For Quick Alerts
ALLOW NOTIFICATIONS  
For Daily Alerts

  ಮನೆ ಮಾರಿ ಮಗನ ಸಿನಿಮಾ ಮಾಡಿದ 'ಸ್ಟಾರ್' ಡೈರೆಕ್ಟರ್.!

  By Bharath Kumar
  |

  ಈ ಡೈರೆಕ್ಟರ್ ಸಿನಿಮಾ ಅಂದ್ರೆ ಅಭಿಮಾನಿಗಳು ಮುಗಿಬಿದ್ದು ಥಿಯೇಟರ್ ಗೆ ಬರ್ತಾರೆ. ಯಾವುದೇ ಸಿನಿಮಾದಲ್ಲಿ ಬ್ಯುಸಿ ಇದ್ರು, ಸ್ಟಾರ್ ನಟರು ಈ ನಿರ್ದೇಶಕನಿಗೆ ಮೊದಲ ಕಾಲ್ ಶೀಟ್ ಕೊಡ್ತಾರೆ. ಇನ್ನು ಚಿತ್ರರಂಗಕ್ಕೆ ಬರೋ ಹೊಸ ನಟರು ಈ ಡೈರೆಕ್ಟರ್ ಜೊತೆ ಸಿನಿಮಾ ಮಾಡ್ಬೇಕು ಎಂಬ ಆಸೆ ಹೊಂದಿರುತ್ತಾರೆ.

  ಇಂತಹ ನಿರ್ದೇಶಕನ ಪರಿಸ್ಥಿತಿ ಈಗ ತುಂಬಾ ಕಷ್ಟಕರವಾಗಿದೆ. ತನ್ನ ಮಗನ ಚಿತ್ರಕ್ಕಾಗಿ ಮನೆಯನ್ನೇ ಮಾರಿ ಸಿನಿಮಾ ಮಾಡಿದ್ದಾರೆ. ಇದು ಆಶ್ಚರ್ಯವಾದರೂ ನಂಬಲೇಬೇಕು.

  ಪುನೀತ್ ರಾಜ್ ಕುಮಾರ್ ಗೂ ಸಿನಿಮಾ ಮಾಡಿದ್ದಾರೆ, ಶಿವರಾಜ್ ಕುಮಾರ್ ಗೂ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗು ನಟ ಮಹೇಶ್ ಬಾಬು, ಎನ್.ಟಿ.ಆರ್, ಪ್ರಭಾಸ್ ಗೂ ಡೈರೆಕ್ಷನ್ ಮಾಡಿದ್ದಾರೆ. ಇಷ್ಟೆಲ್ಲಾ ಸ್ಟಾರ್ ನಟರಿಗೆ ಸಿನಿಮಾ ಮಾಡಿರುವ ನಿರ್ದೇಶಕ ಮಗನಿಗಾಗಿ ಮನೆ ಮಾರಿದ್ದಾರಂತೆ. ಅಷ್ಟಕ್ಕೂ, ಯಾರೂ ಆ ಡೈರೆಕ್ಟರ್. ಮುಂದೆ ಓದಿ....

  ಮನೆ ಮಾರಿದ ಪೂರಿ ಜಗನ್ನಾಥ್

  ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ಮಗನ ಚಿತ್ರಕ್ಕಾಗಿ ಮನೆ ಮಾರಿ ಸಿನಿಮಾ ಮಾಡಿದ್ದಾರಂತೆ. ಈ ವಿಷ್ಯವನ್ನ ಖುದ್ದು ಪೂರಿ ಅವರೇ ಬಹಿರಂಗಪಡಿಸಿದ್ದಾರೆ. ಪೂರಿ ಅವರ ಮಗ ಆಕಾಶ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಚೊಚ್ಚಲ ಸಿನಿಮಾವನ್ನ ಪೂರಿ ಜಗನ್ನಾಥ್ ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದಾರೆ.

  ಬೇರೆ ಬ್ಯಾನರ್ ನಲ್ಲಿ ಮಾಡಿದ್ರೆ ಮಗನನ್ನ ಯಾರ್ ನೋಡ್ತಾರೆ.?

  ''ಬೇರೆ ಬ್ಯಾನರ್ ನನ್ನ ಮಗನ ಸಿನಿಮಾ ಮಾಡಿದ್ರೆ, ಯಾರು ಸಿನಿಮಾ ನೋಡ್ತಾರೆ. ಅದಕ್ಕೆ ನಾನೇ ಈ ರಿಸ್ಕ್ ತೆಗೆದುಕೊಂಡಿದ್ದೇನೆ. ಈ ಸಿನಿಮಾಗೋಸ್ಕರ ನನ್ನ ಬಳಿ ಇದ್ದ ಆಸ್ತಿಯಲ್ಲಿ ಒಂದು ಮನೆಯನ್ನ ಮಾರಿದ್ದೇನೆ. ನನ್ನ ಮಗನ ಮೇಲೆ ನನಗೆ ನಂಬಿಕೆ ಇದೆ. ಅದಕ್ಕೆ ಅವನ ಮೇಲೆ ಇಷ್ಟೊಂದು ಹಣ ಹಾಕಿದ್ದೇನೆ'' ಎಂದು ಪೂರಿ ಹೇಳುತ್ತಾರೆ.

  ತುಂಬ ಸಲ ಹಣ ಕಳೆದುಕೊಂಡಿದ್ದೇನೆ

  'ನನ್ನ ಜೀವನದಲ್ಲಿ ಎಷ್ಟು ಬಾರಿ ಹಣ ಕಳೆದುಕೊಂಡಿದ್ದೇನೆ. ಅದೇ ರೀತಿ ಮತ್ತೆ ಸಂಪಾದನೆ ಮಾಡಿದ್ದೀನಿ. ಪ್ರತಿಸಲವೂ ಜೀರೋಯಿಂದಲೇ ನಾನು ಆರಂಭಿಸುತ್ತೇನೆ. ಅಲ್ಲಿಂದಲೇ ತಯಾರಾಗುತ್ತೇನೆ'' ಎಂದು ನಿರ್ದೇಶಕ ಪೂರಿ ಜಗನ್ನಾಥ್ ತಿಳಿಸಿದ್ದಾರೆ.

  ಮೇ 11ಕ್ಕೆ ಮಗನ ಸಿನಿಮಾ ರಿಲೀಸ್

  ಮೇ 11 ರಂದು ಪೂರಿ ಜಗನ್ನಾಥ್ ಅವರ ಮಗ ಆಕಾಶ್ ಪೂರಿ ಅಭಿನಯದ ಚೊಚ್ಚಲ ಸಿನಿಮಾ 'ಮೆಹಬೂಬ್' ಸಿನಿಮಾ ಬಿಡುಗಡೆಯಾಗುತ್ತಿದೆ. 1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಲ್ಲಿ ನಡೆಯುವ ಪ್ರೇಮಕಥೆ ಇದಾಗಿದ್ದು, ಆಕಾಶ್ ಪೂರಿ ಸೈನಿಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  'ಮುಂಗಾರುಮಳೆ' ಹುಡುಗಿ ನಾಯಕಿ

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿದ್ದ ಮುಂಗಾರು ಮಳೆ 2 ಚಿತ್ರದ ನಾಯಕಿ ನೇಹಾ ಶೆಟ್ಟಿ 'ಮೆಹಬೂಬ್' ಚಿತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ಸಿನಿ ಜರ್ನಿ ಆರಂಭಿಸಿದ್ದಾರೆ.

  English summary
  "Who will watch Akash if I make him a hero under another producer? People may wonder if audiences will come to watch my son. So, I took the risk. That's why I had sold off one of my houses and made Mehbooba. I believe in my son and that's why I have spent so much on him," Puri Jagannadh siad.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more