For Quick Alerts
  ALLOW NOTIFICATIONS  
  For Daily Alerts

  80ರ ದಶಕದ ಸ್ಟಾರ್ಸ್ ಪಾರ್ಟಿ: ಅಂಬರೀಶ್ ಒಬ್ಬರು ಮಿಸ್

  |

  80ರ ದಶಕದ ಕಲಾವಿದರು ಪ್ರತಿ ವರ್ಷ ಒಂದು ಕಡೆ ಭೇಟಿ ಮಾಡಿ ಸಂತೋಷ ಕೂಟ ಏರ್ಪಡಿಸುತ್ತಾರೆ. ಈ ಕಾರ್ಯಕ್ರಮ ಬಹಳ ವರ್ಷಗಳಿಂದ ತಪ್ಪದೆ ನಡೆದುಕೊಂಡು ಬಂದಿದೆ. ಈ ವರ್ಷವೂ ಈ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದೆ.

  ದಕ್ಷಿಣ ಭಾರತದ ಕಲಾವಿದರು ಹಾಗೂ ಬಾಲಿವುಡ್ ನ ಕೆಲವು ಹಿರಿಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಬಾರಿ ಮೆಗಾ ಸ್ಟಾರ್ ಚಿರಂಜೀವಿ ಮನೆಯಲ್ಲಿಯೇ ಈ ಪಾರ್ಟಿ ನಡೆದಿದೆ. ಪ್ರತಿ ವರ್ಷವೂ ಒಂದೊಂದು ಥೀಮ್ ನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದ್ದು, ಈ ಬಾರಿ ಬ್ಲಾಕ್ ಹಾಗೂ ಗೋಲ್ಡನ್ ಕಾಸ್ಟೂಮ್ ಅನ್ನು ಕಲಾವಿದರು ಧರಿಸಿದ್ದರು.

  ಅಂಬಿ ಇಲ್ಲದ ಒಂದು ವರ್ಷ: ಏನೇನೆಲ್ಲಾ ನಡೆದು ಹೋಯ್ತು.!ಅಂಬಿ ಇಲ್ಲದ ಒಂದು ವರ್ಷ: ಏನೇನೆಲ್ಲಾ ನಡೆದು ಹೋಯ್ತು.!

  ನಟ ಚಿರಂಜೀವಿ, ಮೋಹನ್ ಲಾಲ್, ರಮೇಶ್ ಅರವಿಂದ್, ಪ್ರಭು, ನಾಗಾರ್ಜುನ, ವೆಂಕಟೇಶ್, ಶರತ್ ಕುಮಾರ್, ಜಾಕಿ ಶ್ರಾಫ್, ಸಂಪತ್ ಕುಮಾರ್, ಜಗಪತಿ ಬಾಬು, ನಟಿ ಸುಹಾಸಿನಿ, ಸುಮಲತಾ, ಜಯಪ್ರದ, ಅಂಬಿಕಾ, ಖುಷ್ಬು ಸೇರಿದಂತೆ 25ಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಭಾಗಿಯಾಗಿದ್ದರು.

  ನಟ ಅಂಬರೀಶ್ ಸಹ ಈ ಕಾರ್ಯಕ್ರಮದಲ್ಲಿ ಪ್ರತಿ ವರ್ಷವೂ ಭಾಗಿ ಆಗುತ್ತಿದ್ದರು. ಕಳೆದ ವರ್ಷವೂ ಸ್ನೇಹಿತರ ಜೊತೆಗೆ ಸಮಯ ಕಳೆದಿದ್ದರು. ಆದರೆ, ಈ ಬಾರಿ ಅವರನ್ನು ಈ ಕಾರ್ಯಕ್ರಮ ಮಿಸ್ ಮಾಡಿಕೊಂಡಿದೆ. ಪ್ರತಿ ವರ್ಷ ಇರುತ್ತಿದ್ದ ಅಂಬಿ ಈ ವರ್ಷ ಇರದೆ ಇರುವುದು ಕಲಾವಿದ ಸ್ನೇಹಿತರಿಗೆ ಬೇಸರ ತಂದಿದೆ.

  ಎಲ್ಲರೂ ಒಂದೆಡೆ ಸೇರಿ, ಕಷ್ಟ ಸುಖ ಮಾತನಾಡಿ, ಖುಷಿಯಿಂದ ಕಾರ್ಯಕ್ರಮ ಕಳೆದಿದ್ದಾರೆ. ಗ್ರೂಪ್ ಫೋಟೋವನ್ನು ಅನೇಕರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೊಂದು ಕಲಾವಿದರನ್ನು ಒಟ್ಟಿಗೆ ನೋಡುವುದೇ ಖುಷಿಯ ವಿಚಾರವಾಗಿದೆ.

  English summary
  80s south Indian movie stars get together.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X