20 ಅತ್ಯುತ್ತಮ ಸಿನಿಮಾಗಳು: ಯಾವ ಭಾಷೆಯ, ಯಾವ ಸಿನಿಮಾಗಳಿಗೆ ಪ್ರಶಸ್ತಿ?
67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಗೊಂಡಿದೆ. ಅತ್ಯುತ್ತಮ ನಟಿ ಪ್ರಶಸ್ತಿ ಕಂಗನಾ ರಣೌತ್ ಪಾಲಾಗಿದ್ದರೆ. ಅತ್ಯುತ್ತಮ ನಟ ಪ್ರಶಸ್ತಿಯನ್ನು ಮನೋಜ್ ಬಾಜಪೇಯಿ ಹಾಗೂ ಧನುಷ್ ಹಂಚಿಕೊಂಡಿದ್ದಾರೆ.
2019 ರ ಸಾಲಿನ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಮಲಯಾಳಂ ನ 'ಮರಕ್ಕರ್' ಪಡೆದುಕೊಂಡಿದೆ. ಇದರ ಜೊತೆಗೆ ವಿವಿಧ ಭಾಷೆಗಳಲ್ಲಿ ಆಯಾ ಭಾಷೆಯ ಅತ್ಯುತ್ತಮ ಸಿನಿಮಾವನ್ನು ಸಹ ಜ್ಯೂರಿ ಆಯ್ಕೆ ಮಾಡಿದೆ.
ಕನ್ನಡದಲ್ಲಿ ಅಕ್ಷಿ, ತುಳುವಿನ ಪಿಂಗಾರಾ ಹೀಗೆ ಭಾರತದ ಹಲವು ಭಾಷೆಗಳಿಂದ ಆಯಾ ಭಾಷೆಯ ಒಂದು ಸಿನಿಮಾವನ್ನು ಆಯ್ಕೆ ಮಾಡಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ಅಸ್ಸಾಮಿ ಹೀಗೆ ಹಲವಾರು ಭಾಷೆಯ ಸಿನಿಮಾಗಳನ್ನು ಅತ್ಯುತ್ತಮ ಸಿನಿಮಾಗಳೆಂದು ಆಯ್ಕೆ ಮಾಡಲಾಗಿದ್ದು, ಅತ್ಯುತ್ತಮ ಸಿನಿಮಾ ಎಂದು ಆಯ್ಕೆಯಾದ ಸಿನಿಮಾಗಳ ಪಟ್ಟಿ ಇಲ್ಲಿದೆ.
* ಕಾಜ್ರೊ: ಕೊಂಕಣಿ ಸಿನಿಮಾ
* ಪಿಂಗಾರಾ- ತುಳು ಸಿನಿಮಾ, ನಿರ್ದೇಶಕ ಪ್ರೀತಂ ಶೆಟ್ಟಿ
* ಅಕ್ಷಿ: ಕನ್ನಡ ಸಿನಿಮಾ, ನಿರ್ದೇಶಕ ಮನೋಜ್ ಕುಮಾರ್
* ಕೇಂಜಿರಾ- ಪನಿಯಾ ಭಾಷೆ
* ಅನು ರುವಾದ್- ಮಿಷಿಂಗ್ ಭಾಷೆ
* ಲಿಡಿಯು- ಖಾಸಿ ಭಾಷೆ
* ಚೋರಿಯಾ ಚೋರೋಂಸೆ ಕಮ್ ನಹೀ- ಹರಿಯಾಣ್ವಿ ಸಿನಿಮಾ
* ಭುಲನ್; ದಿ ಮೇಜ್: ಛತ್ತೀಸ್‌ಗಢಿ ಸಿನಿಮಾ
* ಜೆರ್ಸಿ- ತೆಲುಗು ಸಿನಿಮಾ
* ಅಸುರನ್- ತಮಿಳು ಸಿನಿಮಾ
* ರಬ್ ದಾ ರೇಡಿಯೋ 2: ಪಂಜಾಬಿ ಸಿನಿಮಾ
* ಸಾಲಾ ಬುಡಾರ್ ಬದ್ಲಾ: ಒಡಿಯಾ ಸಿನಿಮಾ
* ಕಾಲಿರಾ ಅತೀತ: ಒಡಿಯಾ ಸಿನಿಮಾ
* ಇಗಿ ಕೋನಾ: ಮಣಿಪುರಿ ಸಿನಿಮಾ
* ಕಳ್ಳ ನೋಟಂ: ಮಲಯಾಳಂ ಸಿನಿಮಾ
* ಬಾರ್ಡೊ: ಮರಾಠಿ ಸಿನಿಮಾ
* ಚಿಚೋರೆ: ಹಿಂದಿ ಸಿನಿಮಾ
* ಗುಮ್ನಾನಿ: ಬಂಗಾಳಿ ಸಿನಿಮಾ
* ರೋನುವಾ; ಹೂ ನೆವರ್ ಸರೆಂಡರ್ಸ್: ಅಸ್ಸಾಮಿ ಸಿನಿಮಾ
* ಮರಕ್ಕರ್ (ಮಲಯಾಳಂ): 67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯ ಅತ್ಯುತ್ತಮ ಸಿನಿಮಾ


Click it and Unblock the Notifications











