For Quick Alerts
  ALLOW NOTIFICATIONS  
  For Daily Alerts

  ಜೋಶ್ ಜೊತೆಗೂಡಿ 'ಕರ್ನಾಟಕದ ಏಳು ಅದ್ಭುತ'ಗಳ ಹುಡುಕೋಣ ಬನ್ನಿ

  |

  ಡೈಲಿಹಂಟ್ ಮುಂದಾಳತ್ವದ ಜೋಶ್ ಕಿರು ವಿಡಿಯೋ ಅಪ್ಲಿಕೇಶನ್ ತಮ್ಮ ಭಿನ್ನ, ಹೊಸತನದ ಹಾಗೂ ಬೋಲ್ಡ್ ಕಂಟೆಂಟ್‌ನಿಂದ ಬಹುವಾಗಿ ಗಮನ ಸೆಳೆಯುತ್ತಿದೆ. ಯುವ ಕಂಟೆಂಟ್ ಕ್ರಿಯೇಟರ್‌ಗಳಿಗೆ ಅತ್ಯುತ್ತಮ ವೇದಿಕೆ ಒದಗಿಸುವ ಜೊತೆಗೆ, ಸಾಮಾನ್ಯರಿಗೆ ಮನೊರಂಜನಾತ್ಮಕ, ಶೈಕ್ಷಣಿಕ ಸೇರಿದಂತೆ ಹಲವು ಮಾದರಿಯ ವೈರಲ್ ವಿಡಿಯೋಗಳನ್ನು ಭಾರತದ ಹಲವು ಭಾಷೆಗಳಲ್ಲಿ ವೀಕ್ಷಣೆಗೆ ಅವಕಾಶ ನೀಡುತ್ತಿದೆ.

  ಈ ದೇಸಿ ಅಪ್ಲಿಕೇಶನ್ ಗೆಲ್ಲುತ್ತಲೇ ಸಾಗುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಜೋಶ್ ಆಯೋಜಿಸುವ ಅತ್ಯುತ್ತಮ ಕಾರ್ಯಕ್ರಮಗಳು, ಮೀಟ್ ಆಂಡ್ ಗ್ರೀಟ್‌ಗಳು, ಸೆಲೆಬ್ರಿಟಿ ಕೊಲ್ಯಾಬರೇಶನ್ ಹಾಗೂ ಅಭಿಯಾನಗಳು.

  ಕರ್ನಾಟಕದ ಜನಪ್ರಿಯ ಮಾಧ್ಯಮ ಸಂಸ್ಥೆಗಳಾದ ಏಷಿಯಾನೆಟ್ ಸುವರ್ಣ ಹಾಗೂ ಕನ್ನಡ ಪ್ರಭ ಒಟ್ಟಾಗಿ 'ಕರ್ನಾಟಕದ ಏಳು ಅದ್ಭುತಗಳು' (7wonders of Karnataka) ಹೆಸರಿನ ಅಭಿಯಾನ ಆರಂಭಿಸಿದ್ದು, ಆ ಮೂಲಕ ಕರ್ನಾಟಕದ ಏಳು ಅತ್ಯದ್ಭುತ ಪ್ರವಾಸಿ ತಾಣವನ್ನು ಗುರುತಿಸಲು ಮುಂದಾಗಿವೆ. ಜನರು ಮತದಾನದ ಮೂಲಕ ರಾಜ್ಯದ ಅತ್ಯುತ್ತಮ ಏಳು ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಬೇಕಿದೆ.

  7 wonders of Karnataka Participate in Josh New Challenge Stand A Chance To Win

  ರಾಜ್ಯದ ಐತಿಹಾಸಿಕ, ಪ್ರಾಕೃತಿಕ ಜನಪ್ರಿಯ ಪ್ರವಾಸಿ ತಾಣಗಳನ್ನು ಗುರುತಿಸಿ, ಉಳಿಸಿ, ಅಭಿವೃದ್ಧಿಪಡಿಸಬೇಕೆನ್ನುವ ಉದ್ದೇಶದಿಂದ ಹಾಗೂ ರಾಜ್ಯದ ಸಂಸ್ಕೃತಿ, ಐತಿಹ್ಯ, ಕಲೆ, ಇತಿಹಾಸ, ಪ್ರಾಕೃತಿಕ ಸೌಂದರ್ಯ, ವೈವಿಧ್ಯತೆಯನ್ನು ಪ್ರಚಾರ ಮಾಡುವ ಕಾರಣಕ್ಕೆ ಹಾಗೂ ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸುವ ಕಾರಣಕ್ಕೆ ಈ ವಿನೂತನ ಹಾಗೂ ಭಿನ್ನ ಅಭಿಯಾನವನ್ನು ಆಯೋಜಿಸಲಾಗಿದೆ.

  ಈ ಅಭಿಯಾನಕ್ಕೆ ಇನ್ನಷ್ಟು ಸ್ಪೂರ್ತಿ ತುಂಬಲು ಜೋಶ್ ಕಿರು ವಿಡಿಯೋ ಅಪ್ಲಿಕೇಶನ್ ಈ ಸದುದ್ದೇಶದ ಅಭಿಯಾನದ ಡಿಜಿಟಲ್ ಪಾಲುದಾರನಾಗಿ ಸೇರಿಕೊಂಡಿದೆ. ಈ ಅಭಿಯಾನದ ಭಾಗವಾಗಿ #7wondersofkarnataka ಹೆಸರಿನ ಚಾಲೆಂಜ್ ಒಂದನ್ನು ಜೋಶ್ ಹೊರತಂದಿದ್ದು, ಈ ಚಾಲೆಂಜ್ ಜೋಶ್‌ನ ಕಿರು ವಿಡಿಯೋ ಅಪ್ಲಿಕೇಶನ್‌ನಲ್ಲಿ ಇದೀಗ ಚಾಲ್ತಿಯಲ್ಲಿದೆ.

  ಈಗ ಚಾಲ್ತಿಯಲ್ಲಿರುವ #7wondersofkarnataka ಚಾಲೆಂಜ್‌ನಲ್ಲಿ ಭಾಗವಹಿಸಲು ಮಾಡಬೇಕಾಗಿರುವುದಿಷ್ಟೆ. ವಿಡಿಯೋ ಅಪ್‌ಲೋಡ್ ಮಾಡಲಿಚ್ಛಿಸುವವರು, ಯಾವುದೇ ಪ್ರವಾಸ ಸ್ಥಳಕ್ಕೆ ಹೋದಾಗ ಅಲ್ಲಿನ ವಿಡಿಯೋ ತೆಗೆದು #7wondersofkarnataka ಹ್ಯಾಷ್‌ಟ್ಯಾಗ್ ಬಳಸಿ ಅದನ್ನು ಅಪ್‌ಲೋಡ್ ಮಾಡಬೇಕು. ಈ ಚಾಲೆಂಜ್‌ನಲ್ಲಿ ಪಾಲ್ಗೊಂಡು ವಿಡಿಯೋ ಅಪ್‌ಲೋಡ್ ಮಾಡಿದವರಿಗೆ ಕೆಲವು ವಿಶೇಷ ಬಹುಮಾನಗಳೂ ಸಹ ದೊರೆಯಲಿವೆ.

  ಅಲ್ಲದೆ ಹತ್ತು ಅತ್ಯುತ್ತಮ ವಿಡಿಯೋಗಳನ್ನು ಗುರುತಿಸಿ ಅವನ್ನು ಅಪ್‌ಲೋಡ್ ಮಾಡಿದವರಿಗೆ ವಿಶೇಷ ಬಹುಮಾನವಾಗಿ ಅರಣ್ಯದ ಲಾಡ್ಜ್ ಮತ್ತು ರೆಸಾರ್ಟ್‌ನಲ್ಲಿ ಉಚಿತ ವಾಸ್ತವ್ಯದ ವ್ಯವಸ್ಥೆ ಮಾಡಲಾಗುತ್ತದೆ.

  Recommended Video

  Vikrant Rona | ವಿಕ್ರಾಂತ ರೋಣ ಸಿನಿಮಾ ನೋಡುವಾಗ ಹಲ್ಲೆ | *Sandalwood

  ಹಾಗಿದ್ದರೆ ನಿರೀಕ್ಷೆ ಏಕೆ? ಈಗಲೇ ಜೋಶ್ ಅಪ್ಲಿಕೇಶನ್ ಅನ್ನು ಸೇರಿಕೊಳ್ಳಿ ಮತ್ತು #7wondersofkarnataka ಚಾಲೆಂಜ್‌ನಲ್ಲಿ ಶೀಘ್ರವೇ ಭಾಗಿಯಾಗಿ. ಯಾರಿಗೆ ಗೊತ್ತು ನೀವು ಸಹ ಟಾಪ್ ಹತ್ತು ವಿನ್ನರ್‌ಗಳಲ್ಲಿ ಒಬ್ಬರಾಗಬಹುದು. ಅರಣ್ಯದಿಂದ ಸುತ್ತುವರಿದ ಐಶಾರಾಮಿ ರೆಸಾರ್ಟ್‌ನಲ್ಲಿ ಚಿಲ್ ಮಾಡುವಂತವರಾಗಬಹುದು.

  English summary
  7 Wonders of Karnataka Participate In Josh's New Challenge & Stand A Chance To Win A Cool Vacation.
  Wednesday, August 3, 2022, 16:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X