For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಯಶ್ ಗೆ ಫಿಲಿಪ್ಪೀನ್ಸ್ ಅಭಿಮಾನಿ ಬರೆದಿರುವ ಸುದೀರ್ಘ ಪತ್ರ.!

  |
  Yash fan from Philippines is in Bangaluru to meet Yash FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಗೆ ಕೇವಲ ಕರ್ನಾಟಕದಲ್ಲಿ ಮಾತ್ರ ಅಭಿಮಾನಿಗಳಿದ್ದಾರೆ ಅಂತ ಯಾರೂ ಭಾವಿಸುವ ಹಾಗೇ ಇಲ್ಲ. ಯಾಕಂದ್ರೆ, 'ಕೆ.ಜಿ.ಎಫ್' ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆದ್ಮೇಲೆ, ಭಾರತದ ಮೂಲೆ ಮೂಲೆಯಲ್ಲೂ 'ರಾಕಿ ಭಾಯ್'ಗೆ ಫ್ಯಾನ್ಸ್ ಇದ್ದಾರೆ. ಭಾರತ ಅಷ್ಟೇ ಅಲ್ಲ.. ಪಕ್ಕದ ಬಾಂಗ್ಲಾದೇಶ, ದೂರದ ಅಮೇರಿಕಾ, ಫಿಲಿಪ್ಪೀನ್ಸ್ ನಲ್ಲೂ ಯಶ್ ಮೇಲೆ ಅಭಿಮಾನ ಹೊಂದಿರುವ ಅನೇಕರಿದ್ದಾರೆ. ಅದಕ್ಕೆ ಸಾಕ್ಷಿಯನ್ನ ಇಂದು ನಾವು ಕೊಡ್ತೀವಿ, ನೋಡಿ...

  ಯೂಟ್ಯೂಬ್ ನಲ್ಲಿ ಯಶ್ ಕುರಿತ ಒಂದು ವಿಡಿಯೋ ನೋಡಿ ಫಿಲಿಪ್ಪೀನ್ಸ್ ನ ಪೆಟೆ ಅಶೋಕ್ ಜೊರ್ನಲ್ ಎಂಬ ವ್ಯಕ್ತಿ ಯಶ್ ಗೆ ಫಿದಾ ಆಗಿದ್ದಾರೆ. ಯಶ್ ರನ್ನ ಭೇಟಿ ಆಗಲು ಫಿಲಿಪ್ಪೀನ್ಸ್ ನಿಂದ ಆ ವ್ಯಕ್ತಿ ಬೆಂಗಳೂರಿಗೆ ಬಂದಿದ್ದಾರೆ. ಹೇಗಾದರೂ ಮಾಡಿ ಯಶ್ ರನ್ನ ಭೇಟಿ ಮಾಡಿಸಿ ಎಂದು ಆ ಫಿಲಿಪ್ಪೀನ್ಸ್ ವ್ಯಕ್ತಿ ಫೇಸ್ ಬುಕ್ ನಲ್ಲಿ ಸುದೀರ್ಘ ಪತ್ರ ಬರೆದು ಯಶ್ ರನ್ನ ಟ್ಯಾಗ್ ಮಾಡಿದ್ದಾರೆ.

  ಹಾಗಾದ್ರೆ, ಫಿಲಿಪ್ಪೀನ್ಸ್ ಆ ಅಭಿಮಾನಿ ಬರೆದಿರುವ ಪತ್ರದಲ್ಲಿ ಏನಿದೆ ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಇಂತಹ ಸ್ಟಾರ್ ನಟನನ್ನು ನೋಡಿಲ್ಲ.!

  ಇಂತಹ ಸ್ಟಾರ್ ನಟನನ್ನು ನೋಡಿಲ್ಲ.!

  ''ಕಳೆದ ಡಿಸೆಂಬರ್ ನಲ್ಲಿ ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ನೋಡಿದ ಮೇಲೆ ಯಶ್ ಬಗ್ಗೆ ತಿಳಿಯಿತು. ತಕ್ಷಣ ಅವರು ನನ್ನ ಅಚ್ಚುಮೆಚ್ಚಿನ ನಟ ಆಗ್ಬಿಟ್ಟರು. ಯಶ್ ಕುರಿತ ಎಲ್ಲಾ ಮಾಹಿತಿಯನ್ನು ಹುಡುಕಾಡಿದೆ. ಅವರ ಎಲ್ಲಾ ಚಿತ್ರಗಳು ಮತ್ತು ಸಂದರ್ಶನಗಳನ್ನು ವೀಕ್ಷಿಸಿದೆ. ಕಿರಿ ವಯಸ್ಸಿನಲ್ಲಿ ತುಂಬಾ ಕಷ್ಟ ಪಟ್ಟಿದ್ದರೂ, ಬಿಟ್ಟುಕೊಡುವ ವ್ಯಕ್ತಿತ್ವ ಅವರದ್ದಲ್ಲ. ನನ್ನ ಜೀವನದಲ್ಲಿ ಇಂತಹ ಓರ್ವ ಸ್ಟಾರ್ ನಟನನ್ನು ನಾನು ನೋಡಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಕೆ.ಜಿ.ಎಫ್'' - ಪೆಟೆ ಅಶೋಕ್ ಜೊರ್ನಲ್

  'ನಿಮ್ಮ ರೋಲ್ ಮಾಡೆಲ್ ಯಾರು' ಎಂದಿದ್ದಕ್ಕೆ ಯಶ್ ಹೇಳಿದ್ದು ಮೂವರ ಹೆಸರು!'ನಿಮ್ಮ ರೋಲ್ ಮಾಡೆಲ್ ಯಾರು' ಎಂದಿದ್ದಕ್ಕೆ ಯಶ್ ಹೇಳಿದ್ದು ಮೂವರ ಹೆಸರು!

  ಸ್ಫೂರ್ತಿಯಾದ ಯಶ್

  ಸ್ಫೂರ್ತಿಯಾದ ಯಶ್

  ''ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆ ಹೊಂದಿರುವ ಯಶ್, ಇತರೆ ಭಾಷೆಗಳ ಚಿತ್ರರಂಗಗಳನ್ನೂ ಗೌರವಿಸುತ್ತಾರೆ. ಹೀಗೆ, ಅನೇಕ ವಿಚಾರಗಳಲ್ಲಿ ಯಶ್ ನನಗೆ ಸ್ಫೂರ್ತಿಯಾಗಿದ್ದಾರೆ. ಅವರನ್ನ ಪ್ರೀತಿಸದೆ ಇರುವುದು ಅಸಾಧ್ಯ. ಪ್ರತಿದಿನ ನಾನು ಕೆ.ಜಿ.ಎಫ್ ವೈಬ್ಸ್ ಕ್ಯಾರಿ ಮಾಡುತ್ತೇನೆ. ರಾಕಿ ಭಾಯ್ ಲುಕ್ ನ ಕಾಪಿ ಮಾಡುವ ಸಲುವಾಗಿ ನಾನು ಉದ್ದ ಕೂದಲು, ಗಡ್ಡ ಬಿಟ್ಟಿಲ್ಲ. ಬದಲಾಗಿ, ಕ್ಯಾನ್ಸರ್ ಸಂಸ್ಥೆಗಳಲ್ಲಿ ಇರುವ ಮಕ್ಕಳಿಗೆ ಕೂದಲನ್ನು ದಾನ ಮಾಡುವ ಸಲುವಾಗಿ ಉದ್ದ ಕೂದಲು, ಗಡ್ಡ ಬಿಟ್ಟಿರುವೆ'' - ಪೆಟೆ ಅಶೋಕ್ ಜೊರ್ನಲ್

  ಬಾಂಗ್ಲಾದೇಶ ಅಭಿಮಾನಿಯ ಈ ಕಾಮೆಂಟ್ ನೋಡಿದ್ರೆ ಯಶ್ ಖುಷ್ ಆಗೋದು ಪಕ್ಕಾ!ಬಾಂಗ್ಲಾದೇಶ ಅಭಿಮಾನಿಯ ಈ ಕಾಮೆಂಟ್ ನೋಡಿದ್ರೆ ಯಶ್ ಖುಷ್ ಆಗೋದು ಪಕ್ಕಾ!

  ಬೇರೆ ದಾರಿ ಇರಲಿಲ್ಲ.!

  ಬೇರೆ ದಾರಿ ಇರಲಿಲ್ಲ.!

  ''ಯಶೋ ಮಾರ್ಗ ಸಂಸ್ಥೆಯ ಮೂಲಕ ಕರ್ನಾಟಕದಲ್ಲಿನ ಸಾವಿರಾರು ರೈತರಿಗೆ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹುಟ್ಟುಹಬ್ಬಕ್ಕೂ ಮುನ್ನ ಸಸಿಗಳನ್ನು ನೆಡುವ ಮೂಲಕ ಯಶ್ ಅಭಿಮಾನಿಗಳು ಟ್ರೆಂಡ್ ಸೆಟ್ ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದು ಅವರನ್ನು ಭೇಟಿಯಾಗುವುದನ್ನು ಬಿಟ್ಟು ಯಶ್ ಮೇಲಿನ ಗೌರವ ಮತ್ತು ಅಭಿಮಾನಿವನ್ನು ತೋರಿಸಲು ಬೇರೆ ದಾರಿಯಿಲ್ಲ. ಹೀಗಾಗಿ, ಫಿಲಿಪ್ಪೀನ್ಸ್ ನಿಂದ ಬೆಂಗಳೂರಿಗೆ ಬಂದಿರುವೆ. ದಯವಿಟ್ಟು ನನ್ನ ಕನಸನ್ನು ನನಸು ಮಾಡಿ. ಯಶ್ ರನ್ನ ಭೇಟಿ ಆಗಲು ಸಹಾಯ ಮಾಡಿ'' ಎಂದು ಪೆಟೆ ಅಶೋಕ್ ಜೊರ್ನಲ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

  ಅಚ್ಚರಿ ಅಂದ್ರೆ ಇದೇ.!

  ಅಚ್ಚರಿ ಅಂದ್ರೆ ಇದೇ.!

  ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ ಫಿಲಿಪ್ಪೀನ್ಸ್ ನ ಪೆಟೆ ಅಶೋಕ್ ಜೊರ್ನಲ್.. ರಾಕಿಂಗ್ ಸ್ಟಾರ್ ಯಶ್ ಫ್ಯಾನ್ ಆದ್ಮೇಲೆ ಕನ್ನಡ ಕಲಿತಿದ್ದಾರೆ. ಫಿಲಿಪ್ಪೀನ್ಸ್ ಅಭಿಮಾನಿಯ ಕೋರಿಕೆಗೆ ಮನ್ನಣೆ ಕೊಟ್ಟ ಯಶ್ ನಿನ್ನೆಯಷ್ಟೇ ಪೆಟೆ ಅಶೋಕ್ ಜೊರ್ನಲ್ ರನ್ನ ಭೇಟಿ ಆಗಿದ್ದಾರೆ. ಪೆಟೆ ಅಶೋಕ್ ಜೊರ್ನಲ್ ಅಭಿಮಾನ ಕಂಡು ಯಶ್ ಖುಷಿ ಪಟ್ಟಿದ್ದಾರೆ.

  English summary
  A Fan from Philippines has a message for Kannada Actor Yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X