Don't Miss!
- Technology
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- Sports
ಕೊಹ್ಲಿ ಅಲ್ಲ, ರೋಹಿತ್ ಅಲ್ಲ; ಈತ ಭಾರತದ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬು ಎಂದ ಆರ್ ಅಶ್ವಿನ್
- Finance
ಅಗ್ಗದ ಚಿನ್ನ ಸಾಲಕ್ಕಾಗಿ ಇಲ್ಲಿ ಪರಿಶೀಲಿಸಿ: ಇತ್ತೀಚಿನ ಬಡ್ಡಿ ದರ, EMI ಬಗ್ಗೆ ಮಾಹಿತಿ ತಿಳಿಯಿರಿ
- Automobiles
Okaya EVಯ ಬಹುನಿರೀಕ್ಷಿತ ಟೀಸರ್: ಫೆ.10ಕ್ಕೆ ಅತಿಹೆಚ್ಚು ವೇಗದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
- News
ಜೆಡಿಎಸ್ ಪಂಚ ರತ್ನ ಹೆಸರು ಏಕೆ ಇಟ್ಟಿದ್ದಾರೆ? ಅದು ನವಗ್ರಹ ಯಾತ್ರೆ ಎಂದ ಪ್ರಹ್ಲಾದ್ ಜೋಶಿ
- Lifestyle
ವಿಶ್ವ ಕ್ಯಾನ್ಸರ್ ದಿನ: ಭಾರತೀಯ ಈ ಮಸಾಲೆ ಪದಾರ್ಥಗಳು ಕ್ಯಾನ್ಸರ್ ತಡೆಗಟ್ಟುತ್ತೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'777 ಚಾರ್ಲಿ' ನಾಯಿಗೆ ನಾಯಿಗಳ ಅಭಿಮಾನಿ ಸಂಘ: ಸದಸ್ಯ ನಾಯಿಗಳ ಪಟ್ಟಿ ಇಲ್ಲಿದೆ ನೋಡಿ!
'777 ಚಾರ್ಲಿ' ಸಿನಿಮಾ ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. '777 ಚಾರ್ಲಿ' ಸಿನಿಮಾದ ಪ್ರೀಮಿಯರ್ ಶೋಗಳು ಈಗಾಗಲೆ ದೇಶದಾದ್ಯಂತ ಹಲವು ಕಡೆಗಳಲ್ಲಿ ಪ್ರದರ್ಶನವಾಗಿದ್ದು ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.
ಈ ಚಿತ್ರ ಪ್ರಾಣಿ ಪ್ರಿಯರ ಕಣ್ಣಲ್ಲಿ ನೀರು ತರಿಸಿದೆ. ರಕ್ಷಿತ್ ಮತ್ತು ಚಾರ್ಲಿ ಕಾಂಬಿನೇಶನ್‌ಗೆ ಎಲ್ಲರೂ ಮನಸೋತಿದ್ದಾರೆ. ಚಿತ್ರದಲ್ಲಿ ನಾಯಕ, ನಾಯಕಿ, ವಿಲನ್ ಎನ್ನುವ ಕ್ಲೀಶೆಗಳನ್ನು ಒಡೆದು ಚಾರ್ಲಿಯೆ ಚಿತ್ರದ ಹೀರೋ ಆಗಿದ್ದಾನೆ.
777
Charlie
1st
Half
Review:
ನಾಯಿಯ
ತುಂಟಾಟ-ರಕ್ಷಿತ್
ಶೆಟ್ಟಿ
ಪರದಾಟ!
'777 ಚಾರ್ಲಿ'ಯಲ್ಲಿ 4 ನಾಯಿಗಳು ಅಭಿನಯಿಸಿವೆ. ನಾಯಿಗಳಿಗೆ ತರಬೇತಿ ಕೊಟ್ಟು ಸಿನಿಮಾದಲ್ಲಿ ಅಭಿನಯ ಮಾಡಿಸಲಾಗಿದೆ. ಇನ್ನು ಈ ಚಾರ್ಲಿ ನಾಯಿ ಸಾಮಾನ್ಯವಾದ ನಾಯಿ ಅಲ್ಲವೆ ಅಲ್ಲ. ಯಾವ ಸೆಲೆಬ್ರೆಟಿಗೂ ಕಡಿಮೆ ಇಲ್ಲ ಈ ಚಾರ್ಲಿ. ಯಾಕೆಂದರೆ ಚಾರ್ಲಿಗಾಗಿ ನಾಯಿಗಳ ಅಭಿಮಾನಿ ಸಂಘ ಹುಟ್ಟಿಕೊಂಡಿದೆ.

ಚಾರ್ಲಿ ನಾಯಿ ಈಗ ದೊಡ್ಡ ಸೆಲೆಬ್ರೆಟಿ!
'777 ಚಾರ್ಲಿ' ಚಿತ್ರದಲ್ಲಿ, ಸಿನಿಮಾದ ಮುಖ್ಯ ಪಾತ್ರಧಾರಿ ಚಾರ್ಲಿ ನಾಯಿಯೇ ದೊಡ್ಡ ಹೀರೋ. ಹಾಗಾಗಿ ಚಾರ್ಲಿ ಈಗ ಹೀರೋ ಆಗಿ ಬಿಟ್ಟಿದ್ದಾನೆ. ಎಲ್ಲೆಲ್ಲೂ ಈ ನಾಯಿಯ ಬಗ್ಗೆಯೇ ಮಾತು. ನಾಯಿ ಮತ್ತು ಮಾನವನ ನಡುವೆ ನಡುವೆ ಉತ್ತಮ ಬಾಂಧವ್ಯ ಇದ್ದೇ ಇರುತ್ತದೆ. ಹಾಗಾಗಿ ಈ ಚಾರ್ಲಿ ಮತ್ತು ಧರ್ಮನ ಕಥೆಗೆ ಎಲ್ಲರೂ ಸುಲಭವಾಗಿ ಕನೆಕ್ಟ್ ಆಗುತ್ತಿದ್ದಾರೆ.
777
Charlie
Movie
Review:
ನಾಯಿ-ಮನುಷ್ಯ
ಬಾಂಧವ್ಯದ
ಭಾವುಕ
ಕಥನ

ಚಾರ್ಲಿ ನಾಯಿಗೆ, ನಾಯಿಗಳ ಅಭಿಮಾನಿ ಸಂಘ!
ಸದ್ಯ ಚಾರ್ಲಿ ನಾಯಿಗೆ ಅಭಿಮಾನಿ ಸಂಘ ಹುಟ್ಟಿಕೊಂಡಿದೆ. ಹಾಗಂತ ಮನುಷ್ಯರು ಸೇರಿಕೊಂಡು ಮಾಡಿರುವ ಅಭಿಮಾನಿ ಬಳಗ ಅಲ್ಲ ಇದು. ಇದು ನಾಯಿಗಳ ಅಭಿಮಾನಿ ಸಂಘ. ಚಿಕ್ಕಬಳ್ಳಾಪುರದಲ್ಲಿ ಹೀಗೊಂದು ಸಂಘ ಹುಟ್ಟುಕೊಂಡಿದೆ. ಈ ಸಂಘಕ್ಕೆ ಚಾರ್ಲಿ ಅಭಿಮಾನಿಗಳ ಸಂಘ ಎಂದು ಹೆಸರಿಡಲಾಗಿದೆ. ಹಲವು ನಾಯಿಗಳ ಫೋಟೋಗಳಿರುವ ಸಂಘದ ಈ ಪೋಸ್ಟರ್ ಎಲ್ಲಡೆ ವೈರಲ್ ಆಗಿದೆ.

ಚಾರ್ಲಿ ಅಭಿಮಾನಿ ಸಂಘ!
ಚಾರ್ಲಿ ಅಭಿಮಾನಿ ಸಂಘದಲ್ಲಿ ಒಟ್ಟು 13 ನಾಯಿಗಳು ಸದಸ್ಯತ್ವ ಪಡೆದುಕೊಂಡಿವೆ. ಅಧ್ಯಕ್ಷ ಸ್ಥಾನದಲ್ಲಿ ರಾಯನ್, ಉಪಾಧ್ಯಕ್ಷ ಸ್ಥಾನದಲ್ಲಿ ರಾಕಿ, ಖಜಾಂಚಿಯಾಗಿ ಜಾಕಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಕರಿಯ, ಚಿಂಟು, ಬೈರ, ರಾಮು ಸೇರಿದಂತೆ ಒಟ್ಟು 13 ನಾಯಿಗಳು ಸದಸ್ಯತ್ವ ಪಡೆದುಕೊಂಡಿವೆ. ಈ ಪೋಸ್ಟರ್ ವೈರಲ್ ಲಿಸ್ಟ್ ಸೇರಿದ್ದು, ಸಾಕಷ್ಟು ಮೆಚ್ಚುಗೆ ಗಳಿಸಿಕೊಂಡಿದೆ.
100ಕ್ಕೂ
ಹೆಚ್ಚು
ಪ್ರೀಮಿಯರ್
ಶೋ,
1800
ಥಿಯೇಟರ್ಗಳಲ್ಲಿ
'777
ಚಾರ್ಲಿ'
ರಿಲೀಸ್

ಇಂದು ಸಿನಿಮಾ ರಿಲೀಸ್!
ಇಂದು (ಜೂನ್ 10) '777 ಚಾರ್ಲಿ' ಸಿನಿಮಾ ರಿಲೀಸ್ ಆಗಿದೆ. ವಿಮರ್ಶಕರಿಂದ ಉತ್ತಮ ಪ್ರಶಂಸೆ ಗಿಟ್ಟಿಸಿಕೊಂಡಿದೆ. ಇನ್ನು ಸಿನಿಮಾ ನೋಡಿದ ಮಂದಿ ಕಣ್ಣೀರು ಹಾಕುತ್ತಾ ಸಿನಿಮಾ ಮಂದಿರದಿಂದ ಹೊರ ಬಂದಿದ್ದಾರೆ. ಕನ್ನಡದಲ್ಲಿ ಈ ರೀತಿಯ ಪ್ರಯೋಗಾತ್ಮಕ ಸಿನಿಮಾ ಬಂದಿರುವುದಕ್ಕೆ ಸಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ.