twitter
    For Quick Alerts
    ALLOW NOTIFICATIONS  
    For Daily Alerts

    ಸೆಪ್ಟೆಂಬರ್ 16ಕ್ಕೆ 75 ರೂಪಾಯಿಗೆ ಸಿಗಲ್ಲ ಮಲ್ಟಿಪ್ಲೆಕ್ಸ್ ಟಿಕೆಟ್; ಇದೆಲ್ಲಾ ಬ್ರಹ್ಮಾಸ್ತ್ರ ತಂಡದ ಪ್ಲಾನ್!

    |

    ಇತ್ತೀಚಿನ ದಿನಗಳಲ್ಲಿ ಜನರು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ವೀಕ್ಷಿಸುವ ಸಿನಿ ಪ್ರೇಕ್ಷಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂದೇ ಹೇಳಬಹುದು. ಅದರಲ್ಲಿಯೂ ಕೊರೊನಾ ಲಾಕ್ ಡೌನ್ ಬಳಿಕ ಅದೆಷ್ಟೋ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಚ್ಚಿದವು, ಹೀಗಾಗಿ ಸಿನಿ ರಸಿಕರು ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡಿದರು. ಇನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿ ಒಳ್ಳೆಯ ಸ್ಕ್ರೀನಿಂಗ್, ಉತ್ತಮ ಸೌಂಡ್ ಹಾಗೂ ಸೀಟಿಂಗ್ ಸಿಸ್ಟಮ್ ಫ್ಯಾಮಿಲಿ ಆಡಿಯನ್ಸ್ ಇಷ್ಟ ಪಡುವ ಹಾಗೆ ಇರುವ ಕಾರಣ ಕುಟುಂಬ ಸಮೇತ ತೆರಳುವ ಅನೇಕ ವೀಕ್ಷಕರು ಸಿಂಗಲ್ ಸ್ಕ್ರೀನ್ ಬಿಟ್ಟು ಪಿವಿಆರ್, ಐನಾಕ್ಸ್, ಗೋಪಾಲನ್ ಹಾಗೂ ಸಿನಿಪೊಲಿಸ್ ರೀತಿಯ ಬಹುಪರದೆಗಳನ್ನೇ ಆಯ್ಕೆ ಮಾಡುತ್ತಾರೆ.

    ಹೀಗೆ ಲಾಕ್ ಡೌನ್ ನಂತರ ಮತ್ತೆ ಮಾಲ್‌ಗಳತ್ತ ಮುಖ ಮಾಡಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ವೀಕ್ಷಿಸಿ ತಮ್ಮ ಏಳ್ಗೆಗೆ ಸಹಕರಿಸಿದ ಸಿನಿ ರಸಿಕರಿಗೆ ವಿಶೇಷ ಕೃತಜ್ಞತೆ ಸಲ್ಲಿಸುವ ಸಲುವಾಗಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದವರು ಸೆಪ್ಟೆಂಬರ್ 16ರಂದು ಸಿನಿಮಾ ದಿನ ಆಚರಣೆ ಮಾಡಿ ಅಂದು ದೇಶದಾದ್ಯಂತ ಇರುವ ಮಲ್ಟಿಪ್ಲೆಕ್ಸ್ ಪ್ರದರ್ಶನಗಳ ಟಿಕೆಟ್ ದರ ಕೇವಲ 75 ಎಂದು ಘೋಷಿಸಿತ್ತು.

    ಹೀಗೆ ಒಂದೊಳ್ಳೆ ಉದ್ದೇಶದಿಂದ ಕೈಗೊಂಡಿದ್ದ ಈ ಅಭಿಯಾನಕ್ಕೆ 'ಥ್ಯಾಂಕ್ಯು' ಎಂದು ಹೆಸರಿಡಲಾಗಿತ್ತು. ಆದರೆ ಇದೀಗ ಈ ವಿಶೇಷ ದಿನವನ್ನು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮುಂದೂಡಲು ತೀರ್ಮಾನಿಸಿದ್ದು, ಸಿನಿ ಪ್ರೇಕ್ಷಕರಿಗೆ ಒಂದು ವಾರ ತಡವಾಗಿ ಈ ಟಿಕೆಟ್ ಆಫರ್ ಕೈಗೆ ಸಿಗಲಿದೆ.

    ಥ್ಯಾಂಕ್ಯು ಅಭಿಯಾನ ಮುಂದೂಡಿಕೆ

    ಥ್ಯಾಂಕ್ಯು ಅಭಿಯಾನ ಮುಂದೂಡಿಕೆ

    ಥ್ಯಾಂಕ್ಯು ಅಭಿಯಾನದಲ್ಲಿ ಸಿನಿ ಪ್ರೇಕ್ಷಕರಿಗೆ 75 ರೂಪಾಯಿಯಲ್ಲಿ ಟಿಕೆಟ್ ಅನ್ನು ವಿತರಿಸಲು ಸೆಪ್ಟೆಂಬರ್ 16 ಅನ್ನು ಸಿನಿಮಾ ದಿನ ಎಂದು ಗುರುತಿಸಲಾಗಿತ್ತು. ಆದರೆ, ಇದೀಗ ಈ ದಿನವನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ. ಈ ಮೂಲಕ ಒಂದು ವಾರ ತಡವಾಗಿ ಸಿನಿ ಪ್ರೇಕ್ಷಕರಿಗೆ ರಿಯಾಯಿತಿ ದರದಲ್ಲಿ ಚಿತ್ರಗಳನ್ನು ವೀಕ್ಷಿಸಬಹುದಾಗಿದೆ.

    ಈ ಮುಂದೂಡಿಕೆಗೆ ಕಾರಣ ಬ್ರಹ್ಮಾಸ್ತ್ರ

    ಈ ಮುಂದೂಡಿಕೆಗೆ ಕಾರಣ ಬ್ರಹ್ಮಾಸ್ತ್ರ

    ಇನ್ನು ಈ ಥ್ಯಾಂಕ್ಯು ಅಭಿಮಾನ ಮುಂದೂಡಿಕೆಯಾಗಲು ಕಾರಣ ಬ್ರಹ್ಮಾಸ್ತ್ರ ಸಿನಿಮಾ ಎನ್ನಲಾಗುತ್ತಿದೆ. ರಣ್‌ಬೀರ್ ಕಪೂರ್ ಹಾಗೂ ಅಲಿಯಾ ಭಟ್ ಜೋಡಿ ಇದೇ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿರುವ ಬ್ರಹ್ಮಾಸ್ತ್ರ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಚಿತ್ರದ ಕಲೆಕ್ಷನ್ ಮೇಲೆ ಈ ಟಿಕೆಟ್ ದರ ವಿನಾಯಿತಿಯ ಅಭಿಯಾನದ ಹೊಡೆತ ಬೀಳಬಾರದು ಎಂಬ ಕಾರಣದಿಂದಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಬ್ರಹ್ಮಾಸ್ತ್ರ ಚಿತ್ರದ ನಿರ್ಮಾಪಕರು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಜತೆ ಚರ್ಚೆ ನಡೆಸಿ ಮುಂದೂಡಿಕೆಗೆ ಮನವೊಲಿಸಿದೆ ಎಂದು ವರದಿಗಳು ತಿಳಿಸಿವೆ.

    ಅಭಿಮಾನಿಗಳ ಕಿಡಿ

    ಅಭಿಮಾನಿಗಳ ಕಿಡಿ

    ಮೊದಲೇ ಜನರಲ್ಲಿ ಬ್ರಹ್ಮಾಸ್ತ್ರ ಕುರಿತ ವಿರೋಧವಿದೆ. ಹೀಗಿರುವಾಗ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಈ ರೀತಿಯ ನಿರ್ಧಾರವನ್ನು ಅದರಲ್ಲಿಯೂ ಕಷ್ಟದ ಸಂದರ್ಭದಲ್ಲಿ ಕೈಹಿಡಿದ ಜನರಿಗೆ ಧನ್ಯವಾದ ತಿಳಿಸಲು ಹಮ್ಮಿಕೊಂಡಿದ್ದ ಅಭಿಯಾನವನ್ನು ಅದೇ ಬ್ರಹ್ಮಾಸ್ತ್ರಕ್ಕಾಗಿ ಮುಂದೆ ಹಾಕಿರುವುದು ಹಲವು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ.

    75 ರೂಪಾಯಿಗೆ ಅವತಾರ್

    75 ರೂಪಾಯಿಗೆ ಅವತಾರ್

    2009ರಲ್ಲಿ ಬಿಡುಗಡೆಯಾಗಿ ಅಬ್ಬರಿಸಿದ್ದ ಅವತಾರ್ ಸಿನಿಮಾ ಇಂದಿಗೂ ಸಹ ಅತಿಹೆಚ್ಚು ಕಲೆಕ್ಷನ್ ಮಾಡಿದ ಪ್ರಪಂಚದ ಚಲನಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನು ಈ ಮೆಗಾ ಚಿತ್ರವನ್ನು ಅಪ್‌ಡೇಟೆಡ್ ಪ್ರಿಂಟ್‌ನೊಂದಿಗೆ ಸೆಪ್ಟೆಂಬರ್ 23ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇನ್ನು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ನವರು ಥ್ಯಾಂಕ್ಯು ಅಭಿಯಾನವನ್ನು ಇದೇ ದಿನಕ್ಕೆ ಮುಂದೂಡಿರುವ ಕಾರಣ ಆ ದಿನ ಬಿಡುಗಡೆಯಾಗಲಿರುವ ಅವತಾರ್ ಚಿತ್ರವನ್ನು ಕೇವಲ 75 ರೂಪಾಯಿಗೆ ವೀಕ್ಷಿಸಬಹುದಾಗಿದೆ.

    English summary
    75 rupees Multiplex ticket rate day postponed to September 23 due to Brahmastra's good run
    Tuesday, September 13, 2022, 15:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X