»   » ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ 'ಉಳಿದವರು ಕಂಡಂತೆ' ಲೀಡಿಂಗ್

ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿ 'ಉಳಿದವರು ಕಂಡಂತೆ' ಲೀಡಿಂಗ್

Posted By:
Subscribe to Filmibeat Kannada

ಸೈಮಾ ಪ್ರಶಸ್ತಿ ನಾಮಾಂಕಿತ ಪಟ್ಟಿಯಂತೆ 62ನೇ ಫಿಲಂಫೇರ್ ಪ್ರಶಸ್ತಿ ಪಟ್ಟಿಯ ರೇಸಿನಲ್ಲೂ ಕನ್ನಡದ ಉತ್ತಮ ಚಿತ್ರಗಳು ಸ್ಪರ್ಧಿಸುತ್ತಿವೆ.ರಕ್ಷಿತ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಚಿತ್ರ ಅತಿ ಹೆಚ್ಚು ವಿಭಾಗದಲ್ಲಿ ಸ್ಪರ್ಧೆಯಲ್ಲಿರುವುದು ವಿಶೇಷ.

61ನೇ ಫಿಲಂಫೇರ್ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡದ ಅತ್ಯುತ್ತಮ ಚಿತ್ರವಾಗಿ ಮೈನಾ ಪ್ರಶಸ್ತಿ ಪಡೆದರೆ, ಚಾರ್ ಮಿನಾರ್ ಚಿತ್ರದ ನಟನೆಗಾಗಿ ನೆನಪಿರಲಿ ಪ್ರೇಮ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಶ್ರಾವಣಿ ಸುಬ್ರಮಣ್ಯ ಚಿತ್ರದ ಅತ್ಯುತ್ತಮ ನಟನೆಗಾಗಿ ಅಮೂಲ್ಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.[61ನೇ ಫಿಲಂಫೇರ್ ಪ್ರಶಸ್ತಿ : ಮೈನಾ ಅತ್ಯುತ್ತಮ ಚಿತ್ರ]

ಈ ಬಾರಿ ಫಿಲಂ ಫೇರ್ ಪ್ರಶಸ್ತಿ ಪಟ್ಟಿಯಲ್ಲಿ ಶ್ರೇಷ್ಠ ಚಿತ್ರ, ನಿರ್ದೇಶಕ, ನಟ, ಪೋಷಕ ನಟ, ಸಂಗೀತ, ಗೀತ ಸಾಹಿತ್ಯ, ಗಾಯಕ ಹಾಗೂ ಗಾಯಕಿ ವಿಭಾಗದಲ್ಲಿ ಉಳಿದವರು ಕಂಡಂತೆ ನಾಮಾಂಕಿತಗೊಂಡಿದೆ.

ಈ ಬಾರಿ ಫಿಲಂಫೇರ್ ದಕ್ಷಿಣ ನಾಮಾಂಕಿತರ ಪಟ್ಟಿಯನ್ನು ನೋಡಿದರೆ ಯಾವುದೇ ಭಾಷೆಯಲ್ಲೂ ಯಾವೊಂದು ಚಿತ್ರ ಕೂಡಾ 8 ನಾಮಾಂಕಣ ಪಡೆದುಕೊಂಡಿಲ್ಲ. ಇಂಥದ್ದೊಂದು ಅಪರೂಪದ ಸಾಧನೆಯನ್ನು ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಚಿತ್ರ ಕಂಡಿದೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗಾಗಿ ನೀಡುವ ಈ ಪ್ರಶಸ್ತಿ ಪ್ರಧಾನ ಸಮಾರಂಭ ಚೆನ್ನೈ ನಗರದಲ್ಲಿ ನಡೆಯಲಿದೆ. [ಸೈಮಾ ಪ್ರಶಸ್ತಿ ನಾಮಾಂಕಿತರ ಪಟ್ಟಿ]ಉಳಿದಂತೆ ಇನ್ನು ಯಾವ ಯಾವ ಚಿತ್ರ ರೇಸಿನಲ್ಲಿದೆ ನೋಡಿ...

ಶ್ರೇಷ್ಠ ಚಿತ್ರ

* ದೃಶ್ಯ
* ಗಜಕೇಸರಿ
* ಮಿ ಅಂಡ್ ಮಿಸೆಸ್ ರಾಮಾಚಾರಿ
* ಉಗ್ರಂ
* ಉಳಿದವರು ಕಂಡಂತೆ

ಶ್ರೇಷ್ಠ ನಿರ್ದೇಶಕ

* ಪ್ರಕಾಶ್ ರಾಜ್-ಒಗ್ಗರಣೆ
* ಪ್ರಶಾಂತ್ ನೀಲ್-ಉಗ್ರಂ
* ರಕ್ಷಿತ್ ಶೆಟ್ಟಿ-ಉಳಿದವರು ಕಂಡಂತೆ
* ಎಸ್ ಕೃಷ್ಣ-ಗಜಕೇಸರಿ
* ಸಂತೋಷ್ ಆನಂದ್ ರಾಮ್-ಮಿ ಅಂಡ್ ಮಿಸೆಸ್ ರಾಮಾಚಾರಿ

ಶ್ರೇಷ್ಠ ನಟ

* ಪುನೀತ್ ರಾಜ್ ಕುಮಾರ್ -ಪವರ್ ***
* ರಕ್ಷಿತ್ ಶೆಟ್ಟಿ- ಉಳಿದವರು ಕಂಡಂತೆ
* ಶರಣ್-ಅಧ್ಯಕ್ಷ
* ಶ್ರೀಮುರಳಿ-ಉಗ್ರಂ
* ಯಶ್- ಮಿ ಅಂಡ್ ಮಿಸೆಸ್ ರಾಮಾಚಾರಿ

ಶ್ರೇಷ್ಠ ನಟಿ

* ಹರಿಪ್ರಿಯ-ಉಗ್ರಂ
* ಕೃತಿ ಕರಬಂದ- ಸೂಪರ್ ರಂಗಾ
* ರಾಧಿಕಾ ಪಂಡಿತ್- ಮಿ ಅಂಡ್ ಮಿಸೆಸ್ ರಾಮಾಚಾರಿ
* ರಾಗಿಣಿ-ರಾಗಿಣಿ ಐಪಿಎಸ್
* ಶ್ವೇತ ಶ್ರೀವಾಸ್ತವ್- ಫೇರ್ ಅಂಡ್ ಲವ್ಲಿ

ಪೋಷಕ ನಟ

* ಅಚ್ಯುತ್ ಕುಮಾರ್-ದೃಶ್ಯ
* ಹರೀಶ್ ರಾಜ್-ಪವರ್ ***
* ಕಿಶೋರ್- ಉಳಿದವರು ಕಂಡಂತೆ
* ತಿಲಕ್ -ಉಗ್ರಂ
* ವಿ ರವಿಚಂದ್ರನ್-ಮಾಣಿಕ್ಯ

ಪೋಷಕ ನಟಿ

* ಆಶಾ ಶರತ್ -ದೃಶ್ಯ
* ಮಾಳವಿಕಾ- ಮಿ ಅಂಡ್ ಮಿಸೆಸ್ ರಾಮಾಚಾರಿ
* ಸಂಯುಕ್ತ ಹೊರನಾಡು- ಒಗ್ಗರಣೆ
* ಪದ್ಮಜಾ ರಾವ್-ಉಗ್ರಂ
* ಸುಮಿತ್ರಾ-ಶಿವಾಜಿನಗರ

ಶ್ರೇಷ್ಠ ಸಂಗೀತ

* ಅರ್ಜುನ್ ಜನ್ಯ- ಅಧ್ಯಕ್ಷ
* ಬಿ ಅಜನೀಶ್ ಲೋಕನಾಥ್- ಉಳಿದವರು ಕಂಡಂತೆ
* ಮಣಿಶರ್ಮ-ನಿನ್ನಿಂದಲೇ
* ರವಿ ಬಸ್ರೂರು- ಉಗ್ರಂ
* ವಿ ಹರಿಕೃಷ್ಣ- ಮಿ ಅಂಡ್ ಮಿಸೆಸ್ ರಾಮಾಚಾರಿ

ಗೀತ ಸಾಹಿತ್ಯ

* ಕೆ ಕಲ್ಯಾಣ್- ಜೀವ ಜೀವ (ಮಾಣಿಕ್ಯ)
* ಕವಿರಾಜ್- ನಿಂತೆ ನಿಂತೆ (ನಿನ್ನಿಂದಲೇ)
* ರಕ್ಷಿತ್ ಶೆಟ್ಟಿ- ಘಾಟಿಯ ಇಳಿದು (ಉಳಿದವರು ಕಂಡಂತೆ)
* ವಿ ನಾಗೇಂದ್ರ ಪ್ರಸಾದ್- ಕಣ್ಣಲ್ಲಿ.. (ಅಂಬರೀಷ)
* ಯೋಗರಾಜ್ ಭಟ್- ಓಪನ್ ಹೇರು (ಅಧ್ಯಕ್ಷ)

ಶ್ರೇಷ್ಠ ಗಾಯಕ

* ಕೈಲಾಶ್ ಖೇರ್- ಈ ಜುನುಮವೇ (ಒಗ್ಗರಣೆ)
* ಪುನೀತ್ ರಾಜ್ ಕುಮಾರ್ -ಗುರುವಾರ ಸಂಜೆ (ಪವರ್ ***)
* ಸೋನು ನಿಗಮ್ - ರಿಂಗ್ ಆಗಿದೆ ನನ್ ಎದೆಯಲ್ಲಿ ಫೋನು (ಫೇರ್ ಅಂಡ್ ಲವ್ಲಿ)
* ವಿಜಯ್ ಪ್ರಕಾಶ್ -ಘಾಟಿಯ ಉಳಿದು (ಉಳಿದವರು ಕಂಡಂತೆ)
* ಯಶ್- ಅಣ್ತಮ್ಮ (ಮಿ ಅಂಡ್ ಮಿಸೆಸ್ ರಾಮಾಚಾರಿ)

ಶ್ರೇಷ್ಠ ಗಾಯಕಿ

* ಅನುರಾಧಾ ಭಟ್ - ಉಗ್ರಂ ಹಾಡು
* ಅರ್ಚನಾ ರವಿ- ಕಣ್ಣಲ್ಲೇ (ಅಧ್ಯಕ್ಷ)
* ಮಾಲತಿ -ಪಂಟರ ಪಂಟ (ಮಾಣಿಕ್ಯ)
* ಶ್ರೇಯಾ ಘೋಷಾಲ್ -ಕಾಕಿಗ್ ಬಣ್ಣ (ಉಳಿದವರು ಕಂಡಂತೆ
* ಸಿಂಚನ್ ದೀಕ್ಷಿತ್ -ಕರೆಂಟು ಹೋದ ಟೈಮಲ್ಲಿ (ಲವ್ ಇನ್ ಮಂಡ್ಯ)

English summary
The nominations for 62nd Filmfare Awards South 2015 was announced. Ulidavrau Kandate movie with 8 nomination in various categories leads the list. Puneeth Rajkumar, Rakshit Shetty, Sharan, Srimurali, Yash in 'Best Actor' Category.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada