»   » ಫಿಲಂಫೇರ್ ಪ್ರಶಸ್ತಿ - ಯಶ್ ಮತ್ತು ಶ್ವೇತಾ ಶ್ರೀವಾತ್ಸವ್ ಬೆಸ್ಟ್.!

ಫಿಲಂಫೇರ್ ಪ್ರಶಸ್ತಿ - ಯಶ್ ಮತ್ತು ಶ್ವೇತಾ ಶ್ರೀವಾತ್ಸವ್ ಬೆಸ್ಟ್.!

Posted By:
Subscribe to Filmibeat Kannada

ಪ್ರತಿಷ್ಠಿತ 62ನೇ ಫಿಲಂಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ನಿನ್ನೆ ಚೆನ್ನೈನಲ್ಲಿ ಅದ್ದೂರಿಯಾಗಿ ನೆರವೇರಿದೆ.

ಈ ಬಾರಿ ಫಿಲಂಫೇರ್ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಠ ಚಿತ್ರ, ನಿರ್ದೇಶಕ, ನಟ, ಪೋಷಕ ನಟ, ಸಂಗೀತ, ಗಾಯಕ ಹಾಗೂ ಗಾಯಕಿ ವಿಭಾಗಗಳಲ್ಲಿ ನಾಮಾಂಕಿತಗೊಂಡಿದ್ದ ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಚಿತ್ರ ಮೂರು ಪ್ರಶಸ್ತಿಗಳನ್ನ ಬಾಚುವಲ್ಲಿ ಯಶಸ್ವಿಯಾಗಿದೆ. [ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ 'ಉಳಿದವರು ಕಂಡಂತೆ' ಲೀಡಿಂಗ್]


ಇನ್ನೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಎರಡು ಅವಾರ್ಡ್ ಗಳನ್ನ ಮುಡಿಗೇರಿಸಿಕೊಂಡಿದೆ. 62ನೇ ಫಿಲಂಫೇರ್ ಪ್ರಶಸ್ತಿಯನ್ನ ಪಡೆದ ಕನ್ನಡ ಪ್ರತಿಭೆಗಳ ಪಟ್ಟಿ ಇಲ್ಲಿದೆ. ಮುಂದೆ ಓದಿ....


ಉತ್ತಮ ನಟ - ಯಶ್

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಅಮೋಘ ಅಭಿನಯಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಶ್ರೇಷ್ಠ ನಟ ರೇಸ್ ನಲ್ಲಿದ್ದವರು 'ಪವರ್ ***' ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್, 'ಉಳಿದವರು ಕಂಡಂತೆ' ಚಿತ್ರಕ್ಕಾಗಿ ರಕ್ಷಿತ್ ಶೆಟ್ಟಿ, 'ಅಧ್ಯಕ್ಷ' ಚಿತ್ರಕ್ಕಾಗಿ ಶರಣ್ ಮತ್ತು 'ಉಗ್ರಂ' ಚಿತ್ರದ ಅಭಿನಯಕ್ಕಾಗಿ ಶ್ರೀಮುರುಳಿ. [ಫಿಲಂಫೇರ್ ಪ್ರಶಸ್ತಿ ಗೆದ್ದು ಬಿಟ್ಟ ನಮ್ಮ 'ರಾಮಾಚಾರಿ']


