»   »  ಎಲ್ಲಿ ಹೋದರು ರಾಧಿಕಾ ಕುಮಾರಸ್ವಾಮಿ.? ಹೇಗಿದ್ದಾರೆ.? ಏನ್ಮಾಡ್ತಿದ್ದಾರೆ.?

ಎಲ್ಲಿ ಹೋದರು ರಾಧಿಕಾ ಕುಮಾರಸ್ವಾಮಿ.? ಹೇಗಿದ್ದಾರೆ.? ಏನ್ಮಾಡ್ತಿದ್ದಾರೆ.?

Posted By:
Subscribe to Filmibeat Kannada
ರಾಧಿಕಾ ಮುಂದಿನ ಚಿತ್ರಗಳು ಯಾವುವು ? | Radhika's upcoming projects | Filmibeat Kannada

ಹುಟ್ಟುಹಬ್ಬ ಬಂತು ಅಂದ್ರೆ... ಸಿನಿಮಾಗಳು ರಿಲೀಸ್ ಗೆ ರೆಡಿ ಆಯ್ತು ಅಂದ್ರೆ ಮಾತ್ರ ಪ್ರೇಕ್ಷಕರಿಗೆ ಹಾಗೂ ಮಾಧ್ಯಮದವರ ಕಣ್ಣಿಗೆ ಕೆಲ ಸೆಲೆಬ್ರಿಟಿಗಳು ಬೀಳ್ತಾರೆ. ಅಂತಹ ಸಾಲಿನಲ್ಲಿ ಇದೀಗ ರಾಧಿಕಾ ಕುಮಾರಸ್ವಾಮಿ ಕೂಡ ನಿಂತಿದ್ದಾರೆ ಅಂದ್ರೆ ತಪ್ಪಿಲ್ಲ.!

ಇತ್ತೀಚೆಗಷ್ಟೇ 'ಕಾಂಟ್ರಾಕ್ಟ್' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಸಿಕ್ಕಿದ್ದ ರಾಧಿಕಾ ಕುಮಾರಸ್ವಾಮಿ ಮತ್ತೆ ಎಲ್ಲೂ ಕಣ್ಣಿಗೆ ಬೀಳಲಿಲ್ಲ. ನಿನ್ನೆಯಷ್ಟೇ ರಾಧಿಕಾ ಕುಮಾರಸ್ವಾಮಿ ಬರ್ತಡೇ ಆಗಿದೆ. ಆದರೂ ಅವರು ಮಾಧ್ಯಮದ ಮುಂದೆ ಬಂದಿಲ್ಲ. ಇನ್ನೇನು ಚುನಾವಣೆ ಬರ್ತಿದೆ, ರಾಜಕೀಯದಲ್ಲಿ ಏನಾದರೂ ಸುದ್ದಿ ಮಾಡ್ತಾರಾ, ಅಂದ್ರೆ ಅಲ್ಲೂ ಇಲ್ಲ...ಹಾಗಾದ್ರೆ ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಅಂತ ತಿಳಿದುಕೊಳ್ಳುವ ಕುತೂಹಲ ಇದ್ದರೆ ಮುಂದೆ ಓದಿ..

ರಾಧಿಕಾ ಚಿತ್ತ ಉದ್ಯಮದತ್ತ

ರಾಧಿಕಾ ಕುಮಾರಸ್ವಾಮಿ ಸದ್ಯ ತಮ್ಮ ಬಿಸಿನೆಸ್ ಗಳನ್ನ ನೋಡಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದಾರಂತೆ. ಬೆಂಗಳೂರಿಗಿಂತ ಹೆಚ್ಚಾಗಿ ವಿದೇಶದಲ್ಲೇ ಟೈಂ ಸ್ಪೆಂಡ್ ಮಾಡುತ್ತಿದ್ದಾರಂತೆ.

ಕೈನಲ್ಲಿದೆ ಸಾಕಷ್ಟು ಚಿತ್ರಗಳು

ಉದ್ಯಮದತ್ತ ಚಿತ್ತ ಹರಿಸಿದ ಮಾತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಸಿನಿಮಾರಂಗವನ್ನ ಬಿಟ್ಟಿಲ್ಲ. ರಾಧಿಕಾ ಅಭಿನಯದ 'ಕಾಂಟ್ರೆಕ್ಟ್', 'ರಾಜೇಂದ್ರ ಪೊನ್ನಪ್ಪ' ಚಿತ್ರೀಕರಣದ ಕೊನೆಯ ಹಂತದಲ್ಲಿದೆ.

ಹಾರಾರ್ ಚಿತ್ರದಲ್ಲಿ ರಾಧಿಕಾ

'ರಾಜೇಂದ್ರ ಪೊನ್ನಪ್ಪ' ಹಾಗೂ 'ಕಾಂಟ್ರಾಕ್ಟ್' ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ರಾಧಿಕಾ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಹಾರಾರ್ ಕಥಾಹಂದರವಿರುವ ಹೊಸಬರ ಸಿನಿಮಾಗೆ ಸೈನ್ ಮಾಡಿದ್ದು ಚಿತ್ರದ ಬಗ್ಗೆ ಎಲ್ಲೂ ಮಾಹಿತಿ ಬಿಟ್ಟುಕೊಟ್ಟಿಲ್ಲ

ಮಾರ್ಚ್ ನಲ್ಲಿ ಸೆಟ್ಟೇರಲಿರುವ ಚಿತ್ರ

ಬಹಳ ಹಿಂದೆಯೇ ಹೇಳಿದಂತೆ ರಾಧಿಕಾ ಹಾಗೂ ಶಿವರಾಜ್ ಕುಮಾರ್ ಒಟ್ಟಿಗೆ ಸಿನಿಮಾ ಮಾಡೋದು ಕನ್ಫರ್ಮ್ ಆಗಿದೆ. ಶಿವರಾಜ್ ಕುಮಾರ್ ಮಾರ್ಚ್ ನಲ್ಲಿ ಸಿನಿಮಾಗಾಗಿ ಡೇಟ್ಸ್ ಕೊಟ್ಟಿದ್ದು, ಓಂ ಸಾಯಿ ಪ್ರಕಾಶ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಶಮಿಕಾ ಕುಮಾರಸ್ವಾಮಿ ಬ್ಯಾನರ್ ನಲ್ಲಿ ಸಿನಿಮಾ ಸೆಟ್ಟೇರಲಿದೆ.

English summary
Here is a Detailed report on Radhika Kumaraswamy's upcoming kannada films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X