For Quick Alerts
  ALLOW NOTIFICATIONS  
  For Daily Alerts

  ಸುದೀಪ್-ಉಪೇಂದ್ರ ಜೋಡಿಯ 'ಮುಕುಂದ ಮುರಾರಿ' ನೋಡಲು 6 ಕಾರಣಗಳು..

  By Bharath Kumar
  |

  ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಒಟ್ಟಾಗಿ ಅಭಿನಯಿಸಿರುವ 'ಮುಕುಂದ ಮುರಾರಿ' ಚಿತ್ರ, ನಾಳೆ (ಅಕ್ಟೋಬರ್ 28) ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಫಸ್ಟ್ ಲುಕ್ ನಿಂದ ಹಿಡಿದು ಇಲ್ಲಿಯವರೆಗೂ ಹಲವು ವಿಚಾರಗಳಲ್ಲಿ ಕುತೂಹಲ ಹುಟ್ಟು ಹಾಕಿರುವ ಈ ಬಹುಕೋಟಿ ಚಿತ್ರದ ಹಣೆ ಬರಹ ನಾಳೆ ಬಹಿರಂಗವಾಗಲಿದೆ.

  ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ 'ಮುಕುಂದ ಮುರಾರಿ'ಯ ದರ್ಶನವಾಗಲಿದ್ದು, ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಿ, ಫಸ್ಟ್ ಡೇ, ಫಸ್ಟ್ ಶೋ ಕಣ್ತುಂಬಿಕೊಳ್ಳಬೇಕು ಅಂತ ಕಿಚ್ಚ ಹಾಗೂ ಉಪ್ಪಿಯ 'ಭಕ್ತ'ರು ಕಾಯುತ್ತಿದ್ದಾರೆ.[ದೀಪಾವಳಿಗೆ 'ಮುಕುಂದ ಮುರಾರಿ'ಯ ದರ್ಶನ]

  ಹ್ಯಾಟ್ರಿಕ್ ಡೈರೆಕ್ಟರ್ ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸುದೀಪ್-ಉಪೇಂದ್ರ ಜೊತೆಯಲ್ಲಿ ರವಿಶಂಕರ್, ಅವಿನಾಶ್, ನಿಖಿತಾ ತುಕ್ರಾಲ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  ಹಲವು ವಿಶೇಷತೆಗಳಿಂದ ಕೂಡಿರುವ 'ಮುಕುಂದ ಮುರಾರಿ' ಚಿತ್ರವನ್ನ ನೀವು ಮಿಸ್ ಮಾಡದೆ ಯಾಕೆ ನೋಡಬೇಕು ಎಂಬುದಕ್ಕೆ 6 ಕಾರಣಗಳನ್ನ ನಾವು ಕೊಡ್ತಿದ್ದೀವಿ. ಓದಿರಿ....

  ಉಪೇಂದ್ರ-ಸುದೀಪ್ ಜುಗಲ್ ಬಂದಿ

  ಉಪೇಂದ್ರ-ಸುದೀಪ್ ಜುಗಲ್ ಬಂದಿ

  ಇದೇ ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸಿರುವುದು 'ಮುಕುಂದ ಮುರಾರಿ' ಚಿತ್ರದ ಮೊದಲ ಸ್ಪೆಷಾಲಿಟಿ. ಇವರಿಬ್ಬರಿಗೂ ಅವರದ್ದೇ ಆದ ಇಮೇಜ್ ಹಾಗೂ ಅಭಿಮಾನಿ ಬಳಗ ಇದೆ. ಇವರಿಬ್ಬರು ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಗಳು ಎನ್ನುವುದಕ್ಕಿಂತ, ದಕ್ಷಿಣ ಭಾರತದ ಸ್ಟಾರ್ ನಟರು ಎನ್ನುವುದು 'ಮುಕುಂದ ಮುರಾರಿ' ಬಗ್ಗೆ ಹೆಚ್ಚು ಹೈಪ್ ಕ್ರಿಯೇಟ್ ಆಗಲು ಕಾರಣ. ಒಮ್ಮೆಲೆ, ಇಬ್ಬರು ಸೂಪರ್ ಸ್ಟಾರ್ ಗಳನ್ನ ಒಂದೇ ತೆರೆಯಲ್ಲಿ ನೋಡುವುದು ಡಬಲ್ ಧಮಾಕಾ ಅಲ್ಲದೇ ಮತ್ತೇನು?

  ಉಪ್ಪಿಯ ರಿಯಲ್ ಕ್ಯಾರೆಕ್ಟರ್!

  ಉಪ್ಪಿಯ ರಿಯಲ್ ಕ್ಯಾರೆಕ್ಟರ್!

  ಆಸ್ತಿಕ ಹಾಗೂ ನಾಸ್ತಿಕ ಎಂಬ ಪರಿಕಲ್ಪನೆ ಹೊಂದಿರುವ ಕಥೆಯೇ 'ಮುಕುಂದ ಮುರಾರಿ' ಚಿತ್ರ. ಇದರಲ್ಲಿ ಉಪೇಂದ್ರ ನಾಸ್ತಿಕನ ಪಾತ್ರ ಮಾಡಿದ್ದಾರೆ. 'ಎ' ಚಿತ್ರದಲ್ಲಿ ಉಪ್ಪಿ ಗಣೇಶನ ವಿಗ್ರಹವನ್ನ ತೆಗೆದುಕೊಂಡು ಹೋಗಿ ಬಾವಿಗೆ ಹಾಕಿದ್ದು ನೆನಪಿದೆ ಅಲ್ವಾ? ಮೊದಲಿಂದಲೂ 'ಐ ಆಮ್ ಗಾಡ್, ಗಾಡ್ ಈಸ್ ಗ್ರೇಟ್' ಎನ್ನುತ್ತಲೇ ಬಂದಿರುವ ಉಪೇಂದ್ರ, ಈ ಚಿತ್ರದಲ್ಲೂ ನಾಸ್ತಿಕನ ಪಾತ್ರ ಮಾಡಿದ್ದಾರೆ. 'ಎ' ಚಿತ್ರದಲ್ಲಿನ ಉಪ್ಪಿ ನಿಮಗೆ ಇಷ್ಟವಾಗಿದ್ದರೆ, ಇದರಲ್ಲೂ ಮೆಚ್ಚುಗೆ ಆಗುವುದರಲ್ಲಿ ಅನುಮಾನ ಬೇಡ.

  ಕಿಚ್ಚನ ಹೊಸ ಅವತಾರ

  ಕಿಚ್ಚನ ಹೊಸ ಅವತಾರ

  ಇದುವರೆಗೂ ಸುದೀಪ್ ರನ್ನ ಪೊಲೀಸ್ ಆಫೀಸರ್ ಆಗಿ, ಲವರ್ ಬಾಯ್ ಆಗಿ, ರೌಡಿಯಾಗಿ, ಎಲ್ಲಾ ತರಹದ ಪಾತ್ರಗಳಲ್ಲೂ ನೋಡಿದ್ದೀರಿ. ಆದ್ರೆ, ಇದೇ ಮೊದಲ ಬಾರಿಗೆ ದೇವರ ಪಾತ್ರದಲ್ಲಿ, ಶ್ರೀ ಕೃಷ್ಣನಾಗಿ ಸುದೀಪ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಮಾಸ್ ಮಹಾರಾಜ ಸುದೀಪ್ ರವರ 'ಕೃಷ್ಣ ಲೀಲೆ' ನೋಡುವ ತವಕ ನಿಮಗೆ ಇದ್ದರೆ, 'ಮುಕುಂದ ಮುರಾರಿ' ಮಿಸ್ ಮಾಡ್ಬೇಡಿ.['ಮುಕುಂದ ಮುರಾರಿ' ಅಡ್ಡದಿಂದ ಲೀಕ್ ಆಗಿರುವ 'ಕೃಷ್ಣ' ಸುದೀಪ್ ಫೋಟೋ ಇದೇ.!]

  ಸ್ಟಾರ್ ನಿರ್ದೇಶಕ ನಂದಕಿಶೋರ್

  ಸ್ಟಾರ್ ನಿರ್ದೇಶಕ ನಂದಕಿಶೋರ್

  'ಮುಕುಂದ ಮುರಾರಿ' ಚಿತ್ರದ ಮತ್ತೊಂದು ಹೈಲೈಟ್ ಅಂದ್ರೆ ಅದು ನಿರ್ದೇಶಕ ನಂದಕಿಶೋರ್. 'ವಿಕ್ಟರಿ', 'ಅಧ್ಯಕ್ಷ', 'ರನ್ನ'... ಹೀಗೆ ನಂದಕಿಶೋರ್ ಆಕ್ಷನ್ ಕಟ್ ಹೇಳಿದ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಹೀಗಾಗಿ, ಈ ಚಿತ್ರವೂ ನಂದಕಿಶೋರ್ ಗೆ ಗೆಲುವು ತಂದುಕೊಡುತ್ತೆ ಎನ್ನುವ ನಂಬಿಕೆ ಗಾಂಧಿನಗರದಲ್ಲಿದೆ.

  ಗ್ಲಾಮರಸ್ ನಟಿಯರ ಆಕರ್ಷಣೆ

  ಗ್ಲಾಮರಸ್ ನಟಿಯರ ಆಕರ್ಷಣೆ

  ಇಲ್ಲಿ ಕೇವಲ ಸುದೀಪ್ ಹಾಗೂ ಉಪೇಂದ್ರ ರವರ ಸ್ಟಾರ್ ಅಟ್ರಾಕ್ಷನ್ ಮಾತ್ರವಲ್ಲ. 'ಮುಕುಂದ ಮುರಾರಿ' ಚಿತ್ರದಲ್ಲಿ ನಿಖಿತಾ ತುಕ್ರಾಲ್, ರಚಿತಾ ರಾಮ್, ನಟಿ ಭಾವನ ರಂತಹ ಸ್ಟಾರ್ ಹೀರೋಯಿನ್ ಗಳು ಕೂಡ ಇದ್ದಾರೆ. ಉಪೇಂದ್ರ ಪತ್ನಿಯಾಗಿ ನಿಖಿತಾ ಕಾಣಿಸಿಕೊಂಡಿದ್ದರೆ, ಕೃಷ್ಣನ ಗೋಪಿಕೆಯರಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಗೂ ನಟಿ ಭಾವನ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ.

  ಹಿಂದಿ-ತೆಲುಗಿನಲ್ಲಿ ಸಿನಿಮಾ ಹಿಟ್

  ಹಿಂದಿ-ತೆಲುಗಿನಲ್ಲಿ ಸಿನಿಮಾ ಹಿಟ್

  ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ, 'ಮುಕುಂದ ಮುರಾರಿ', ಹಿಂದಿಯ 'ಓ ಮೈ ಗಾಡ್' ಚಿತ್ರದ ರೀಮೇಕ್. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅಭಿನಯಿಸಿದ್ದರು. ಇನ್ನೂ ಇದೇ ಚಿತ್ರ ತೆಲುಗಿನಲ್ಲಿ 'ಗೋಪಾಲ ಗೋಪಾಲ' ಹೆಸರಿನಲ್ಲಿ ಪವನ್ ಕಲ್ಯಾಣ್ ಹಾಗೂ ವೆಂಕಟೇಶ್ ಅಭಿನಯದಲ್ಲಿ ತೆರೆಕಂಡಿತ್ತು. ಎರಡೂ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿರುವ ಈ ಸಿನಿಮಾ, ಈಗ ಕನ್ನಡದಲ್ಲಿ ತೆರೆಗೆ ಬರಲಿದೆ. ಯಶಸ್ಸು ನೀಡುವುದು ಈಗ ನಿಮ್ಮ ಕೈಯಲ್ಲಿದೆ.

  English summary
  Kannada Actor Upendra and Kiccha Sudeep starrer 'Mukunda Murari' is releasing tomorrow (October 28) all over Karnataka. The movie also features Ravishanker, Nikhitha, Rachitha Ram. Here are 6 Reasons as to why you should watch 'Mukunda Murari'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X