Don't Miss!
- News
ವಂದೇ ಭಾರತ್ ರೈಲಿಗಿಂತ 'ವಂದೇ ಮೆಟ್ರೋ' ಹೇಗೆ ಭಿನ್ನ? ಇಲ್ಲಿವೆ ಪ್ರಮುಖ ವೈಶಿಷ್ಟ್ಯ-ವಿಶೇಷತೆಗಳು
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Automobiles
ಹೆಲ್ಮೆಟ್ ಧರಿಸಿ ಬಂದ್ರೂ ಪತ್ತೆಹಚ್ಚಿದ ಅಭಿಮಾನಿಗಳು... ವಿಡಿಯೋ ವೈರಲ್
- Technology
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಂತಾರದಲ್ಲಿ ಅಪ್ಪು: ಪುನೀತ್ ರಾಜ್‌ಕುಮಾರ್ ಪೋಸ್ಟರ್‌ಗಳು ವೈರಲ್; ಆಹಾ ಎಷ್ಟು ಚೆಂದ
ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ಅಭಿನಯದ ಬಹುನಿರೀಕ್ಷಿತ ಚಿತ್ರ ಕಾಂತಾರ ಇದೇ ಶುಕ್ರವಾರ ( ಸೆಪ್ಟೆಂಬರ್ 30 ) ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಗೊಳ್ಳುತ್ತಿದೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ: ರಾಮಣ್ಣ ರೈ' ಚಿತ್ರವನ್ನು ನಿರ್ದೇಶಿಸಿ ಅತ್ಯುತ್ತಮ ಮಕ್ಕಳ ಚಿತ್ರ ಕೆಟಗರಿ ಅಡಿಯಲ್ಲಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದ ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ಮುಂದಿನ ಚಿತ್ರ ಇದಾಗಿದ್ದು, ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ
ಇಲ್ಲಿಯವರೆಗೂ ಒಟ್ಟಾರೆ 6 ಸಿನಿಮಾಗಳನ್ನು ನಿರ್ಮಿಸಿ ಬಿಡುಗಡೆಗೊಳಿಸಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಡಿಯಲ್ಲಿ ಬಿಡುಗಡೆಗೊಳ್ಳಲಿರುವ ಏಳನೇ ಚಿತ್ರ ಇದಾಗಿದ್ದು, ಪುನೀತ್ ರಾಜ್ ಕುಮಾರ್ ಹಾಗೂ ಯಶ್ ತಾರಾಗಣದಲ್ಲಿ ಇಲ್ಲದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಮೊದಲ ಸಿನಿಮಾ ಇದಾಗಿದೆ.
'ಕಾಂತಾರ'
ಚಿತ್ರದಲ್ಲಿ
ಹಾಲಿವುಡ್
ನಟ
ರಾಕ್:
ಸೀಕ್ರೆಟ್
ರಿವೀಲ್
ಮಾಡಿದ
ರಿಷಬ್
ಶೆಟ್ಟಿ
ಅಂದಹಾಗೆ ಇಲ್ಲಿಯವರೆಗೂ ಕೇವಲ ಅಪ್ಪು ಹಾಗೂ ಯಶ್ ಚಿತ್ರಗಳನ್ನು ಮಾತ್ರ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ರಿಷಬ್ ಶೆಟ್ಟಿ ಅವರು ಕಾಂತಾರಾ ಚಿತ್ರದ ಕಥೆಯನ್ನು ಹೇಳಿದಾಗ ಈ ಚಿತ್ರಕ್ಕೂ ಸಹ ಅಪ್ಪು ಅವರು ಆಯ್ಕೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಪುನೀತ್ ಈ ಚಿತ್ರದಲ್ಲಿ ನಟಿಸಲು ಆಗಲಿಲ್ಲ ಹಾಗೂ ಚಿತ್ರಕ್ಕೆ ರಿಷಬ್ ಶೆಟ್ಟಿ ಬಣ್ಣ ಹಚ್ಚಿದರು ಎಂಬ ವಿಚಾರವನ್ನು ಇತ್ತೀಚಿಗಷ್ಟೆ ಸಂದರ್ಶನಗಳಲ್ಲಿ ಚಿತ್ರತಂಡ ಹಂಚಿಕೊಂಡಿತ್ತು.

ಕತೆಗೆ ಅಪ್ಪು ಸೂಟ್ ಆಗ್ತಾರೆ ಎಂದಿದ್ರು ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಚರ್ಚೆ ನಡೆಸುವ ವೇಳೆ ಈ ಕತೆಗೆ ನಿಮ್ಮನ್ನು ಬಿಟ್ಟರೆ ಯಾವ ಸ್ಟಾರ್ ನಟ ಸೆಟ್ ಆಗ್ತಾರೆ ಎಂಬ ಪ್ರಶ್ನೆಯನ್ನು ನಿರ್ಮಾಪಕ ವಿಜಯ್ ಕಿರಗಂದೂರು ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ರಿಷಬ್ ಶೆಟ್ಟಿ ಚಿತ್ರದಲ್ಲಿ ಕಷ್ಟಕರ ಆ್ಯಕ್ಷನ್ ದೃಶ್ಯಗಳಿರುವುದರಿಂದ ಪುನೀತ್ ರಾಜ್ ಕುಮಾರ್ ಮಾತ್ರ ಈ ಪಾತ್ರ ಮಾಡಬಲ್ಲರು ಎಂದು ರಿಷಬ್ ಶೆಟ್ಟಿ ಉತ್ತರಿಸಿದ್ದರು.

ಕೂಡಲೇ ಅಪ್ಪುಗೆ ಕರೆಮಾಡಿ ಕರೆಸಿದ್ರು ವಿಜಯ್ ಕಿರಗಂದೂರು
ಹೀಗೆ ರಿಷಬ್ ಶೆಟ್ಟಿ ಅವರು ಅಪ್ಪು ಈ ಚಿತ್ರಕ್ಕೆ ಸೂಟ್ ಆಗ್ತಾರೆ ಎಂದ ಕೂಡಲೇ ಅಪ್ಪು ಅವರನ್ನು ಆಹ್ವಾನಿಸಿದ ವಿಜಯ್ ಕಿರಗಂದೂರು ರಿಷಬ್ ಶೆಟ್ಟಿ ಅವರ ಬಳಿ ಕಥೆ ಹೇಳಿಸಿದ್ದರು. ಕಥೆ ಕೇಳಿ ತುಂಬ ಸಂತೋಷ ವ್ಯಕ್ತ ಪಡಿಸಿದ್ದ ಪುನೀತ್ ರಾಜ್ ಕುಮಾರ್ ನಾನು ಸಹ ಇಂತಹ ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸಬೇಕೆಂಬ ಯೋಜನೆಯಲ್ಲಿದ್ದೆ, ಖಂಡಿತ ಈ ಚಿತ್ರ ಮಾಡೋಣ ಎಂದು ಮುಂದಾಗಿದ್ರು. ಆದರೆ ಈ ಚಿತ್ರವನ್ನು ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ಕಾಲ ಈ ಮೂರೂ ಸಮಯದಲ್ಲಿಯೂ ನಿರಂತರವಾಗಿ ಚಿತ್ರೀಕರಿಸಬೇಕಾಗಿತ್ತು ಹಾಗೂ ಅಪ್ಪು ಬೇರೆ ಚಿತ್ರಗಳಲ್ಲಿ ನಿರತರಾಗಿದ್ದರಿಂದ ಇಷ್ಟು ಸಮಯವನ್ನು ಕಾಂತಾರಕ್ಕೆ ನೀಡಲಾಗುತ್ತಿರಲಿಲ್ಲ. ಹೀಗಾಗಿ ತಾನು ಅಭಿನಯಿಸಬೇಕೆಂದರೆ ತುಂಬಾ ಲೇಟ್ ಆಗಿ ಬಿಡುತ್ತದೆ, ಆದ್ದರಿಂದ ಯೋಜನೆಯಂತೆ ರಿಷಬ್ ಶೆಟ್ಟಿ ಅವರೇ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿ ಎಂದು ಅಪ್ಪು ಹೇಳಿಕೆಯನ್ನು ನೀಡಿದ್ದರು ಎಂದು ಸ್ವತಃ ರಿಷಬ್ ಶೆಟ್ಟಿ ಅವರೇ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದರು.

ವೈರಲ್ ಆಯಿತು ಅಪ್ಪು ಪೋಸ್ಟರ್ಸ್
ಹೀಗೆ ಪುನೀತ್ ರಾಜ್ ಕುಮಾರ್ ಕಾಂತಾರ ಚಿತ್ರದಲ್ಲಿ ಅಭಿನಯಿಸಬೇಕಿತ್ತು ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಕಾರ್ತಿಕ್ ಕೆ ಎಲ್ ಎಂಬುವವರು ಕಾಂತಾರ ಚಿತ್ರದ ಫೋಟೋಗಳಲ್ಲಿ ರಿಷಬ್ ಶೆಟ್ಟಿ ಅವರ ದೇಹಕ್ಕೆ ಅಪ್ಪು ಮುಖವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಆಹಾ ಎಷ್ಟು ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ರಿಷಬ್ ಶೆಟ್ಟಿ ಕೂಡ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.