twitter
    For Quick Alerts
    ALLOW NOTIFICATIONS  
    For Daily Alerts

    ತರಬೇತುದಾರ ಪ್ರಮೋದ್‌ ಅದೃಷ್ಟ ಬದಲಿಸಿದ 'ಚಾರ್ಲಿ': ನೆರೆ ರಾಜ್ಯಗಳಿಂದಲೂ ಡಿಮ್ಯಾಂಡ್!

    By ಮೈಸೂರು ಪ್ರತಿನಿಧಿ
    |

    ತನ್ನ ಮುಗ್ಧ ಅಭಿನಯದಿಂದ ರಾಜ್ಯದ ಮನೆಮಾತಾಗಿರುವ '777 ಚಾರ್ಲಿ' ಸಿನಿಮಾದ ಶ್ವಾನದ ಊರು ಸಾಂಸ್ಕೃತಿಕ ನಗರಿ ಮೈಸೂರು. ಅಷ್ಟೇ ಅಲ್ಲ ಅದರ ತರಬೇತಿದಾರ ಕೂಡ ಮೈಸೂರಿನವರೇ. ಸದ್ಯ ಇಡೀ ಕನ್ನಡಿಗರ ಆಕರ್ಷಣೆ ಕೇಂದ್ರಬಿಂದುವಾಗಿರುವ ಚಾರ್ಲಿಗೆ ನೆರೆರಾಜ್ಯಗಳಿಂದಲೂ ಸಿನಿಮಾದಲ್ಲಿ ಅಭಿನಯಿಸುವಂತೆ ಹೆಚ್ಚಿನ ಡಿಮ್ಯಾಂಡ್ ಸೃಷ್ಟಿಯಾಗಿದೆ!

    'ಚಾರ್ಲಿ' ಚಿತ್ರ ಸದ್ಯ ಕರ್ನಾಟಕದಲ್ಲಿ ಹೊಸ ಅಲೆ ಸೃಷ್ಟಿಸಿದೆ. ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ಶ್ವಾನದ ಪ್ರೀತಿಯ ಸುತ್ತವೇ ನಡೆಯುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಚಾರ್ಲಿ ಮನಸೂರೆಗೊಂಡಿದೆ. ಇಂತಹ ಚಾರ್ಲಿಗೆ ತರಬೇತಿ ನೀಡಿದವರು ಮೈಸೂರು ತಾಲೂಕಿನ ಡಿ.ಸಾಲುಂಡಿಯ ಪ್ರಮೋದ್. ಇವರು ಡಿಕೆ9 ವರ್ಕಿಂಗ್ ಡಾಂಗ್ ಟ್ರೈನಿಂಗ್ ಸ್ಕೂಲ್ ನಡೆಸುತ್ತಿದ್ದಾರೆ. ಇದರಲ್ಲಿ 22 ಶ್ವಾನಗಳಿವೆ. ಚಿತ್ರದಲ್ಲಿ ಬರುವ ಚಿಕ್ಕ ಹಾಗೂ ದೊಡ್ಡ ಎರಡು ವಯಸ್ಸಿನ ಶ್ವಾನವನ್ನು ತರಬೇತಿ ನೀಡಿ ಉತ್ತಮ ಅಭಿನಯ ಹೊರಹೊಮ್ಮುವಂತೆ ಮಾಡಿದವರು ಪ್ರಮೋದ್.

    ನಿರ್ಮದೇಶಕ ಹೇಮಂತ್ ಕೊಟ್ಟ ಐಡಿಯಾ

    ನಿರ್ಮದೇಶಕ ಹೇಮಂತ್ ಕೊಟ್ಟ ಐಡಿಯಾ

    ನಾಯಿಯ ಸುತ್ತವೇ ಈ ಕತೆ ನಡೆಯುವ ಕಾರಣ ಅಭಿನಯದಿಂದಲ್ಲೇ ಎಲ್ಲರನ್ನೂ ಆಕರ್ಷಿಸುವ ಶ್ವಾನ ನಿರ್ದೇಶನ ಕಿರಣ್ ರಾಜ್ ಅವರಿಗೆ ಬೇಕಿತ್ತು. ಇದಕ್ಕಾಗಿ ಅವರು ಸಾಕಷ್ಟು ಆಡಿಶನ್ ಕೂಡ ನಡೆಸಿದ್ದರು. ಆದರೆ, ಇವರ ಕಥೆಗೆ ಪೂರಕವಾಗಿ ಅಭಿನಯಸುವ ಶ್ವಾನಗಳಂತೂ ಸಿಗಲೇ ಇಲ್ಲ. ಕೊನೆಗೆ 'ಕವಲುದಾರಿ' ಸಿನಿಮಾದ ನಿರ್ದೇಶಕ ಹೇಮಂತ್ ಅವರ ಸಲಹೆ ಮೇರೆಗೆ ಪ್ರಮೋದ್ ಅವರನ್ನು ಕಿರಣ್‌ರಾಜ್ ಸಂಪರ್ಕಿಸಿದರು. ಮುಂದೆ ನಡೆದಿದ್ದೆಲ್ಲಾ ಇತಿಹಾಸ. ಚಾರ್ಲಿ ಇಡೀ ರಾಜ್ಯದ ಮನೆಮಾತಾಯಿತು.

    ಜರ್ಮನ್ ತಜ್ಞರಿಂದ ಪ್ರಮಾಣ ಪತ್ರ ಬರೆದಿರುವ ಪ್ರಮೋದ್

    ಜರ್ಮನ್ ತಜ್ಞರಿಂದ ಪ್ರಮಾಣ ಪತ್ರ ಬರೆದಿರುವ ಪ್ರಮೋದ್

    ಹಾಗೆ ನೋಡಿದರೆ ಪ್ರಮೋದ್ ಬಯಸಿದ್ದೇ ಬೇರೆ ಆದರೆ ಅವರು ಆಯ್ಕೆ ಮಾಡಿಕೊಂಡ ವೃತ್ತಿಯೇ ಬೇರೆ. ಮೊದಲಿನಿಂದಲೂ ಪ್ರಮೋದ್ ಅವರಿಗೆ ಸಿವಿಲ್ ಪರೀಕ್ಷೆ ಬರೆದು ಒಳ್ಳೆಯ ಅಧಿಕಾರಿಯಾಗಬೇಕೆಂಬ ಹಂಬಲ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಪರಿಣಾಮ ಶ್ವಾನ ಪ್ರಿಯರಾಗಿದ್ದ ಪ್ರಮೋದ್ ಇದನ್ನೇ ವೃತ್ತಿಯಾಗಿ ಸ್ವೀಕರಿಸಿದರು, ಸದ್ಯ ಜರ್ಮನಿ ತಜ್ಞರಿಂದ ಪ್ರಮಾಣ ಪತ್ರ ಪಡೆದಿರುವ ಪ್ರಮೋದ್ ಶ್ವಾನಗಳ ವರ್ತನೆ, ಮನೋವಿಜ್ಞಾನದ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದಾರೆ.

    ಸಿನಿಮಾದಲ್ಲಿ ಚಾರ್ಲಿ ಆಟ

    ಸಿನಿಮಾದಲ್ಲಿ ಚಾರ್ಲಿ ಆಟ

    ''ಚಾರ್ಲಿಗೆ ಸೂಕ್ತ ತರಬೇತಿ ನೀಡಿಯೇ ಕ್ಯಾಮೆರಾ ಮುಂದೆ ನಿಲ್ಲಿಸುತ್ತಿದ್ದೆ. ಕಾಶ್ಮೀರದಲ್ಲಿ ಕ್ಲೈಮಾಕ್ಸ್ ದೃಶ್ಯಕ್ಕೂ ಮುನ್ನ 10 ದಿನಗಳ ಕಾಲ ಮಂಜುಗಡ್ಡೆಗಳ ನಡುವೆ ತರಬೇತಿ ನೀಡಲಾಗಿತ್ತು. ಯಾವುದೇ ಪ್ರಾಣಿ ಇರಲಿ ಮೊದಲು ಅವುಗಳಿಗೆ ಪ್ರೀತಿ ಕೊಡಬೇಕು. ನಂತರ ಅವುಗಳ ವಿಶ್ವಾಸ ಗಳಿಸಬೇಕು. ಆಗ ಮಾತ್ರ ಅವು ನಾವು ಹೇಳಿದಂತೆ ಕೇಳುತ್ತವೆ. ಚಾರ್ಲಿ ಎಷ್ಟೇ ಜನದಟ್ಟಣೆ ಇದ್ದರೂ ಸ್ವಲ್ಪವೂ ಹೆದರದೇ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿತ್ತು. ಒಳಾಂಗಣ ಹಾಗೂ ಹೊರಾಂಗಣ ಶೂಟಿಂಗ್‌ಗೂ ಮುನ್ನ ಸಾಕಷ್ಟು ತರಬೇತಿ ನಡೆಯುತ್ತಿತ್ತು'' ಎನ್ನುತಾರೆ ಪ್ರಮೋದ್.

    ನಾಯಿಗೆ ಫುಲ್ ಡಿಮ್ಯಾಂಡ್

    ನಾಯಿಗೆ ಫುಲ್ ಡಿಮ್ಯಾಂಡ್

    ಸದ್ಯ ಚಾರ್ಲಿ ಸಿನಿಮಾದ ಶ್ವಾನಕ್ಕೆ ಕನ್ನಡ ಮಾತ್ರವಲ್ಲದೆ ನೆರೆರಾಜ್ಯದ ಸಿನಿಮಾ ಇಂಡಸ್ಟ್ರಿಯಿಂದಲೂ ಡಿಮ್ಯಾಂಡ್ ಶುರುವಾಗಿದೆ. ಡಾಲಿ ಧನಂಜಯ್ ಅಭಿನಯಿಸುತ್ತಿರುವ ಹೊಯ್ಸಳ ಸಿನಿಮಾಗೂ ಪ್ರಮೋದ್ 5 ಅಪರೂಪದ ಬೆಲ್ಜಿಯನ್ ಮ್ಯಾಲಿನಾಯಿಸ್ ನೀಡಿದ್ದಾರೆ. ತೆಲುಗು, ಮಲಯಾಳಂನಿಂದ ಸಿನಿಮಾದಲ್ಲಿ ನಟಿಸಲು ಪ್ರಮೋದ್ ಅವರ ಕೇಂದ್ರದ ಶ್ವಾನಗಳಿಗೆ ಅವಕಾಶ ಬಂದಿದೆ. ಚಾರ್ಲಿ ದೆಸೆಯಿಂದ ಆಕೆ ಸ್ನೇಹಿತರಿಗೂ ಈಗ ಬೇರೆ ಬೇರೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಲಭಿಸುತ್ತಿದೆ. ಚಿತ್ರದಲ್ಲಿ ಚಾರ್ಲಿ ಸಿನಿಮಾ ನೋಡಿದವರಲ್ಲಿ ಹಲವರು ಬೀದಿ ನಾಯಿಗಳನ್ನು ತಂದು ಸಾಕಲು ಶುರು ಮಾಡಿದ್ದಾರೆ. ಕೆಲವರು ಶ್ವಾನಗಳನ್ನು ದತ್ತು ಸ್ವೀಕರಿಸಿದ್ದಾರೆ.

    English summary
    777 Charlie movie dog getting offers from other states also. Dog trainer Pramod also became celebrity due to Dog Charlie.
    Saturday, July 2, 2022, 15:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X