»   » ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಕನ್ನಡಿಗ ಸಂಚಾರಿ ವಿಜಯ್ ಅತ್ಯುತ್ತಮ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಕನ್ನಡಿಗ ಸಂಚಾರಿ ವಿಜಯ್ ಅತ್ಯುತ್ತಮ

Posted By:
Subscribe to Filmibeat Kannada

62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಮಂಗಳವಾರ ಘೋಷಿಸಲಾಗಿದೆ. ಕ್ವೀನ್ ಚಿತ್ರದ ನಾಯಕಿ ಕಂಗನಾ ರನೌತ್ ಶ್ರೇಷ್ಠ ನಟಿ ಹಾಗೂ 'ನಾನು ಅವನಲ್ಲ ಅವಳು' ಕನ್ನಡ ಚಿತ್ರದ ನಾಯಕ ಸಂಚಾರಿ ವಿಜಯ್ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಗಳಿಸಿದ್ದಾರೆ.

ಕಂಗನಾ ರನೌತ್ ಅವರಿಗೆ ಇದು ಎರಡನೇ ರಾಷ್ಟ್ರೀಯ ಪ್ರಶಸ್ತಿಯಾಗಿದ್ದು, 2008ರಲ್ಲಿ ಮಧುರ್ ಭಂಡಾರ್ಕರ್ ಅವರ ಚಿತ್ರ 'ಫ್ಯಾಷನ್' ನಲ್ಲಿನ ಪೋಷಕ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗಳಿಸಿದ್ದರು.

ಮೇ.3ರಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶ್ರೇಷ್ಠ ನಟ ಪ್ರಶಸ್ತಿ ಪಡೆದ ಕನ್ನಡಿಗ ಸಂಚಾರಿ ವಿಜಯ್ ಅವರಿಗೆ ರಜತ ಕಮಲ ಹಾಗೂ 50,000ರು ನಗದು ಬಹುಮಾನ ಲಭಿಸಲಿದೆ. [ನಾನು ಅವನಲ್ಲ, ಅವಳು ಟ್ರೇಲರ್]

Kangana And Sanchari Vijay

* ಶ್ರೇಷ್ಠ ಚಿತ್ರ: ಕೋರ್ಟ್ (ಮರಾಠಿ)
* ಶ್ರೇಷ್ಠ ನಟ: ಸಂಚಾರಿ ವಿಜಯ್ (ಕನ್ನಡ)
* ಶ್ರೇಷ್ಠ ನಟಿ: ಕಂಗನಾ ರನೌತ್ (ಹಿಂದಿ)
* ಶ್ರೇಷ್ಠ ಗಾಯಕಿ: ಉತ್ತರ ಉನ್ನಿಕೃಷ್ಣನ್ (ಚಿತ್ರ: ಸೈವಂ)
* ಶ್ರೇಷ್ಠ ಗಾಯಕ: ಸುಖ್ವಿಂದರ್ ಸಿಂಗ್ (ಚಿತ್ರ: ಹೈದರ್)

* ಶ್ರೇಷ್ಠ ಪರಿಸರ ಚಿತ್ರ: ಒಟ್ಟಲ್ (ಜಯರಾಜ್ ನಿರ್ದೇಶನ)
* ಶ್ರೇಷ್ಠ ಸಂಗೀತಗಾರ: ವಿಶಾಲ್ ಭಾರದ್ವಾಜ್ (ಹೈದರ್)
* ವಿಶೇಷ ಜ್ಯೂರಿ ಪ್ರಶಸ್ತಿ: ಮುಹಮ್ಮದ್ ಮುಸ್ತಫಾ
* ಜನಪ್ರಿಯ ಚಲನಚಿತ್ರ: ಮೇರಿ ಕೋಮ್ (ಹಿಂದಿ)
* ಶ್ರೇಷ್ಠ ಪೋಷಕ ನಟ:ಬಾಬ್ಬಿ ಸಿಂಹ, ಜಿಗರ್ಥಾಂಡ (ತಮಿಳು)
* ಶ್ರೇಷ್ಠ ಪೋಷಕ ನಟಿ: ಬಲ್ಜಿಂದರ್ ಕೌರ್, ಪಗ್ಡಿ ದಿ ಹಾನರ್ (ಹರ್ಯಾನ್ವಿ೦
* ಶ್ರೇಷ್ಠ ನೃತ್ಯ ಸಂಯೋಜನೆ: ಹೈದರ್ (ಬಿಸ್ಮಿಲ್)
* ಇಂದಿರಾ ಗಾಂಧಿ ಪ್ರಶಸ್ತಿ: ಆಶಾ ಜೋಹರ್ ಮಾಜೆ (ಬೆಂಗಾಲಿ)
* ಸಾಮಾಜಿಕ ಕಳಕಳಿ ಚಿತ್ರ: ಚೋತೊದರ್ ಚೋಬಿ (ಬೆಂಗಾಲಿ)
* ಶ್ರೇಷ್ಠ ನಿರ್ದೇಶನ: ಚತುಷ್ಕೋಣೆ (ಬೆಂಗಾಲಿ) ಶ್ರೀಜಿತ್ ಮುಖರ್ಜಿ
* ಶ್ರೇಷ್ಠ ಹಿನ್ನಲೆ ಸಂಗೀತ: ಗೋಪಿ ಸುಂದರ್ (1983)
* ಶ್ರೇಷ್ಠ ಗೀತ ಸಾಹಿತ್ಯ : ಸೈವಂ (ತಮಿಳು) ಅಳಗು: ಎನ್ ಎ ಮುತ್ತುಕುಮಾರ್.

62nd National Film Awards Kangana and Sanchari Vijay Best

* ಶ್ರೇಷ್ಠ ಮೂಲ ಚಿತ್ರಕಥೆ: ಚತುಷ್ಕೋಣೆ (ಬೆಂಗಾಲಿ) : ಶ್ರೀಜಿತ್ ಮುಖರ್ಜಿ
* ಶ್ರೇಷ್ಠ ಸಂಭಾಷಣೆ: ಹೈದರ್ (ಹಿಂದಿ) ವಿಶಾಲ್ ಭಾರದ್ವಾಜ್
* ಶ್ರೇಷ್ಠ ಸಂಕಲನ : ಜಿಗಾರ್ಥಾಂಡ (ತಮಿಳು) ವಿವೇಕ್ ಹರ್ಷನ್
* ಶ್ರೇಷ್ಠ ಪ್ರಸಾದನ ಕಲಾವಿದ: ನಾನು ಅವನಲ್ಲ ಅವಳು (ಕನ್ನಡ) ನಾಗರಾಜು ಹಾಗೂ ರಾಜು

* ಶ್ರೇಷ್ಠ ಚಿತ್ರಕಥೆ : ಒಟ್ಟಲ್ (ಮಲಯಾಳಂ) : ಜೋಶಿ ಮಂಗಲಾಥ್
* ಶ್ರೇಷ್ಠ ಮಕ್ಕಳ ಚಿತ್ರ: ಕಾಕ ಮುಟ್ಟೈ(ತಮಿಳು), ಎಲಿಜಬತ್ ಏಕಾದಶಿ (ಮರಾಠಿ)
* ಶ್ರೇಷ್ಠ ಬಾಲ ನಟ: ಕಾಕ ಮುಟ್ಟೈ(ತಮಿಳು) ಜೆ ವಿಘ್ನೇಶ್ ಹಾಗೂ ರಮೇಶ್.

* ಶ್ರೇಷ್ಠ ಛಾಯಾಗ್ರಾಹಕ: ಚತುಷ್ಕೋಣೆ (ಬೆಂಗಾಲಿ) ಸುದೀಪ್ ಚಟರ್ಜಿ
*

ಪ್ರಾದೇಶಿಕ ಚಿತ್ರ:
* ಹರಿವು : ಕನ್ನಡ ಚಿತ್ರ, ನಿರ್ಮಾಣ ಓಂ ಸ್ಟುಡಿಯೋ, ನಿರ್ದೇಶಕ: ಮಂಜುನಾಥ್ (ಮನ್ಸೋರೆ) 1,00,000 ನಗದು, ರಜತ್ ಕಮಲ.
* ನಾಚೋಮ್-ಐಎ ಕಂಪಸಾರ್: ಕೊಂಕಣಿ
* ಕಿಲ್ಲಾ: ಮರಾಠಿ
* ನಿರ್ಭಶಿತೋ: ಬೆಂಗಾಲಿ
* ಒಥೆಲೋ: ಅಸ್ಸಾಮಿ
* ಕುಟ್ರಂ ಕಡಿಥಾಲ್: ತಮಿಳು
* ಚಂದಮಾಮ ಕಥಲು: ತೆಲುಗು

English summary
62nd National Film Awards announced today(Mar.24) Kangana Ranaut has been named Best Actress and Kannada actor Sanchari Vijay is Best Actor.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada