For Quick Alerts
  ALLOW NOTIFICATIONS  
  For Daily Alerts

  99% ಬ್ಲಾಕ್ ಆಗಿತ್ತು ಅರ್ಜುನ್ ಜನ್ಯ ಹೃದಯ: ಇನ್ನೆರಡು ಗಂಟೆ ತಡ ಆಗಿದ್ರೆ.?

  |

  ತೀವ್ರ ಎದೆ ನೋವು, ಹೊಟ್ಟೆ ನೋವು, ಬೆನ್ನು ನೋವು ಮತ್ತು ತಲೆ ನೋವು ಕಾಣಿಸಿಕೊಂಡಿದ್ರಿಂದಾಗಿ ಕಳೆದ ಭಾನುವಾರ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ದಾಖಲಾಗಿದ್ದರು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಅರ್ಜುನ್ ಜನ್ಯಗೆ ಚಿಕಿತ್ಸೆ ನೀಡುತ್ತಿರುವಾಗಲೇ ಅವರಿಗೆ ಕಾರ್ಡಿಯಾಕ್ ಪ್ರಾಬ್ಲಂ ಇರುವುದು ಕೂಡ ವೈದ್ಯರ ಅರಿವಿಗೆ ಬಂದಿದೆ.

  ಅರ್ಜುನ್ ಜನ್ಯ ಅನಾರೋಗ್ಯದ ಬಗ್ಗೆ ತರುಣ್ ಸುಧೀರ್ ಹೇಳಿದ್ದೇನು ಗೊತ್ತಾ..? | Arjun Janya | Tharun sudhir

  ಅರ್ಜುನ್ ಜನ್ಯ ರವರ ಹೃದಯ 99% ಬ್ಲಾಕ್ ಆಗಿತ್ತು. ಇಂಪೆನ್ಡಿಂಗ್ ಹಾರ್ಟ್ ಅಟ್ಯಾಕ್ ಸ್ಟೇಜ್ ತಲುಪಿದ್ದ ಅರ್ಜುನ್ ಜನ್ಯಗೆ ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಮೈಸೂರಿನ ಆಸ್ಪತ್ರೆ ವೈದ್ಯರು ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಮಾಡಿ, ಹೃದಯಕ್ಕೆ ಸ್ಟೆಂಟ್ ಅಳವಡಿಸಿದ್ದಾರೆ.

  ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಎದೆ ನೋವು: ಆಸ್ಪತ್ರೆಗೆ ದಾಖಲುಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಎದೆ ನೋವು: ಆಸ್ಪತ್ರೆಗೆ ದಾಖಲು

  ಸರಿಯಾದ ಸಮಯಕ್ಕೆ ಚಿಕಿತ್ಸೆ ಲಭಿಸಿದ್ದರಿಂದಾಗಿ, ಪ್ರಾಣಾಪಾಯದಿಂದ ಅರ್ಜುನ್ ಜನ್ಯ ಪಾರಾಗಿದ್ದಾರೆ. ಇನ್ನೆರಡು ಗಂಟೆ ತಡವಾಗಿದ್ದರೂ, ಅರ್ಜುನ್ ಜನ್ಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿತ್ತು ಎಂದಿದ್ದಾರೆ ವೈದ್ಯರು.

  ಅರ್ಜುನ್ ಜನ್ಯ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ವೈದ್ಯರ ತಂಡಅರ್ಜುನ್ ಜನ್ಯ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ವೈದ್ಯರ ತಂಡ

  ''ಅರ್ಜುನ್ ಜನ್ಯ ಹೃದಯ 99% ಬ್ಲಾಕ್ ಆಗಿತ್ತು. ಅದು Impending Heart Attack. ಇನ್ನೇನು 2-4 ಗಂಟೆ ಬಿಟ್ಟಿದ್ದರೆ, ಕೆಟ್ಟ ಪರಿಣಾಮ ಬೀರುತ್ತಿತ್ತು'' ಎಂದು ಮೈಸೂರಿನ ಖಾಸಗಿ ಆಸ್ಪತ್ರೆ ವೈದ್ಯ, ಹೃದ್ರೋಗ ತಜ್ಞ ಆದಿತ್ಯ ಉಡುಪ ಹೇಳಿದ್ದಾರೆ.

  ಆಂಜಿಯೋಪ್ಲಾಸ್ಟಿ ಬಳಿಕ ಅರ್ಜುನ್ ಜನ್ಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಎದೆ ನೋವು, ಬೆನ್ನು ನೋವು, ಹೊಟ್ಟೆ ನೋವು ಮತ್ತು ತಲೆ ನೋವು ವಾಸಿ ಆಗಿದೆ. ಸಿಸಿಯುದಿಂದ ಅವರನ್ನ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

  English summary
  99 Percent Of Arjun Janya's Heart Was Blocked Says Doctor Adhitya Udupa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X