»   » ಶಿವಣ್ಣನ 'ಶ್ರೀಕಂಠ' ಯಾಕೆ ನೋಡ್ಬೇಕು? ಇಲ್ಲಿದೆ 6 ಕಾರಣ!

ಶಿವಣ್ಣನ 'ಶ್ರೀಕಂಠ' ಯಾಕೆ ನೋಡ್ಬೇಕು? ಇಲ್ಲಿದೆ 6 ಕಾರಣ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಶ್ರೀಕಂಠ' ಚಿತ್ರ ಇದೇ ವಾರ ಅಂದ್ರೆ ಜನವರಿ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈಗಾಗಲೇ 'ಶ್ರೀಕಂಠ' ಹಲವು ವಿಷಯಗಳಿಗೆ ವಿಶೇಷೆನಿಸಿಕೊಂಡಿದ್ದು, ಟೀಸರ್-ಟ್ರೈಲರ್ ಹಾಗೂ ಹಾಡುಗಳ ಮೂಲಕ ಕುತೂಹಲ ಹೆಚ್ಚಿಸಿದೆ.[ಸಿಎಂ 'ಶ್ರೀಕಂಠ' ಜನವರಿ 6 ಕ್ಕೆ ತೆರೆಮೇಲೆ]

ಅಷ್ಟಕ್ಕೂ, ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ಸ್ಪೆಷಲ್ ಏನಿದೆ? 'ಶ್ರೀಕಂಠ' ಚಿತ್ರ ನೋಡಲು ಬಲವಾದ ಕಾರಣಗಳೇನು? ಚಿತ್ರಮಂದಿರದಲ್ಲಿ ಪ್ರೇಕ್ಷಕನಾಗಿ ಏನೂ ನಿರೀಕ್ಷೆ ಮಾಡಬಹುದು ಎಂಬುದಕ್ಕೆ 6 ಕಾರಣಗಳನ್ನ ನಾವ್ ಹೇಳ್ತಿವಿ....

'ಶ್ರೀಕಂಠ' ಶಿವರಾಜ್ ಕುಮಾರ್ ಚಿತ್ರ

'ಶ್ರೀಕಂಠ' ಚಿತ್ರವನ್ನ ನೋಡಲೇಬೇಕು ಎನ್ನುವುದಕ್ಕೆ ಮೊದಲ ಕಾರಣ ನಟ ಶಿವರಾಜ್ ಕುಮಾರ್. 54ರ ಹರೆಯದಲ್ಲೂ ಸಿನಿರಸಿಕರು ನಿರೀಕ್ಷೆ ಮಾಡುವಂತಹ ಮನರಂಜನೆ ನೀಡುವಲ್ಲಿ ಶಿವಣ್ಣ ಮುಂಚೂಣಿಯಲ್ಲಿರುತ್ತಾರೆ. ಹೀಗಾಗಿ ಶಿವಣ್ಣನ ಈ ಹಿಂದಿನ ಸಿನಿಮಾಗಳಂತೆ 'ಶ್ರೀಕಂಠ' ಚಿತ್ರದಲ್ಲೂ ಮಸ್ತ್ ಮನರಂಜನೆ ಗ್ಯಾರೆಂಟಿ. ಹೀಗಾಗಿ ಶಿವಣ್ಣ ಅಭಿಮಾನಿಗಳಂತೂ ಫಸ್ಟ್ ಡೇ ಫಸ್ಟ್ ಶೋನೇ ನೋಡೋದು ಪಕ್ಕಾ.

'ಕಾಮನ್ ಮ್ಯಾನ್' ಶಿವಣ್ಣ

ಶಿವರಾಜ್ ಕುಮಾರ್ ಅವರನ್ನ ಡಾನ್, ಹಳ್ಳಿ ಹುಡುಗ, ರೌಡಿ, ಲವರ್ ಬಾಯ್, ಮಾಸ್ ಹೀರೋ ಅಂತಹ ಪಾತ್ರಗಳಲ್ಲಿ ಸದಾ ನೋಡುತ್ತಿರುವ ಪ್ರೇಕ್ಷಕರಿಗೆ, 'ಶ್ರೀಕಂಠ' ಸ್ವಲ್ಪ ವಿಭಿನ್ನವೆನಿಸಬಹುದು. ಯಾಕಂದ್ರೆ, 'ಶ್ರೀಕಂಠ' ಚಿತ್ರದಲ್ಲಿ ಶಿವಣ್ಣ ಅವರದ್ದು 'ಕಾಮನ್ ಮ್ಯಾನ್' ಪಾತ್ರ. ಅಂದ್ರೆ, ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳ ವಿರುದ್ಧ ಸಿಡಿದೇಳುವ ವ್ಯಕ್ತಿಯಾಗಿ ನೋಡಬಹುದು.

ಕರ್ನಾಟಕದ ರಾಜಕೀಯ ಚಿತ್ರಣ!

ಶ್ರೀಕಂಠ 'ಕಾಮನ್ ಮ್ಯಾನ್' ಸಭ್ಜೆಕ್ಟ್ ಆಗಿರುವುದರಿಂದ ಈ ಚಿತ್ರದಲ್ಲಿ ರಾಜಕೀಯ ಅಂಶಗಳು ಹೆಚ್ಚಾಗಿರಲಿವೆ ಎನ್ನಲಾಗುತ್ತಿದೆ. ಇನ್ನೂ ಟೀಸರ್ ನಲ್ಲೂ ಇದನ್ನ ಗಮನಿಸಿದ್ದೇವೆ. ಕಾವೇರಿ ಗಲಾಟೆ, ಸದನದಲ್ಲಿ ನೀಲಿ ಚಿತ್ರ ನೋಡಿದ್ದು, ಭ್ರಷ್ಟಚಾರ ಇಂತಹ ಅಂಶಗಳನ್ನ 'ಶ್ರೀಕಂಠ' ಚಿತ್ರ ಒಳಗೊಂಡಿದೆ ಎನ್ನಲಾಗುತ್ತಿದೆ.['ಸಿ.ಎಂ' ಆಗಲಿದ್ದಾರೆ ಡಾ.ಶಿವರಾಜ್ ಕುಮಾರ್!]

ಟ್ರೈನ್ ಸಾಹಸ!

ಶಿವರಾಜ್ ಕುಮಾರ್ ಸಾಹಸ ಮಾಡುವುದು ಹೊಸದೇನಲ್ಲ. ಆದ್ರೆ, 'ಶ್ರೀಕಂಠ' ಚಿತ್ರದಲ್ಲಿ ಮಾಡಿರುವ ಟ್ರೈನ್ ಸಾಹಸ ಕುತೂಹಲ ಹೆಚ್ಚಿಸಿದೆ. ಚಲಿಸುವ ಟ್ರೈನ್ ಕೆಳಗೆ ನಿಜವಾಗಲೂ ಮಲಗಿದ್ದ ಹ್ಯಾಟ್ರಿಕ್ ಹೀರೋ ರಿಯಲ್ ಸ್ಟಂಟ್ ಮೂಲಕ ಗಮನ ಸೆಳೆದಿದ್ದಾರೆ. ಆ ದೃಶ್ಯಗಳನ್ನ ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಹೋಗಲೆ ಬೇಕು.[ವಿಡಿಯೋ: ಮೈನವಿರೇಳಿಸುವ ಸಾಹಸ ದೃಶ್ಯದಲ್ಲಿ ಶಿವರಾಜ್ ಕುಮಾರ್]

ಮಂಜು ಸ್ವರಾಜ್ ನಿರ್ದೇಶನ

ಸ್ಯಾಂಡಲ್ ವುಡ್ ನಲ್ಲಿ 'ಶ್ರಾವಣಿ ಸುಬ್ರಮಣ್ಯ', 'ಶಿಶಿರಾ' ಅಂತಹ ಸಕ್ಸಸ್ ಫುಲ್ ಸಿನಿಮಾಗಳನ್ನ ಕೊಟ್ಟಿರುವ ಮಂಜು ಸ್ವರಾಜ್ ಅಂತಹದ್ದೇ ಸೂಪರ್ ಸಿನಿಮಾವೊಂದನ್ನ ನೀಡಿದ್ದಾರೆ ಎಂಬ ನಿರೀಕ್ಷೆಯಿದೆ. ಹೀಗಾಗಿ 'ಶ್ರೀಕಂಠ' ಚಿತ್ರವನ್ನ ನೋಡಲು ನಿರ್ದೇಶಕ ಮಂಜು ಸ್ವರಾಜ್ ಕೂಡ ಪ್ರಮುಖ ಕಾರಣ

ವಿಷ್ಣುವರ್ಧನ್ ಅಭಿಮಾನಿನಾ?

ಇನ್ನೂ 'ಶ್ರೀಕಂಠ' ಚಿತ್ರದ ಫಸ್ಟ್ ಟೀಸರ್ ನೋಡಿದಾಗೆ, ಶಿವಣ್ಣ ವಿಷ್ಣುವರ್ಧನ್ ಅವರ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಕೈಯಲ್ಲಿ ಖಡಗ ತೊಟ್ಟು, ಅವರಂತೆ ಯಂಗ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಸೋ, ಚಿತ್ರದಲ್ಲಿ ಶಿವರಾಜ್ ಕುಮಾರ್ ವಿಷ್ಣುದಾದನ ಅಭಿಮಾನಿನಾ ಎಂಬ ಆಸೆ ವಿಷ್ಣು ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಇದನ್ನ ನೋಡುವುದಕ್ಕೆ ಅಭಿಮಾನಿಗಳು ಥಿಯೇಟರ್ ಗೆ ಹೋಗಲೇಬೇಕು.[ಅಂದು ಯಶ್, ಇಂದು ಶಿವಣ್ಣ: ಇಬ್ಬರಿಗೂ 'ನಾಗರಹಾವಿನ' ದ್ವೇಷ.! ]

English summary
Kannada Actor shivrajkumar starrer 'Srikanta' is releasing tomorrow (january 6th) all over Karnataka. The movie Directed By Manju Swaraj and also Features Chandini Sreedharan. Here are 6 Reasons as to why you should watch 'Srikanta'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada