»   » ಛಲ, ಚಪಲ ಇದರ ವ್ಯತ್ಯಾಸ ಗೊತ್ತಿಲ್ಲದ ಸಿನಿಮಾ ಮಂದಿ

ಛಲ, ಚಪಲ ಇದರ ವ್ಯತ್ಯಾಸ ಗೊತ್ತಿಲ್ಲದ ಸಿನಿಮಾ ಮಂದಿ

Posted By: ಜೀವನರಸಿಕ
Subscribe to Filmibeat Kannada

"ನೀವ್ ಮಾಡ್ತಿರೋದನ್ನ ಛಲ ಅನ್ನಬೇಕೋ ಚಪಲ ಅನ್ನಬೇಕೋ ಗೊತ್ತಾಗ್ತಿಲ್ಲ. ಮೂರ್ಮೂರು ಸಿನಿಮಾ ಹಿಟ್ ಕೊಟ್ಟ ಇವ್ರಿಗೆಲ್ಲ ಅದೆಲ್ಲಿಂದ ಬಂದ್ಬಿಡುತ್ತೋ ಹೀರೋ ಆಗೋ ಹುಚ್ಚು..." ಹಾಗಂತ ಈ ಡೈಲಾಗ್ ಹೇಳಿದ್ದು ಅಪ್ಪಟ ಕನ್ನಡ ಸಿನಿಮಾ ಪ್ರೇಮಿ.

ಈ ಡೈಲಾಗ್ ಕೇಳಿ ಬಂದಿದ್ದು ಬಿಎಂಟಿಸಿ ಬಸ್ಸಲ್ಲಿ ರಸ್ತೆ ಬದಿಯಲ್ಲೆಲ್ಲೋ ಅಕ್ಕಪಕ್ಕದಲ್ಲಿ ಕಂಡ ಪ್ರೇಮ್ ಅಭಿನಯದ 'ಡಿಕೆ', ನಾಗಶೇಖರ್ ಅಭಿನಯದ 'ಸಿಗರೇಟ್' ಚಿತ್ರದ ಪೋಸ್ಟರ್ ನೋಡಿ ಬಸ್ ನಲ್ಲಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಹೀಗೆ ಹೇಳಿದ್ರು.

DK

ಒಂದರ್ಥದಲ್ಲಿ ಸತ್ಯ ಅನ್ನಿಸುತ್ತೆ ಅಲ್ವಾ. ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿಯಂತಹಾ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ಪ್ರೇಮ್, ಅರಮನೆ, ಸಂಜುವೆಡ್ಸ್ ಗೀತಾ, ಮೈನಾದಂತಹ ಶತದಿನೋತ್ಸವದ ಚಿತ್ರ ಕೊಟ್ಟ ನಾಗಶೇಖರ್ ಈ ಇಬ್ಬರೂ ಈಗ ನಿರ್ದೇಶನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. [ಗಾಂಧಿನಗರದ ಮಾನ ಹರಾಜಾಕಿದ ತರ್ಲೆ ನನ್ಮಕ್ಳು]

ಈಗಾಗ್ಲೇ 3-4 ವರ್ಷ ಕಳೆದುಹೋಗಿದೆ. ಹೀರೋಗಳಾಗಿ ಇವ್ರು ಮಿಂಚೋಕೆ ಗುರುತಿಸಿಕೊಳ್ಳೋಕೆ ಹತ್ತು ವರ್ಷವಾದ್ರೂ ಬೇಕು. ಹತ್ತಾರು ವರ್ಷವಾದ್ರೂ ಜನ್ರು ಒಪ್ಪಿಕೊಂಡ್ರೆ ಮಾತ್ರ. ಆದ್ರೆ ಈಗಾಗ್ಲೇ ಇವ್ರು ಸ್ಟಾರ್ ಡೈರೆಕ್ಟರ್ಸ್ ಆಗಿ ಗುರುತಿಸಿಕೊಂಡಿದ್ದಾಗಿದೆ. ಅಷ್ಟರಲ್ಲಿ 5-6 ಸೂಪರ್ ಹಿಟ್ ಸಿನಿಮಾ ಕೊಡ್ಬಹುದು ಅಲ್ವಾ.

cigarette

ಇವ್ರಿಗೆಲ್ಲಾ ಅದ್ಯಾವಾಗ ಬುದ್ಧಿ ಬರುತ್ತೋ ಅನ್ನೋ ಆ ವ್ಯಕ್ತಿಯ ಮಾತುಗಳಲ್ಲಿ ನಿಜವಾದ ಸಿನಿಪ್ರೇಮವಿತ್ತು. ಒಳ್ಳೆಯ ನಿರ್ದೇಶಕರು ಕಳೆದುಹೋಗ್ತಿರೋ ಕಾಳಜಿಯಿತ್ತು. ನಿಮಗೂ ಹಾಗೆಯೇ ಅನ್ನಿಸುತ್ತಿರಬಹುದು ಅಲ್ವಾ?

English summary
Recently a stranger in a BMTC bus made a comment on present trend in Sandalwood movies, such as directors are becoming heroes in Kannada film industry. He clearly point out on Prem's 'DK' and Nagashekar's 'Cigarette'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada