»   » ಮಹೇಶ್ ಬಾಬುಗೆ ಭಾರೀ ಆಫರ್; ಈಗ 'ರಿಯಲ್ ಪ್ರಿನ್ಸ್'

ಮಹೇಶ್ ಬಾಬುಗೆ ಭಾರೀ ಆಫರ್; ಈಗ 'ರಿಯಲ್ ಪ್ರಿನ್ಸ್'

Posted By:
Subscribe to Filmibeat Kannada

ತೆಲುಗಿನ ಸೂಪರ್ ಸ್ಟಾರ್, ಪ್ರಿನ್ಸ್ ಮಹೇಶ್ ಬಾಬು ಇದೀಗ ನಿರ್ಮಾಪಕರ ಪಾಲಿನ ಹಾಟ್ ಫೇವರೇಟ್ ಎನಿಸಿದ್ದಾರೆ. ಅವರ ಇತ್ತೀಚಿನ ಚಿತ್ರ ಬಿಸಿನೆಸ್ ಮ್ಯಾನ್, ವಿಮರ್ಶಕ ಕಡೆಯಿಂದ ಮಿಶ್ರ ಪ್ರತಿಕ್ರಿಯೆ ಪಡೆದರೂ ಕೂಡ ಪ್ರೇಕ್ಷಕರು ಮೆಚ್ಚಿ ಚಿತ್ರವನ್ನು ಯಶಸ್ವಿ ಚಿತ್ರಗಳ ಪಟ್ಟಿಗೆ ಸೇರಿಸಿದ್ದಾರೆ. ಇದೀಗ ಮಹೇಶ್, ತೆಲುಗಿನಲ್ಲಿ 'ಸೀತಮ್ಮ ವಾಕಿಟ್ಲು ಸಿರಿಮಲ್ಲೆ ಚಟ್ಟು' ಎಂಬ ಮಲ್ಟಿ ಸ್ಟಾರರ್ ಚಿತ್ರದಲ್ಲಿ ನಟ ವೆಂಕಟೇಶ್ ಜೊತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಬಿಸಿನೆಸ್ ಮ್ಯಾನ್ ಚಿತ್ರ ಇದೇ ಮಹೇಶ್ ಮಹಿಮೆಯಿಂದ ಬರೊಬ್ಬರಿ ನೂರು ಕೋಟಿ ರು. ಬಿಸಿನೆಸ್ ಮಾಡಿದೆ. ಅದಕ್ಕೂ ಮೊದಲಿನ ದೂಕುಡು ಚಿತ್ರ ಕೂಡ ಸೂಪರ್ ಹಿಟ್. ಹಾಗಾಗಿ ಈಗ ಮಹೇಶ್ ಬಾಬು ತೆಲುಗಿನಲ್ಲಿ ಹೆಸರಿಗೆ ತಕ್ಕಂತೆ ರಿಯಲ್ ಪ್ರಿನ್ಸ್ ಎನಿಸಿಕೊಂಡಿದ್ದಾರೆ. ಈ ಪ್ರಿನ್ಸ್ ಬಾಬು ಕಾಲ್ ಶೀಟ್ ಗಾಗಿ ನಿರ್ಮಾಪಕರು ಮುಗಿಬೀಳುತ್ತಿದ್ದಾರೆ.

ಪೂರಿ ಜಗನ್ನಾಥ್ ನಿರ್ದೇಶನದ 'ಬಿಸಿನೆಸ್ ಮನ್' ಚಿತ್ರ ಹಿಂದಿಗೆ ಡಬ್ ಆಗುತ್ತೋ ಬಿಡುತ್ತೋ, ಆದರೆ ಅದರಲ್ಲಿ ನಟಿಸಿದ್ದ ಮಹೇಶ್ ಬಾಬು ಮಾತ್ರ ಈಗ ಬಿಸಿನೆಸ್ ಮನ್ ಗಳ ಪಾಲಿಗೆ ಅಕ್ಷಯ ಪಾತ್ರೆ. ಮಹೇಶ್ ಬಾಬುಗೆ ಎಷ್ಟೇ ಕೋಟಿ ಕೊಟ್ಟಾದರೂ ಕಾಲ್ ಶೀಟ್ ಪಡೆಯಲು ರೆಡಿಯಾಗಿದ್ದಾರೆ ತೆಲುಗು ಘಟಾನುಘಟಿ ನಿರ್ಮಾಪಕರು. ತೆಲುಗಿನ ಪ್ರತಿಷ್ಠಿತ ಬ್ಯಾನರ್ ಗೀತಾ ಆರ್ಟ್ ಕಣ್ಣೀಗ ಈ ಪ್ರಿನ್ಸ್ ಮೇಲೆ ಬಿದ್ದಿದೆ. ಬರೋಬ್ಬರಿ 45 ಕೋಟಿ ಆಫರ್ ಈಗ ಮಹೇಶ್ ಮಡಿಲಿಗೆ ಬಿದ್ದಿದೆ. (ಏಜೆನ್ಸೀಸ್)

English summary
Tollywood Prince Mahesh Babu got Rs. 45 Crores Offer for a movie. Now he became the Telugu Producer's Hot Favorite Star, after the Grand Success 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X