»   » 63ನೇ ಫಿಲಂಫೇರ್ ಪ್ರಶಸ್ತಿ: ಪುನೀತ್ ಮತ್ತು ಪಾರುಲ್ 'ದಿ ಬೆಸ್ಟ್'.!

63ನೇ ಫಿಲಂಫೇರ್ ಪ್ರಶಸ್ತಿ: ಪುನೀತ್ ಮತ್ತು ಪಾರುಲ್ 'ದಿ ಬೆಸ್ಟ್'.!

Posted By:
Subscribe to Filmibeat Kannada

ಪ್ರತಿಷ್ಠಿತ 63ನೇ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ಹೈದರಾಬಾದ್ ನಲ್ಲಿರುವ 'ಹೈದರಾಬಾದ್ ಕನ್ವೆನ್ಷನ್ ಸೆಂಟರ್'ನಲ್ಲಿ ಅದ್ಧೂರಿಯಾಗಿ ನಡೆಯಿತು.

ಶ್ರೇಷ್ಠ ಚಿತ್ರ ಜೊತೆಗೆ, ನಿರ್ದೇಶಕ, ಪೋಷಕ ನಟ, ಪೋಷಕ ನಟಿ, ಸಂಗೀತ ಹಾಗೂ ಗಾಯಕಿ ವಿಭಾಗಗಳಲ್ಲಿ ನಾಮಾಂಕಿತಗೊಂಡಿದ್ದ ಹೊಸಬರ 'ರಂಗಿತರಂಗ' ಚಿತ್ರ ನಾಲ್ಕು ಪ್ರಶಸ್ತಿಗಳನ್ನು ಬಾಚುವಲ್ಲಿ ಯಶಸ್ವಿಯಾಗಿದೆ. [63ನೇ ಫಿಲಂಫೇರ್ ಪ್ರಶಸ್ತಿ: ರಂಗಿತರಂಗ 6 ವಿಭಾಗಗಳಲ್ಲಿ ಸ್ಪರ್ಧೆ]

ಇನ್ನೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ (ಕ್ರಿಟಿಕ್ಸ್ ಜ್ಯೂರಿ ಅವಾರ್ಡ್) ಉತ್ತಮ ನಟ ಪ್ರಶಸ್ತಿ ಪಡೆದು 'ಕಪ್ಪು ಸುಂದರಿ'ಯನ್ನು ಮುತ್ತಿಕ್ಕಿದ್ದು ವಿಶೇಷ. 63ನೇ ಫಿಲಂಫೇರ್ ಪ್ರಶಸ್ತಿಯನ್ನು ಪಡೆದ ಕನ್ನಡ ಪ್ರತಿಭೆಗಳ ಪಟ್ಟಿ ಇಲ್ಲಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಉತ್ತಮ ನಟ - ಪುನೀತ್ ರಾಜ್ ಕುಮಾರ್

ಪವನ್ ಒಡೆಯರ್ ನಿರ್ದೇಶನದ 'ರಣವಿಕ್ರಮ' ಚಿತ್ರದಲ್ಲಿ ನೀಡಿದ ಪವರ್ ಫುಲ್ ಪರ್ಫಾಮೆನ್ಸ್ ಗಾಗಿ ಪುನೀತ್ ರಾಜ್ ಕುಮಾರ್ 'ಉತ್ತಮ ನಟ' ಪ್ರಶಸ್ತಿ ಪಡೆದಿದ್ದಾರೆ. ಶ್ರೇಷ್ಟ ನಟ ರೇಸ್ ನಲ್ಲಿದ್ದವರು ಯಶ್ (ಮಾಸ್ಟರ್ ಪೀಸ್), ಅಜೇಯ್ ರಾವ್ (ಕೃಷ್ಣಲೀಲಾ), ಸಂಚಾರಿ ವಿಜಯ್ (ನಾನು ಅವನಲ್ಲ ಅವಳು) ಹಾಗೂ ಶಿವರಾಜ್ ಕುಮಾರ್ (ವಜ್ರಕಾಯ). [ಯಾರು ಅತ್ಯುತ್ತಮ ನಟ: ಯಶ್ ಅಥವಾ ಪುನೀತ್.?]

ಉತ್ತಮ ನಟಿ - ಪಾರುಲ್ ಯಾದವ್

'ಆಟಗಾರ' ಚಿತ್ರದ ಅಭಿನಯಕ್ಕಾಗಿ ನಟಿ ಪಾರುಲ್ ಯಾದವ್ 'ಉತ್ತಮ ನಟಿ' ಪ್ರಶಸ್ತಿ ಪಡೆದಿದ್ದಾರೆ. ಶ್ರೇಷ್ಠ ನಟಿ ರೇಸ್ ನಲ್ಲಿದ್ದವರು ಮಯೂರಿ (ಕೃಷ್ಣಲೀಲಾ), ನಭಾ ನಟೇಶ್ (ವಜ್ರಕಾಯ), ರಚಿತಾ ರಾಮ್ (ರನ್ನ) ಹಾಗೂ ಶಾನ್ವಿ ಶ್ರೀವಾತ್ಸವ್ (ಮಾಸ್ಟರ್ ಪೀಸ್) [63ನೇ ಫಿಲಂಫೇರ್ ಪ್ರಶಸ್ತಿ: ರಂಗಿತರಂಗ 6 ವಿಭಾಗಗಳಲ್ಲಿ ಸ್ಪರ್ಧೆ]

ಉತ್ತಮ ಚಿತ್ರ - ರಂಗಿತರಂಗ

'ಆಟಗಾರ', 'ಕೃಷ್ಣಲೀಲಾ', 'ಮೈತ್ರಿ' ಹಾಗೂ 'ರಣವಿಕ್ರಮ' ಚಿತ್ರಗಳನ್ನು ಹಿಂದಕ್ಕೆ ತಳ್ಳಿ 'ರಂಗಿತರಂಗ' ಚಿತ್ರ 'ಉತ್ತಮ ಚಿತ್ರ' ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಉತ್ತಮ ನಿರ್ದೇಶಕ - ಅನೂಪ್ ಭಂಡಾರಿ

ಮೊದಲ ಪ್ರಯತ್ನದಲ್ಲೇ ಯಶಸ್ಸಿನ ಸಿಹಿ ಸವಿದಿರುವ ಅನೂಪ್ ಭಂಡಾರಿ 'ರಂಗಿತರಂಗ' ಚಿತ್ರಕ್ಕಾಗಿ ಕಪ್ಪು ಸುಂದರಿಯನ್ನು ಎತ್ತಿ ಹಿಡಿದಿದ್ದಾರೆ.

ಉತ್ತಮ ಪೋಷಕ ನಟ - ಸಾಯಿ ಕುಮಾರ್

'ರಂಗಿತರಂಗ' ಚಿತ್ರದ ಅಮೋಘ ಅಭಿನಯಕ್ಕಾಗಿ ಸಾಯಿ ಕುಮಾರ್ ಉತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಉತ್ತಮ ಪೋಷಕ ನಟಿ - ಸುಧಾರಾಣಿ

'ವಾಸ್ತುಪ್ರಕಾರ' ಚಿತ್ರದ ಬಜಾರಿ ಪಾತ್ರಕ್ಕೆ ನಟಿ ಸುಧಾರಾಣಿ 'ಉತ್ತಮ ಪೋಷಕ ನಟಿ' ಪ್ರಶಸ್ತಿ ಪಡೆದಿದ್ದಾರೆ.

ಉತ್ತಮ ಸಂಗೀತ - ಶ್ರೀಧರ್.ವಿ.ಸಂಭ್ರಮ್

'ಕೃಷ್ಣಲೀಲಾ' ಚಿತ್ರದ ಮನ ಮಿಡಿಯುವ ಟ್ಯೂನ್ ಗಳಿಗಾಗಿ ಶ್ರೀಧರ್.ವಿ.ಸಂಭ್ರಮ್ 'ಉತ್ತಮ ಸಂಗೀತ ನಿರ್ದೇಶಕ' ಪ್ರಶಸ್ತಿ ಪಡೆದಿದ್ದಾರೆ.

ಉತ್ತಮ ಸಾಹಿತ್ಯ - ಜಯಂತ್ ಕಾಯ್ಕಿಣಿ

'ಕೆಂಡಸಂಪಿಗೆ' ಚಿತ್ರದ 'ನೆನಪೇ ನಿತ್ಯ ಮಲ್ಲಿಗೆ...' ಹಾಡಿಗಾಗಿ ಜಯಂತ್ ಕಾಯ್ಕಿಣಿ ರವರಿಗೆ 'ಉತ್ತಮ ಸಾಹಿತ್ಯ' ಪ್ರಶಸ್ತಿ ಸಿಕ್ಕಿದೆ.

ಉತ್ತಮ ಗಾಯಕ-ಗಾಯಕಿ

'ರಂಗಿತರಂಗ' ಚಿತ್ರದ 'ಕರೆಯೋಲೆ...' ಹಾಡಿಗೆ ಇಂಚರ ರಾವ್ 'ಉತ್ತಮ ಹಿನ್ನಲೆ ಗಾಯಕಿ' ಪ್ರಶಸ್ತಿ ಪಡೆದರೆ, 'ರಾಟೆ' ಚಿತ್ರದ 'ರಾಜಾ ರಾಣಿಯಂತೆ...' ಹಾಡಿಗೆ ಸಂತೋಷ್ ವೆಂಕಿಗೆ 'ಉತ್ತಮ ಹಿನ್ನಲೆ ಗಾಯಕ' ಪ್ರಶಸ್ತಿ ಸಿಕ್ಕಿದೆ.

(ಕ್ರಿಟಿಕ್ಸ್ ಜ್ಯೂರಿ ಅವಾರ್ಡ್) ಉತ್ತಮ ನಟಿ - ರಚಿತಾ ರಾಮ್

'ರನ್ನ' ಚಿತ್ರದ ನಟನೆಗಾಗಿ ನಟಿ ರಚಿತಾ ರಾಮ್ ಗೆ (ಕ್ರಿಟಿಕ್ಸ್ ಜ್ಯೂರಿ ಅವಾರ್ಡ್) ಉತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

(ಕ್ರಿಟಿಕ್ಸ್ ಜ್ಯೂರಿ ಅವಾರ್ಡ್) ಉತ್ತಮ ನಟ - ಸಂಚಾರಿ ವಿಜಯ್

'ನಾನು ಅವನಲ್ಲ..ಅವಳು' ಚಿತ್ರದಲ್ಲಿ 'ಮಂಗಳಮುಖಿ'ಯಾಗಿ ನಟಿಸಿದ್ದ ಸಂಚಾರಿ ವಿಜಯ್ ಗೆ (ಕ್ರಿಟಿಕ್ಸ್ ಜ್ಯೂರಿ ಅವಾರ್ಡ್) ಉತ್ತಮ ನಟ ಪ್ರಶಸ್ತಿ ಲಭಿಸಿದೆ.

English summary
Power Star Puneeth Rajkumar and Parul Yadav have bagged Filmfare award for their Best performance in 'Ranavikrama' and 'Aatagara' respectively. Check out the winners list.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada