For Quick Alerts
  ALLOW NOTIFICATIONS  
  For Daily Alerts

  ವಿಷ್ಣುವರ್ಧನ್ ಕಟ್ ಔಟ್ ಗೆ ರಕ್ತದ ಅಭಿಷೇಕ ಮಾಡಿದ ಅಭಿಮಾನಿ!

  By Naveen
  |
  Nagarahaavu 2018:ವಿಷ್ಣು ದಾದಾ ಅಭಿಮಾನಿ ಎಂಥಾ ಕೆಲಸ ಮಾಡಿದ್ದಾನೆ ನೋಡಿ..!! | Filmibeat Kannada

  ನಟ ಡಾ.ವಿಷ್ಣುವರ್ಧನ್ ಅವರ 'ನಾಗರಹಾವು' ಸಿನಿಮಾ ಮತ್ತೆ ಜನರ ಮುಂದೆ ಬಂದಿದೆ. ಕಳೆದ ಶುಕ್ರವಾರ ಬಿಡುಗಡೆಯಾಗಿರುವ ಈ ಸಿನಿಮಾಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ವಿಷ್ಣು ಅಭಿಮಾನಿಗಳಿಗಂತು ಇದು ಸಂಭ್ರಮದ ಸಮಯವಾಗಿದೆ.

  'ನಾಗರಹಾವು' ಸಿನಿಮಾ ಮತ್ತೆ ರೀ ರಿಲೀಸ್ ಆದ ಖುಷಿಯನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ. ಆದರೆ, ಮೈಸೂರಿನ ಒಬ್ಬ ಅಭಿಮಾನಿ ರಕ್ತದ ಅಭಿಷೇಕದ ಮೂಲಕ ತನ್ನ ಅಭಿಮಾನವನ್ನು ತೋರಿಸಿದ್ದಾನೆ.

  ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ 'ನಾಗರಹಾವು' ಚಿತ್ರ ಪ್ರದರ್ಶನ ಆಗುತ್ತಿತ್ತು. ಈ ವೇಳೆ ಚಿತ್ರಮಂದಿರದ ಮುಂದೆ ನಿಲ್ಲಿಸಿದ್ದ ರಾಮಾಚಾರಿ ಕಟ್ ಔಟ್ ಮೇಲೆ ಹತ್ತಿದ ಅಭಿಮಾನಿ ರಕ್ತದ ಅಭಿಷೇಕ ಮಾಡಿ ಅಚ್ಚರಿ ಮೂಡಿಸಿದ್ದಾನೆ.

  ಅಭಿಮಾನಿಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ನೊಡಿದ ಅನೇಕರು ವಿಷ್ಟು ಶಾಂತಿ ಪ್ರಿಯರು, ಅಲ್ಲದೆ ಈ ರೀತಿ ಯಾರೆ ಮಾಡಿದರು ಅದು ತಪ್ಪು ಎಂದು ಆತನಿಗೆ ಹೇಳಿದ್ದಾರೆ.

  ಅಂದಹಾಗೆ, ಹೊಸ ತಂತ್ರಜ್ಞಾನದೊಂದಿಗೆ 'ನಾಗರಹಾವು' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಜ್ಯದ ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ಸಿನಿಮಾ 75 ಲಕ್ಷದಿಂದ 1 ಕೋಟಿ ಕಲೆಕ್ಷನ್ ಮಾಡಿದೆಯಂತೆ.

  English summary
  A fan did anointing of blood to actor Vishnuvardan cutout.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X