ಪ್ರೇಕ್ಷಕರು ಖುಷಿಯಿಂದ ಈ ಚಿತ್ರವನ್ನ ನೋಡಬಹುದು.

English summary
Kannada Actor Shiva Rajkumar starrer 'Mass Leader' is releasing on Friday (August 11th) all Over Karnataka. The Movie also features Praneeth, Lose Mada Yogesh, Vijaya Raghavendra, Guru Jaggesh. Here Are 6 Reasons As to why you should watch 'Mass Leader'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada