For Quick Alerts
  ALLOW NOTIFICATIONS  
  For Daily Alerts

  67 ವರ್ಷದಲ್ಲಿ ಮೊದಲ ಬಾರಿ ಬೆಂಗಳೂರಲ್ಲಿ ಫಿಲಂಫೇರ್‌: ಸ್ಥಳ, ದಿನಾಂಕ ಇತರೆ ಮಾಹಿತಿ ಇಲ್ಲಿದೆ

  |

  ಭಾರತದಲ್ಲಿ ಸಿನಿಮಾಕ್ಕೆ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಫಿಲಂಫೇರ್ ಪ್ರಮುಖವಾದುದು, ಬ್ಲಾಕ್ ಲೇಡಿ ಅಥವಾ ಭಾರತದ ಆಸ್ಕರ್ ಎಂದು ಕರೆಯಲಾಗುವ ಫಿಲಂಫೇರ್ ಈ ವರ್ಷ ಬೆಂಗಳೂರಿನಲ್ಲಿ ನಡೆಯುತ್ತಿರುವುದು ವಿಶೇಷ.

  ಫಿಲಂಫೇರ್ ಪ್ರಶಸ್ತಿ ಪ್ರಾರಂಭವಾಗಿ 67 ವರ್ಷಗಳಾಗಿವೆ ಆದರೆ ಈ ವರೆಗೆ ಒಮ್ಮೆಯೂ ಸಹ ಬೆಂಗಳೂರಿನಲ್ಲಿ ಫಿಲಂಫೇರ್ ಆಯೋಜಿಸಲಾಗಿಲ್ಲ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಫಿಲಂಫೇರ್‌ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.

  ಬೆಂಗಳೂರಿನ ತುಮಕೂರು ರಸ್ತೆಯ 10ನೇ ಮೈಲಿಯಲ್ಲಿರುವ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಇಂಟರ್ನ್ಯಾಷನಲ್ ಎಕ್ಸಿಬಿಶನ್ ಸೆಂಟರ್) ನಲ್ಲಿ ನಾಳೆ ಅಂದರೆ ಅಕ್ಟೋಬರ್ 09 ರಂದು ಸಂಜೆ 4:30ಗೆ ಫಿಲಂಫೇರ್ ಪ್ರಶಸ್ತಿ ಸಮಾರಂಭ ಆರಂಭವಾಗಲಿದೆ.

  ಬಾಲಿವುಡ್‌ನ ಜನಪ್ರಿಯ ಸ್ಟಾರ್ ನಟ, ನಟಿಯರ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದಿಂದಲೂ ದಿಗ್ಗಜ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಾರ್ವಜನಿಕರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದಾಗಿದ್ದು, ಇದಕ್ಕಾಗಿ ಟಿಕೆಟ್ ಖರೀದಿ ಮಾಡಬೇಕಾಗಿದೆ.

  ಟಿಕೆಟ್‌ಗಳು ಬುಕ್‌ಮೈ ಶೋನಲ್ಲಿ ಲಭ್ಯ

  ಟಿಕೆಟ್‌ಗಳು ಬುಕ್‌ಮೈ ಶೋನಲ್ಲಿ ಲಭ್ಯ

  ಟಿಕೆಟ್‌ಗಳು ಬುಕ್‌ಮೈಶೋ ನಲ್ಲಿ ಲಭ್ಯವಿದ್ದು, 1500 ರಿಂದ ಆರಂಭವಾಗಿ 5000 ದವರೆಗೆ ಟಿಕೆಟ್‌ಗಳು ಲಭ್ಯವಿವೆ. ಕಾರ್ಯಕ್ರಮವನ್ನು ಕನ್ನಡದ ನಟ ರಮೇಶ್ ಅರವಿಂದ್ ಸೇರಿದಂತೆ ಇನ್ನೂ ಹಲವರು ನಿರೂಪಣೆ ಮಾಡಲಿದ್ದಾರೆ. ಕಾರ್ಯಕ್ರಮದ ಆರಂಭ ಸಂಜೆ 4:30 ಗೆ ನಡೆಯಲಿದೆ. ಮೊದಲಿಗೆ ರೆಡ್ ಕಾರ್ಪೆಟ್ ನಡೆಯಲಿದ್ದು, ಆ ಬಳಿಕ ಮುಖ್ಯ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವು ತಡರಾತ್ರಿ 1 ಗಂಟೆಯ ವರೆಗೂ ನಡೆಯಲಿದೆ.

  ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ

  ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ

  2020 ರಲ್ಲಿಯೇ ಫಿಲಂಫೇರ್‌ ಬೆಂಗಳೂರಿನಲ್ಲಿ ನಡೆಯಬೇಕಿತ್ತು ಕೋವಿಡ್ ಇದ್ದ ಕಾರಣ ಫಿಲಂಫೇರ್ ಪ್ರಶಸ್ತಿ ಸಮಾರಂಭ ಮುಂದೂಡಲಾಗಿತ್ತು, ಆದರೆ ಅಂತಿಮವಾಗಿ ನಾಳೆ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ. ಕಾರ್ಯಕ್ರಮದ ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟ ನಟಿಯರು ಹಾಗೂ ಹಿರಿಯ ನಟ-ನಟಿಯರು, ತಂತ್ರಜ್ಞರಿಗೆ ವಿಶೇಷ ಆಹ್ವಾನ ನೀಡಲಾಗಿದ್ದು, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

  ಅಲ್ಲು ಅರ್ಜುನ್, ಸೂರ್ಯಾ, ಕಾರ್ತಿ, ಪೂಜಾ ಹೆಗ್ಡೆ

  ಅಲ್ಲು ಅರ್ಜುನ್, ಸೂರ್ಯಾ, ಕಾರ್ತಿ, ಪೂಜಾ ಹೆಗ್ಡೆ

  ನೆರೆಯ ಚಿತ್ರರಂಗಗಳಿಂದ ಸುಮಾರು 150-200 ಮಂದಿ ಸೆಲೆಬ್ರಿಟಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಲ್ಲು ಅರ್ಜುನ್, ಸೂರ್ಯಾ, ಕಾರ್ತಿ, ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್, ಸಮಂತಾ ಇನ್ನು ಹಲವು ಸ್ಟಾರ್ ನಟ-ನಟಿಯರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕನ್ನಡ ಚಿತ್ರರಂಗದಿಂದ ಯಶ್ ಸೇರಿದಂತೆ ದೊಡ್ಡ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್ ಸೇರಿ ಹಲವರು ವೇದಿಕೆ ಮೇಲೆ ಪ್ರದರ್ಶನ ನೀಡಲಿದ್ದಾರೆ.

  20,000 ಜನರಿಗೆ ಕಾರ್ಯಕ್ರಮ ಆಯೋಜನೆ

  20,000 ಜನರಿಗೆ ಕಾರ್ಯಕ್ರಮ ಆಯೋಜನೆ

  20,000 ಜನರು ಕುಳಿತು ನೋಡಬಹುದಾದ ದೊಡ್ಡ ಹಾಲ್ ಅನ್ನು ಬುಕ್ ಮಾಡಿಕೊಂಡಿದ್ದು, ಯಾರಿಗೂ ಸಮಸ್ಯೆ ಆಗದಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ನಿರ್ಮಾಪಕರ ಸಂಘ, ನಿರ್ದೇಶಕರ ಸಂಘಗಳಿಗೆ ಸೇರಿ ಫಿಲಂ ಚೇಂಬರ್‌ನಲ್ಲಿ 1000 ಪಾಸುಗಳನ್ನು ನೀಡಿದ್ದೇವೆ. ಬಹುತೇಕ ಹಿರಿಯ ನಟರಿಗೆ ತಂತ್ರಜ್ಞರಿಗೆ ವಿಶೇಷ ಆಹ್ವಾನ ನೀಡಿ ಪಾಸ್ ನೀಡಿದ್ದೇವೆ. ಮಾಧ್ಯಮಗಳಿಗೂ ಪಾಸ್ ನೀಡಿದ್ದೇವೆ. ಯಾರಿಗೂ ಅಸಮಾಧಾನ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ಆಯೋಜಕರು.

  English summary
  67th Filmfare award is in Bengaluru. This is the first time Bengaluru hosting Filmfare event. Here is the time, venue, ticket and other information.
  Saturday, October 8, 2022, 16:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X