For Quick Alerts
  ALLOW NOTIFICATIONS  
  For Daily Alerts

  ಪುನೀತ್ ಸರಳತೆ ಹಾಗೂ ಸೌಜನ್ಯತೆಗೆ 'ಇದೇ' ಸಾಕ್ಷಿ.!

  By Harshitha
  |
  ಪುನೀತ್ ಅಂದ್ರೆ ಸರಳತೆ ಅನ್ನೋದು ಇದಕ್ಕೆ...!! | Filmibeat Kannada

  'ಅಭಿಮಾನಿಗಳೇ ದೇವರು' ಅಂತ ಅಣ್ಣಾವ್ರು ಹೇಳ್ತಿದ್ರು. ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕೂಡ ಅದನ್ನೇ ನಂಬಿ, ಪಾಲಿಸಿಕೊಂಡು ಬರುತ್ತಿದ್ದಾರೆ.

  ಅಭಿಮಾನಿಗಳ ಮನಸ್ಸನ್ನ ದೊಡ್ಮನೆ ಕುಟುಂಬ ಎಂದೂ ನೋಯಿಸಲ್ಲ. ಅಭಿಮಾನಿಗಳನ್ನ ಸದಾ ಆರಾಧಿಸುವ ದೊಡ್ಮನೆ ಮಕ್ಕಳ ಸರಳತೆಗೆ ತಾಜಾ ಉದಾಹರಣೆ ಇಲ್ಲಿದೆ ನೋಡಿರಿ...

  ಇತ್ತೀಚೆಗಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಕಾರಿನಲ್ಲಿ ಅಪ್ಪು ಹೋಗುತ್ತಿರುವುದನ್ನು ಗಮನಿಸಿದ ಓರ್ವ ವ್ಯಕ್ತಿ, ಪುನೀತ್ ಕಾರನ್ನೇ ಆರು ಕಿಲೋಮೀಟರ್ ವರೆಗೂ ಫಾಲೋ ಮಾಡಿದ್ದಾರೆ.

  ಪುನೀತ್ 'ಫೇಕ್ ಅಕೌಂಟ್' ಬಗ್ಗೆ ಅಭಿಮಾನಿಗಳಿಂದ ಜಾಗೃತಿ ಪುನೀತ್ 'ಫೇಕ್ ಅಕೌಂಟ್' ಬಗ್ಗೆ ಅಭಿಮಾನಿಗಳಿಂದ ಜಾಗೃತಿ

  ಇದನ್ನ ಗಮನಿಸಿದ ಅಪ್ಪು ಕಾರು ನಿಲ್ಲಿಸಿ, ಆ ವ್ಯಕ್ತಿಯನ್ನ ಕರೆದು ಫೋಟೋ ತೆಗೆಸಿಕೊಂಡು ಕಳುಹಿಸಿಕೊಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ರವರ ಈ ಸರಳತೆ ಹಾಗೂ ಸೌಜನ್ಯತೆಯನ್ನು ಕಂಡು ಆ ಅಭಿಮಾನಿ ಖುಷಿ ಆಗಿದ್ದಾರೆ.

  'ನಟ ಸಾರ್ವಭೌಮ' ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.!'ನಟ ಸಾರ್ವಭೌಮ' ಸಿನಿಮಾದಲ್ಲಿದೆ ಪಾರ್ಟಿ ಸಾಂಗ್.!

  ''ಪುನೀತ್ ರಾಜ್ ಕುಮಾರ್ ರವರ ಸರಳತೆ ಹಾಗೂ ಸೌಜನ್ಯತೆಗೆ ನಾನು ನಿಜಕ್ಕೂ ಮೂಕನಾದೆ. ಪುನೀತ್ ರವರ ಕಾರನ್ನ ನಾನು ಸುಮಾರು ಆರು ಕಿ.ಮಿವರೆಗೂ ಫಾಲೋ ಮಾಡಿದೆ. ನನ್ನನ್ನ ಮಿರರ್ ನಲ್ಲಿ ನೋಡಿ ರಸ್ತೆ ಬದಿ ತಮ್ಮ ಕಾರು ನಿಲ್ಲಿಸಿ, ''ಪ್ರಾಣ ಮುಖ್ಯ.. ನಾನು ಮತ್ತೆ ಸಿಗುತ್ತೇನೆ... ಫೋಟೋ ತೆಗೆದುಕೊಳ್ಳಿ'' ಎಂದು ಬುದ್ಧಿವಾದ ಹೇಳಿ ಫೋಟೋ ತೆಗೆಸಿಕೊಂಡರು'' ಎಂದು ಕೀರ್ತಿ ರಾಜಾಹುಲಿ ಎಂಬ ಆ ವ್ಯಕ್ತಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  English summary
  Have a look at this picture of Puneeth Rajkumar with a fan, who followed Appu's car for 6 KM.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X