For Quick Alerts
  ALLOW NOTIFICATIONS  
  For Daily Alerts

  ವಿವಿಧ ರಾಜ್ಯಗಳ 21 ನಗರಗಳಲ್ಲಿ '777 ಚಾರ್ಲಿ' ಪ್ರೀಮಿಯರ್ ಶೋ!

  |

  ಕಳೆದ ಕೆಲ ವರ್ಷಗಳಿಂದ ಕಿರಣ್ ರಾಜ್, ರಕ್ಷಿತ್ ಶೆಟ್ಟಿ ಮತ್ತು ಇಡೀ ತಂಡ ಕಷ್ಟಪಟ್ಟು ಮಾಡಿದ '777 ಚಾರ್ಲಿ' ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾವನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

  ರಕ್ಷಿತ್ ಶೆಟ್ಟಿಯಂತೂ ಉತ್ಸಾಹದಿಂದ ವಿವಿಧ ನೆರೆ ಹೊರೆಯ ರಾಜ್ಯಗಳ ನಗರಗಳಿಗೆ ತೆರಳಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ನಡುವೆ '777 ಚಾರ್ಲಿ' ಸಿನಿಮಾದ ಪ್ರೀಮಿಯರ್ ಶೋ ಅನ್ನು ಅದ್ಧೂರಿಯಾಗಿ ಆಯೊಜನೆ ಮಾಡಿದ್ದಾರೆ ಸಹ ನಿರ್ಮಾಪಕ ಆಗಿರುವ ರಕ್ಷಿತ್ ಶೆಟ್ಟಿ.

  ದೇಶದ ವಿವಿಧ 21 ಪ್ರಮುಖ ನಗರಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲಾಗುತ್ತಿದ್ದು, ಸಿನಿಮಾ ಬಿಡುಗಡೆಗೆ ಕೆಲವು ದಿನಗಳ ಮುಂಚೆಯೇ ಈ ಪ್ರೀಮಿಯರ್ ಶೋಗಳು ಪ್ರದರ್ಶನಗೊಳ್ಳಲಿವೆ.

  ಹೈದರಾಬಾದ್, ಅಹ್ಮದಾಬಾದ್, ಚೆನ್ನೈ, ಕೊಚ್ಚಿನ್, ಡೆಲ್ಲಿ, ಲಖನೌ, ಪುಣೆ, ಬರೋಡಾ, ನಾಗ್‌ಪುರ್, ತ್ರಿವೇಂಡ್ರಮ್, ಸೊಲ್ಲಾಪುರ್, ವಾರಣಾಸಿ, ಅಮೃತ್‌ಸರ, ಜೈಪುರ, ಸೂರತ್, ಪಣಜಿ, ಕೊಲ್ಕತ್ತ, ಮುಂಬೈ, ವೈಜಾಗ್, ಕೊಯಂಬತ್ತೂರು, ಮಧುರೈ ನಗರಗಳಲ್ಲಿ ಪ್ರೀಮಿಯರ್ ಶೋ ಆಯೋಜನೆ ಮಾಡಲಾಗಿದೆ.

  ಅಮೃತ್‌ಸರ, ಡೆಲ್ಲಿಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಎಂಟು ದಿನ ಮುಂಚಿತವಾಗಿ ಅಂದರೆ ಜೂನ್ 02 ರಂದೇ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಕೆಲವೆಡೆ, ಜೂನ್ 06, 07 ಕ್ಕೂ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ. ಕೆಲವು ನಗರಗಳಲ್ಲಿ ಈಗಾಗಲೇ ಟಿಕೆಟ್ ಬುಕಿಂಗ್ ಆಗಿಬಿಟ್ಟಿದೆ.

  ಕರ್ನಾಟಕದಲ್ಲಿ ಸಹ ಹಲವು ನಗರಗಳಲ್ಲಿ ಪ್ರೀಮಿಯರ್ ಆಯೋಜಿಸಲು ಚಿತ್ರತಂಡ ನಿರ್ಧರಿಸಿದ್ದು, ಸಿನಿಮಾ ಅಧಿಕೃತವಾಗಿ ಬಿಡುಗಡೆ ಆಗುವ ಒಂದು ದಿನ ಮುಂಚಿತವಾಗಿ ಅಂದರೆ ಜೂನ್ 09 ರಂದು ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಆದರೆ ರಾಜ್ಯದಲ್ಲಿ ಎಲ್ಲೆಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿದೆ ಎಂಬ ಪಟ್ಟಿ ಇನ್ನಷ್ಟೆ ಪ್ರಕಟಗೊಳ್ಳಬೇಕಿದೆ.

  Recommended Video

  ನಾನು ರೋಬೋತರ ಬದಲಾಗಲು 3ವರ್ಷ ಆಯ್ತು | Robo Ganesh

  '777 ಚಾರ್ಲಿ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಾಯಕ ನಟನಾಗಿ ನಟಿಸಿದ್ದು, ನಾಯಕ ಹಾಗೂ ಒಂದು ನಾಯಿಯ ನಡುವಿನ ಬಂಧದ ಕತೆಯುಳ್ಳ ಇದಾಗಿರಲಿದೆ. ಸಿನಿಮಾವು ಜೂನ್ 10 ರಂದು ತೆರೆಗೆ ಬರಲಿದ್ದು, ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹೊರತಾಗಿ ರಾಜ್ ಬಿ ಶೆಟ್ಟಿ, ತಮಿಳು ನಟ ಬಾಬಿ ಸಿಂಹ, ದಾನಿಶ್ ಸೇಠ್ ಇನ್ನೂ ಹಲವರಿದ್ದಾರೆ.

  English summary
  Rakshit Shetty starrer 777 Charlie movie premiere show organized in 21 different cities across India. Movie is releasing on June 10.
  Thursday, June 2, 2022, 9:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X