For Quick Alerts
ALLOW NOTIFICATIONS  
For Daily Alerts

ಡಿ.26ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

By Mahesh
|

6ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಡಿಸೆಂಬರ್ 26.12.2013 ರಿಂದ ಜನವರಿ 02.01.2014ರವರೆಗೆ ಏರ್ಪಡಿಸಲಾಗಿದೆ. ಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ದಿನಾಂಕ : 26.12.2013ರಂದು ಗುರುವಾರ ಸಂಜೆ ನಡೆಯಲಿದೆ. ನಿಯಮಿತ ಪ್ರದರ್ಶನಗಳು ಡಿಸೆಂಬರ್ 27 ರಂದು ಆರಂಭವಾಗಲಿದೆ. ಬಹುಭಾಷಾ ತಾರೆ ಕಮಲ್ ಹಾಸನ್ ಅವರು ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಪ್ರಕಟಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಮಾರಂಭದಲ್ಲಿ ವಾರ್ತಾ ಸಚಿವ ಖಾತೆಯನ್ನು ಹೊಂದಿರುವ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ವಿವರ ನೀಡಿದರು. ಡಿ.26ರಂದು ಜ್ಞಾನಜ್ಯೋತಿ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆಗೊಳ್ಳಲಿದ್ದು, ಮುಖ್ಯ ಅತಿಥಿಯಾಗಿ ಕಮಲ್ ಹಾಸನ್ ಆಗಮಿಸಲಿದ್ದಾರೆ.

ಚಲನಚಿತ್ರೋತ್ಸವ ಲಾಂಛನ ಬಿಡುಗಡೆ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್.ಡಿ.ಗಂಗರಾಜು, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಎನ್.ಎಂ.ಸುರೇಶ್, ಚಿಂಗಾರಿ ಮಹದೇವ್, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಿತಿ ಅಧ್ಯಕ್ಷ ಎಚ್.ಎನ್.ನರಹರಿರಾವ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಕಾರ್ಯದರ್ಶಿ ಜಯಪ್ರಕಾಶ್ ಹಾಗೂ ಚಿತ್ರರಂಗದ ಗಣ್ಯರು ಉಪಸ್ಥಿತರಿದ್ದರು.

* ಈ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಗೊಳ್ಳಲಿದೆ Fun Cinema, Sigma mall - 3 ಪರದೆಗಳು

* ಲಿಡೋ ಐನಾಕ್ಸ್, ಹಲಸೂರು - 2 ಪರದೆಗಳು

* ಸುಲೋಚನ, (ವಾರ್ತಾ ಇಲಾಖೆ), ಇನ್‍ಫೆಂಟ್ರಿ ರಸ್ತೆ - 1 ಪರದೆ

* ಪ್ರಿಯದರ್ಶಿನಿ, (ಬಾದಾಮಿ ಹೌಸ್) ಎನ್.ಆರ್.ಚೌಕ - 1 ಪರದೆ

* ಚಿತ್ರೋತ್ಸವದ ಒಟ್ಟು 45 ದೇಶಗಳ 152 ಚಿತ್ರಗಳು

* ವಿಶ್ವದ ಸಿನಿಮಾ - 50

* ಏಷ್ಯನ್ ಸಿನಿಮಾ ಸ್ಪರ್ಧೆಯಲ್ಲಿ 10

* ಭಾರತೀಯ ಚಿತ್ರರಂಗದ 10

* ಕನ್ನಡ ಸಿನಿಮಾ 10

* ಕರ್ನಾಟಕ ಉಪಭಾಷೆಗಳು 2

ಇನ್ನಷ್ಟು ಸಿನಿಮಾಗಳ ವಿವರ, ಚಿತ್ರೋತ್ಸವದ ವಿಶೇಷತೆಗಳುವಿಶೇಷ ಆಹ್ವಾನಿತರು, ಪ್ರತಿನಿಧಿಗಳ ನೋಂದಾವಣೆ,ವಸ್ತು ಪ್ರದರ್ಶನಗಳು, ವಿಚಾರ ಸಂಕಿರಣ ಮತ್ತು ವಿಶೇಷ ತರಗತಿಗಳು ವಿವರ ಮುಂದಿದೆ...

ವಿಶೇಷ ವಿಭಾಗಗಳು

ವಿಶೇಷ ವಿಭಾಗಗಳು

* ವಿಶೇಷ ವಿಭಾಗಗಳು (Retrospectives) - ಗೊರಾನ್ ಪಾಸ್ಕಯವಿಚ್ (ಸರ್ಬಿಯಾ),

* ಮೈಕ್ ಲೈ (ಬ್ರಿಟನ್), ಡೆನ್ನಿಸ್ ಕ್ಲೇಯರ್ (ಫ್ರಾನ್ಸ್), ಮಾಲಿನಿ ಫೋನ್ಸೇಕ (ಶ್ರೀಲಂಕ) - 20

* ಭಾರತೀಯ ಸಿನಿಮಾ ವಿಶೇಷ ವಿಭಾಗ -ಬಿಮಲ್ ರಾಯ್ - 5

* ಡಾ.ರಾಜ್‍ಕುಮಾರ್ ವಿಶೇಷ - 5

* ತೈವಾನ್-ಜರ್ಮನಿ- ದೇಶ ವಿಶೇಷ - 10

* ದಕ್ಷಿಣ ಅಮೇರಿಕ ಸಿನಿಮಾ - 7

* ರೈಲು ಚಿತ್ರಗಳ ವಿಶೇಷ ವಿಭಾಗ - 5

ಹಳೆಯ ಶ್ರೇಷ್ಠ ಚಿತ್ರಗಳು

ಹಳೆಯ ಶ್ರೇಷ್ಠ ಚಿತ್ರಗಳು

* ವಿಮರ್ಶಕರ ಆಯ್ಕೆ (Fipresci ಪ್ರಶಸ್ತಿ ವಿಜೇತ) 5

* ಏಷ್ಯನ್ ಸ್ಪರ್ಧಾ ವಿಜೇತ (Netpac ಪ್ರಶಸ್ತಿ) - 5

* ಹಳೆಯ ಶ್ರೇಷ್ಠ : ಜಪಾನ್ ಸಮುರಾಯ್ ಚಲನಚಿತ್ರಗಳು - 4

* ಇಟಾಲಿಯನ್ ನವವಾಸ್ತವವಾದಿ ಚಿತ್ರಗಳು - 4

* ಶ್ರದ್ಧಾಂಜಲಿ-ರಿತುಪರ್ಣ ಘೋಷ್ -1

ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ

ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ

ಬರ್ಲಿನ್, ಕಾನ್, ಕಾರ್ಲೋವಿವಾರಿ, ಮಾಸ್ಕೋ, ವೆನಿಸ್, ಟೊರೊಂಟೊ ಮುಂತಾದ ಮಹತ್ವದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸಗಳಲ್ಲಿ ಪ್ರಶಸ್ತಿಗಳನ್ನು ಪಡೆದ ಪ್ರಮುಖ ಚಿತ್ರಗಳ ಸಂಗ್ರಹ. ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಪೈಪೋಟಿ ನಡೆಸುತ್ತಿರುವ ವಿವಿಧ ದೇಶಗಳ 14 ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳುತ್ತಿರುವುದು ಅತ್ಯಂತ ಮಹತ್ವದ ಸಂಗತಿ.

ಏಷ್ಯ, ಭಾರತೀಯ ಮತ್ತು ಕನ್ನಡ ಸಿನಿಮಾಗಳಿಗೆ ಪ್ರತ್ಯೇಕ ಸ್ಪರ್ಧೆಯ ವಿಭಾಗಗಳು. ಹಿಂದಿನ ವರ್ಷಗಳಿಗಿಂತ ಭಿನ್ನವಾಗಿ, ಒಂದೇ ಪ್ರಶಸ್ತಿಗೆ ಬದಲಾಗಿ, ಈ ವರ್ಷದ ಕನ್ನಡ ಸಿನಿಮಾ ಸ್ಪರ್ಧೆಯಲ್ಲಿ ಮೂರು ಪ್ರಶಸ್ತಿಗಳನ್ನು ಕೊಡಲಾಗುತ್ತದೆ. ಎರಡು ಕನ್ನಡ ಚಿತ್ರಗಳಿಗೆ ಭಾರತೀಯ ಮತ್ತು ಏಷ್ಯನ್ ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ತುಳು ಮತ್ತು ಬಂಜಾರ ಭಾಷೆ

ತುಳು ಮತ್ತು ಬಂಜಾರ ಭಾಷೆ

ಕರ್ನಾಟಕದ ಉಪಭಾಷೆಗಳಲ್ಲಿ ತಯಾರಾದ ಚಿತ್ರಗಳಿಗೆ ವಿಶೇಷ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ತುಳು ಮತ್ತು ಬಂಜಾರ ಭಾಷೆಗಳ ಚಿತ್ರಗಳು ಈ ವರ್ಷದ ಚಿತ್ರೋತ್ಸವದಲ್ಲಿದೆ.

ಈ ವರ್ಷದ ಕನ್ನಡ ಚಿತ್ರಗಳ ವಿಶೇಷ ವಿಭಾಗದಲ್ಲಿ ಡಾ:ರಾಜ್‍ಕುಮಾರ್ ಅವರ ನೆನಪಿನಲ್ಲಿ ಅವರ ವೈವಿಧ್ಯಪೂರ್ಣ ಪಾತ್ರ ನಿರ್ವಹಣೆಯ 5 ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸಂಖ್ಯೆಗಿಂತ ಗುಣಮಟ್ಟಕ್ಕೆ ಹೆಚ್ಚಿನ ಆಧ್ಯತೆ ಈ ಚಿತ್ರೋತ್ಸವದ ಅತ್ಯಂತ ಮಹತ್ವದ ನಿರ್ಧಾರ.

ವಿವಿಧ ದೇಶಗಳು

ವಿವಿಧ ದೇಶಗಳು

ಏಷ್ಯ ಖಂಡದ ಜಪಾನ್, ಚೀನ, ಕೊರಿಯಾ, ಪಿಲಿಪಿನ್ಸ್, ಕಜಗಸ್ತಾನ್, ಬಾಂಗ್ಲಾದೇಶ, ಶ್ರೀಲಂಕ, ಇಂಡೋನೇಷಿಯಾ ಮುಂತಾದ ರಾಷ್ಟ್ರಗಳ ಪ್ರಖ್ಯಾತ ಚಿತ್ರಗಳು ಪ್ರದರ್ಶನವಾಗಲಿದೆ. ದಕ್ಷಿಣ ಅಮೇರಿಕೆಯ ವಿಶೇಷ ವಿಭಾಗದಲ್ಲಿ ಸಮಕಾಲೀನವಾದ ಮತ್ತು ವಿಮರ್ಶಕರ ಮೆಚ್ಚುಗೆ ಪಡೆದ ಚಿತ್ರಗಳ ಗೊಂಚಲು.

ವಿಶ್ವ ವಿಖ್ಯಾತ ನಿರ್ದೇಶಕರುಗಳಾದ ಆಂದ್ರೆ ವಜಡ, ಅಸ್ಗರ್ ಫರಾದಿ, ಇಸ್ತ್ವಾನ್ ಜಾಬೋ, ಫ್ರಾನ್ಸ್ವಾ ಓಜೋನ್, ಸುಸಾನ್ ಬ್ಲೈರ್, ಗೊರಾನ್ ಪಾಸ್ಕಯವಿಚ್, ಮೈಕ್ ಲೈ, ಡೆನ್ನಿಸ್ ಕ್ಲೇಯರ್ ಮುಂತಾದವರ ಚಿತ್ರಗಳು ಪ್ರದರ್ಶನವಾಗಲಿದೆ.

BIffes ಚಿತ್ರೋತ್ಸವದ ವಿಶೇಷತೆಗಳು

BIffes ಚಿತ್ರೋತ್ಸವದ ವಿಶೇಷತೆಗಳು

* ಗೊರಾನ್ ಪಾಸ್ಕಯವಿಚ್ (ಸರ್ಬಿಯಾ),

* ಮಾಲಿನಿ ಫೋನ್ಸೇಕ (ಶ್ರೀಲಂಕ)

* ಪುರಾನ್ ಡೆರಾಕ್‍ಶಾಂಡೇ (ಇರಾನ್)

* ಜೆಫ್ರೀ ಜಟ್‍ವಿಲಿಯನ್ (ಪಿಲಿಪಿನ್ಸ್)

* ಧರ್ಮಸೇನಾ ಪತಿರಾಜ (ಶ್ರೀಲಂಕ)

* ರಾಜೇಶ್ ಗೊಂಗಾಜು (ನೇಪಾಳ)

* ಗೋಲಂ ಬಿಪ್ಲಬ್ (ಬಾಂಗ್ಲಾದೇಶ)

* ಜ್ಯೂರಿಸ್ ಪಾಸ್ಕಸ್ (ಲಾಟ್‍ವಿಯಾ)

* ಹೈನ್ಸ್ ಬಡೆವಿಟ್ಸ್ (ಜರ್ಮನಿ)

* ಪೋಲಾ ಬೆಕ್ (ಜರ್ಮನಿ)

* ತಾರು ಮಕೇಲ (ಫಿನ್‍ಲ್ಯಾಂಡ್)

ಹಲವಾರು ಭಾರತೀಯ ಚಿತ್ರ ನಿರ್ದೇಶಕರುಗಳು, ನಿರ್ಮಾಪಕರು, ವಿಮರ್ಶಕರು, ದೇಶದ ವಿವಿಧ ಭಾಗಗಳಿಂದ ಪಾಲ್ಗೊಳ್ಳಲಿದ್ದಾರೆ.

ಪ್ರತಿನಿಧಿಗಳ ನೋಂದಾವಣೆ

ಪ್ರತಿನಿಧಿಗಳ ನೋಂದಾವಣೆ

ಪ್ರತಿನಿಧಿಗಳ ನೋಂದಾವಣೆ ಡಿಸೆಂಬರ್ 2 ರಿಂದ ಈ ಕೆಳಕಂಡ ಸ್ಥಳಗಳಲ್ಲಿ ಆರಂಭಗೊಳ್ಳಲಿದೆ.

ಬಾದಾಮಿ ಹೌಸ್, ಎನ್.ಆರ್.ಚೌಕ ವಾರ್ತಾ ಇಲಾಖೆ, ಇನ್‍ಫೆಂಟ್ರಿ ರಸ್ತೆ, ಚಲನಚಿತ್ರ ವಾಣಿಜ್ಯ ಮಂಡಳಿ, ರೇಸ್‍ಕೋರ್ಸ್ ರಸ್ತೆ, ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ 2ನೇ ಹಚಿತ ಶುಲ್ಕ - ಸಾಮಾನ್ಯ ಪ್ರತಿನಿಧಿಗಳಿಗೆ ರೂ.500/- ವಿದ್ಯಾರ್ಥಿಗಳಿಗೆ, ಫಿಲಂ ಸೊಸೈಟಿ ಸದಸ್ಯರುಗಳಿಗೆ, ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರಿಗೆ ರೂ.250/-

ವಸ್ತು ಪ್ರದರ್ಶನಗಳು, ವಿಚಾರ ಸಂಕಿರಣ

ವಸ್ತು ಪ್ರದರ್ಶನಗಳು, ವಿಚಾರ ಸಂಕಿರಣ

ಮಾಧ್ಯಮ ಅಕಾಡೆಮಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಡಿಸೆಂಬರ್ 3ನೇ ವಾರದಲ್ಲಿ ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿದೆ. ಚಿತ್ರೋತ್ಸವದ ಸಮಯದಲ್ಲಿ ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಚಾರ ವಿಭಾಗದ ಆಶ್ರಯದಲ್ಲಿ ಭಾರತೀಯ ಚಿತ್ರರಂಗದ 100ನೇ ವರ್ಷದ ವಿಶೇಷ ಸಂದರ್ಭದಲ್ಲಿ ಭಿತ್ತಿ ಚಿತ್ರಗಳ ಪ್ರದರ್ಶನ. ಚಿತ್ರೋತ್ಸವದ ಸಂಘಟನೆ, ತಾಂತ್ರಿಕ ವಿಷಯಗಳು ಮತ್ತು ಬದಲಾಗುತ್ತಿರುವ ಡಿಜಿಟಲ್ ಪ್ರದರ್ಶನ ವ್ಯವಸ್ಥೆಗಳ ಬಗ್ಗೆ ವಿಶೇಷ ತರಗತಿಗಳನ್ನು ಏರ್ಪಡಿಸಲಾಗುವುದು.

English summary
The Inauguration of the 6th Bengaluru International Film Festival will be held on the evening of Thursday, Dec 26th. Regular screenings for the Delegates will commence on Dec 27th.The Kannada films retrospective this year is dedicated to Dr. Rajkumar films. Delegate registration will commence from 2nd December 2013 said BIFFES and KCA press note

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more