For Quick Alerts
  ALLOW NOTIFICATIONS  
  For Daily Alerts

  ಶ್ವೇತ ವರ್ಣದಲ್ಲಿ ಮಿಂಚಿದ 80ರ ದಶಕದ ತಾರೆಯರು

  |

  ಇವರೆಲ್ಲ 80ರ ದಶಕ ಸೂಪರ್ ಸ್ಟಾರ್ ಗಳು. ಒಬ್ಬರಿಗಿಂತ ಮತ್ತೊಬ್ಬರು ಅಭಿನಯದಲ್ಲಿ ಕಲಾಚತುರರು. ಅವರ ಮುಂದೆ ಕ್ಯಾಮೆರಾ ಇಟ್ಟರೆ ಪರಕಾಯ ಪ್ರವೇಶ ಮಾಡಿ ಪಾತ್ರಕ್ಕೆ ಜೀವ ತುಂಬ ಬಲ್ಲ ಅದ್ಭುತ ಕಲಾವಿದರು.

  ತೆರೆಯಿಂದ ಇವರುಗಳು ಸ್ವಲ್ಪ ಮಟ್ಟಿಗೆ ಹಿಂದೆ ಸರಿದರೂ, ಇವರ ಸ್ನೇಹ ಮಾತ್ರ ಹಾಗೆ ಮುಂದುವರಿಯುತ್ತಿದೆ. ಹೌದು, 80ರ ದಶಕದ ನಟ ನಟಿಯರ 9 ನೇ ವರ್ಷದ 'ಗೆಟ್ ಡು ಗೆದರ್' ಪಾರ್ಟಿ ಇತ್ತೀಚಿಗಷ್ಟೆ ಚೆನ್ನೈನ ಟಿ.ನಗರದಲ್ಲಿ ನಡೆದಿದೆ.

  ಈ ಪಾರ್ಟಿಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತಿಯೊಂದು ಬಾರಿಯೂ ಒಂದೊಂದು ಬಣ್ಣದ ಬಟ್ಟೆಗಳನ್ನ ತೊಡುವ ಈ ತಾರೆಯರು ಈ ಬಾರಿ ಶ್ವೇತ ವರ್ಣದಲ್ಲಿ ಮಿಂಚಿದ್ದಾರೆ. ಬಿಳಿ ಮತ್ತು ನೀಲಿ ಮಿಶ್ರಿತ ಬಣ್ಣದ ಉಡುಪುಗಳನ್ನ ತೊಟ್ಟು ಏಕತೆ ಮೆರೆದಿದ್ದಾರೆ.

  ಸಂಪ್ರದಾಯದಂತೆ ನಟಿ ಸುಹಾಸಿನಿ, ಲೀಸಾ ಮತ್ತು ರಾಜ್ ಕುಮಾರ್ ಸೇತುಪತಿ, ಪೂರ್ಣಿಮಾ ಭಾಗ್ಯರಾಜ್, ಖುಷ್ಬೂ ಶೋ ನಿರೂಪಣೆ ಮಾಡಿದ್ದಾರೆ.

  ಈ ಸಲ ಯಾರೆಲ್ಲಾ ಭಾಗವಹಿಸಿದ್ದರು ಎಂದು ನೋಡುವುದಾದರೇ, ಶರತ್ ಕುಮಾರ್, ಮೋಹನ್ ಲಾಲ್, ಅರ್ಜುನ್ ಸರ್ಜಾ, ಟೈಗರ್ ಶ್ರಾಫ್, ಸುಮನ್, ಸತ್ಯರಾಜ್, ಖುಷ್ಬೂ, ಸುಹಾಸಿನಿ, ರಾಜ್ ಕುಮಾರ್ ಸೇತುಪತಿ, ಪೂರ್ಣಿಮಾ ಭಾಗ್ಯರಾಜ್, ಲೀಸಾ, ನರೇಶ್, ಜಯರಾಂ ಸೇರಿದಂತೆ ಹಲವರು ಭಾಗಿಯಾಗಿದ್ದರು.

  ಪ್ರತಿವರ್ಷ ಭಾಗವಹಿಸುವ ಇನ್ನೂ ಅನೇಕ ಕಲಾವಿದರು ಈ ಸಲ ಭಾಗಿಯಾಗಿಲ್ಲ. ಹಿರಿಯ ನಟರಾದ ರಜನಿಕಾಂತ್, ಚಿರಂಜೀವಿ, ವೆಂಕಟೇಶ್, ಅಂಬರೀಶ್, ಪ್ರಭು, ರಮ್ಯಕೃಷ್ಣ, ಸುಮಲತಾ, ರಾಧಿಕಾ, ರೇವತಿ, ನದೀಯಾ, ಜಯಸುಧಾ ಸೇರಿದಂತೆ ಇನ್ನೂ ಹಲವರು ಈ ಸಲ ಕಾಣಿಸಿಕೊಂಡಿಲ್ಲ.

  English summary
  Actors and friends from the 80's, celebrated friendship and and brotherhood once again this year. This is the 9th reunion of the stars where the theme was denim and diamonds.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X