ಉತ್ತಮ ನಟಿ - ಶ್ವೇತಾ ಶ್ರೀವಾತ್ಸವ್

'ಉಗ್ರಂ' ಚಿತ್ರದ ನಟನೆಗಾಗಿ ಹರಿಪ್ರಿಯಾ, 'ಸೂಪರ್ ರಂಗ' ಚಿತ್ರಕ್ಕಾಗಿ ಕೃತಿ ಖರಬಂಧ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕ್ಕಾಗಿ ರಾಧಿಕಾ ಪಂಡಿತ್ ಮತ್ತು 'ರಾಗಿಣಿ ಐಪಿಎಸ್' ಸಿನಿಮಾಗಾಗಿ ನಾಮಾಂಕಿತಗೊಂಡಿದ್ದ ರಾಗಿಣಿಯನ್ನ ಹಿಂದಕ್ಕೆ ತಳ್ಳಿ 'ಫೇರ್ ಅಂಡ್ ಲವ್ಲಿ' ಚಿತ್ರದ ನಟನೆಗಾಗಿ ಶ್ವೇತಾ ಶ್ರೀವಾತ್ಸವ್ ಬ್ಲಾಕ್ ಲೇಡಿಯನ್ನ ಕೈಲಿ ಹಿಡಿದಿದ್ದಾರೆ.


ಉತ್ತಮ ಚಿತ್ರ - 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'

'ದೃಶ್ಯ', 'ಗಜಕೇಸರಿ', 'ಉಗ್ರಂ' ಮತ್ತು 'ಉಳಿದವರು ಕಂಡಂತೆ' ಚಿತ್ರಗಳನ್ನ ಬೀಟ್ ಮಾಡಿ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ 'ಅತ್ತ್ಯುತ್ತಮ ಚಿತ್ರ'ವಾಗಿ ಹೊರಹೊಮ್ಮಿದೆ.


ಉತ್ತಮ ನಿರ್ದೇಶಕ - ರಕ್ಷಿತ್ ಶೆಟ್ಟಿ

'ಉಳಿದವರು ಕಂಡಂತೆ' ಅಂತಹ ಪ್ರಯೋಗಾತ್ಮಕ ಚಿತ್ರವನ್ನ ನಿರ್ದೇಶಿಸಿದ ರಕ್ಷಿತ್ ಶೆಟ್ಟಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.


ಉತ್ತಮ ಪೋಷಕ ನಟ, ನಟಿ

'ದೃಶ್ಯ' ಚಿತ್ರದಲ್ಲಿನ ನಟನೆಗಾಗಿ ನಟ ಅಚ್ಯುತ್ ಕುಮಾರ್ ಅವರಿಗೆ ಉತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ಇನ್ನೂ ಪೋಷಕ ನಟಿ ವಿಭಾಗದಲ್ಲಿ 'ಒಗ್ಗರಣೆ' ಚಿತ್ರದ ನಟನೆಗಾಗಿ ಸಂಯುಕ್ತ ಹೊರನಾಡ್ ಅವಾರ್ಡ್ ಗಿಟ್ಟಿಸಿದ್ದಾರೆ.


ಉತ್ತಮ ಗಾಯಕ-ಗಾಯಕಿ

'ಉಳಿದವರು ಕಂಡಂತೆ' ಚಿತ್ರದ ಘಾಟಿಯಾ ಇಳಿದು ಹಾಡಿಗೆ ವಿಜಯ್ ಪ್ರಕಾಶ್ ಪ್ರಶಸ್ತಿ ಗಿಟ್ಟಿಸಿದ್ದರೆ, 'ಉಗ್ರಂ' ಚಿತ್ರದ ಹಾಡಿಗೆ ಅನುರಾಧಾ ಭಟ್ ಫಿಲಂಫೇರ್ ಅವಾರ್ಡ್ ಪಡೆದಿದ್ದಾರೆ.


ಉತ್ತಮ ಸಂಗೀತ ನಿರ್ದೇಶಕ

ರಕ್ಷಿತ್ ಶೆಟ್ಟಿ ನಿರ್ದೇಶನದ 'ಉಳಿದವರು ಕಂಡಂತೆ' ಚಿತ್ರದ ಸಂಗೀತ ನಿರ್ದೇಶನಕ್ಕೆ ಅಜನೀಶ್ ಲೋಕನಾಥ್ ಪ್ರಶಸ್ತಿ ಪಡೆದಿದ್ದಾರೆ.


English summary
Rocking Star Yash and Shwetha Srivatsav have bagged Filmfare award for their Best performance in 'Mr and Mrs Ramachari' and 'Fair and Lovely' respectively. Check out the winners list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada