»   » ಈ ವಾರ ಕನ್ನಡದಲ್ಲಿ ಬರೋಬ್ಬರಿ 7 ಚಿತ್ರಗಳು ರಿಲೀಸ್

ಈ ವಾರ ಕನ್ನಡದಲ್ಲಿ ಬರೋಬ್ಬರಿ 7 ಚಿತ್ರಗಳು ರಿಲೀಸ್

Posted By:
Subscribe to Filmibeat Kannada

ಪ್ರತಿವಾರದಂತೆ ಈ ವಾರವೂ ಸ್ಯಾಂಡಲ್ ವುಡ್ ನಲ್ಲಿ ಹಬ್ಬವೂ ಹಬ್ಬ. ಕಳೆದ ವಾರ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ಬಾರಿ ಇದರ ಸಂಖ್ಯೆ ಹೆಚ್ಚಾಗಿದೆ.

ಹೌದು, ಈ ವಾರ ಕನ್ನಡದಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ 7 ಚಿತ್ರಗಳು ಥಿಯೇಟರ್ ಗೆ ಬರುತ್ತಿವೆ. ಈ ಏಳರಲ್ಲಿ ಯಾವುದನ್ನ ನೋಡ್ಬೇಕು? ಯಾವುದನ್ನ ಬಿಡ್ಬೇಕು ಎಂಬ ಗೊಂದಲ ಪ್ರೇಕ್ಷಕರನ್ನ ಕಾಡುತ್ತಿದೆ.

ಹಾಗಿದ್ರೆ, ಈ ವಾರ ಗಾಂಧಿನಗರಕ್ಕೆ ಕಾಲಿಡುತ್ತಿರುವ ಆ ಏಳು ಚಿತ್ರಗಳು ಯಾವುದು? ಆ ಚಿತ್ರಗಳ ವಿಶೇಷತೆ ಏನು ಎಂಬುದನ್ನ ಮುಂದೆ ನೋಡಿ....

'ಆಪರೇಷನ್ ಅಲಮೇಲಮ್ಮ'

ಸಿಂಪಲ್ ಸುನಿ ನಿರ್ದೇಶನ ಮಾಡಿರುವ 'ಆಪರೇಷನ್ ಅಲಮೇಲಮ್ಮ' ಹೆಚ್ಚು ನಿರೀಕ್ಷೆ ಮೂಡಿಸಿರುವ ಚಿತ್ರ. ಶ್ರದ್ಧಾ ಶ್ರೀನಾಥ್, ರಿಷಿ ಹಾಗೂ ರಾಜೇಶ್ ನಟರಂಗ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. 'ಆಪರೇಷನ್ ಅಲಮೇಲಮ್ಮ' ಸಸ್ಪೆನ್ಸ್ ಥ್ರಿಲ್ಲಿಂಗ್ ಕಾಮಿಡಿ ಸಬ್ಜೆಕ್ಟ್ ಕಥೆ ಹೊಂದಿದೆ.

ಶ್ರದ್ಧಾ ಶ್ರೀನಾಥ್ ಗೆ ಈ ವಾರ ಡಬಲ್ ಧಮಾಕ

ಅಜಯ ರಾವ್ 'ಧೈರ್ಯಂ'

ಶಿವ ತೇಜಸ್ ಆಕ್ಷನ್ ಕಟ್ ಹೇಳಿರುವ ಚಿತ್ರ 'ಧೈರ್ಯಂ'. ಕೃಷ್ಣ ಅಜಯ್ ರಾವ್ ಈ ಚಿತ್ರದ ನಾಯಕ. ಅಧಿತಿ ಪ್ರಭುದೇವ್ ಅಜಯ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಲವ್, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಎಲ್ಲ ರೀತಿಯ ಕಮರ್ಷಿಯಲ್ ಅಂಶಗಳು ಈ ಚಿತ್ರದಲ್ಲಿದೆ. ಎಮಲ್ ಸಂಗೀತ ಹಾಗೂ ಶೇಖರ್ ಚಂದ್ರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಅಜಯ್ ರಾವ್ 'ಧೈರ್ಯಂ' ಚಿತ್ರವನ್ನ ಮೆಚ್ಚಿದ ಶಿವಣ್ಣ

ದಾದಾ ಈಸ್ ಬ್ಯಾಕ್

'ಗೊಂಬೆಗಳ ಲವ್' ಖ್ಯಾತಿಯ ನಿರ್ದೇಶಕ ಹಾಗೂ ನಾಯಕನ ಎರಡನೇ ಚಿತ್ರ 'ದಾದಾ ಈಸ್ ಬ್ಯಾಕ್'. ಸಂತೋಷ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅರುಣ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತಮಿಳು ನಟ ಪಾರ್ಥಿಭನ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶ್ರಾವ್ಯ ನಾಯಕಿಯಾಗಿದ್ದು, ಶರತ್ ಲೋಹಿತಾಶ್ವ, ಸುಧಾರಾಣಿ, ಅಜಯ್ ರಾಜ್ ಅರಸ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ಅನೂಪ್ ಸೀಳಿನ್ ಸಂಗೀತ, ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

'ದಾದಾ ಈಸ್ ಬ್ಯಾಕ್' ಟ್ರೈಲರ್ ಬಿಡುಗಡೆ ಮಾಡಿದ ಸುದೀಪ್

ಟ್ರಯಾಂಗಲ್ ಲವ್ ಸ್ಟೋರಿ 'ಟಾಸ್'

ವಿಜಯ ರಾಘವೇಂದ್ರ ಹಾಗೂ ನವನಾಯಕ ಸಂದೀಪ್ ಅಭಿನಯದ 'ಟಾಸ್' ಚಿತ್ರ ಈ ವಾರ ತೆರೆ ಕಾಣುತ್ತಿದೆ. ಒಂದು ರೂಪಾಯಿಯ ಎರಡು ಪ್ರೀತಿ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರ ಟ್ರಯಾಂಗಲ್ ಲವ್ ಸ್ಟೋರಿ. ಇತ್ತಿಚೆಗಷ್ಟೇ ಗೌಪ್ಯವಾಗಿ ಮದುವೆ ಆಗಿದ್ದ ನಟಿ ರಮ್ಯಾ ಬಾರ್ನಾ ಈ ಚಿತ್ರದ ನಾಯಕಿ. ದಯಾಳ್ ಪದ್ಮನಾಭ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಗೌತಮ್ ಶ್ರೀವತ್ಸವ್ ಸಂಗೀತ ಹೊಂದಿರುವ ಈ ಚಿತ್ರದಲ್ಲಿ ರಾಜು ತಾಳಿಕೋಟೆ, ಸುಚ್ಚೇಂದ್ರ ಪ್ರಸಾದ್, ಸುನೇತ್ರ ಪಂಡಿತ್ ಸೇರಿದಂತೆ ಹಲವು ತಾರಬಳಗದಲ್ಲಿದ್ದಾರೆ.

ದಿಢೀರನೆ ಮದುವೆ ಆದ ರಮ್ಯಾ ಬಾರ್ನಾ ಬಗ್ಗೆ ಹೊಸ ಆರೋಪ.!

ಸಸ್ಪೆನ್ಸ್ ಚಿತ್ರ 'ಟ್ರಿಗರ್'

ಸಸ್ಪೆನ್ಸ್ ಥ್ರಿಲ್ಲಿಂಗ್ ಸಿನಿಮಾ 'ಟ್ರಿಗರ್' ಈ ವಾರ ಚಿತ್ರಮಂದಿರಕ್ಕೆ ಕಾಲಿಡುತ್ತಿದೆ. ಚೇತನ್ ಗಂಧರ್ವ ಚಿತ್ರದ ನಾಯಕನಾಗಿದ್ದು, ಜೀವಿತಾ ಪಿಳ್ಳಪ್ಪ ನಾಯಕಿ ಆಗಿ ಸಾಥ್ ಕೊಟ್ಟಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ವಿಜಯ್ ಪಾಳೆಗಾರ ನಿರ್ದೇಶನ ಮಾಡಿದ್ದಾರೆ. ಸಿದ್ದಿಕ್ ಪ್ರಶಾಂತ್, ಹೊನ್ನವಳ್ಳಿ ಕೃಷ್ಣ, ಡಿಂಗ್ರಿ ನಾಗರಾಜ್, ಸಂಕೇತ್ ಕಾಶಿ, ಮೈಕಲ್ ಮಧು ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಹಾರರ್ ಸಿನಿಮಾ 'ಶ್ವೇತಾ'

ಲವ್, ಆಕ್ಷನ್, ಸೆಂಟಿಮೆಂಟ್ ಸಿನಿಮಾಗಳ ಮಧ್ಯೆ ಹಾರರ್ ಸಿನಿಮಾ 'ಶ್ವೇತಾ' ಈ ವಾರ ಬಿಡುಗಡೆಯಾಗುತ್ತಿದೆ. ರಾಜೇಶ್ ಆರ್ ಬಲಿಪ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರವಿಂದ್ರನಾಥ್ ಸಂಗೀತ ಹಾಗೂ ನಾಗಾರ್ಜುನ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ನಾಯಕಿ ಪ್ರಧಾನ ಚಿತ್ರದಲ್ಲಿ ಅಕ್ಷತ ಮರ್ಲ, ಜಯಶೀಲ ಗೌಡ, ಶ್ರೀನಿವಾಸ ಪ್ರಭು, ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

ಮೀನಾಕ್ಷಿ

ರಘು ಮುಖರ್ಜಿ ಹಾಗೂ ಶುಭ ಪೂಂಜಾ ಅಭಿನಯದ 'ಮೀನಾಕ್ಷಿ' ಸಿನಿಮಾ ಕೂಡ ಈ ವಾರವೇ ತೆರೆಕಾಣುತ್ತಿದೆ. ನೈಜ ಕಥೆಗಳಿಂದ ಸ್ಪೂರ್ತಿ ಪಡೆದುಕೊಂಡು ಚಿತ್ರಕಥೆಯನ್ನ ಸಿದ್ದ ಮಾಡಲಾಗಿದೆ. ಶ್ರೀಧರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ವಾಣಿ ಹರಿಕೃಷ್ಣ ಅವರು ಸಂಗೀತ ನೀಡಿದ್ದಾರೆ.

English summary
Actress Shraddha Srinath Starrer Kannada Movie Opparation Alamelamma, Ajay Rao Starrer Dhiryam, and Dada Is Back, Shewtha, Toss, Trigger, Meenakshi Movies Are Releasing on July 21st.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada