»   » ಚೆನ್ನೈನಲ್ಲಿ ಸಿಗಲಿದೆ ಶ್ರೀದೇವಿ ಸಿನಿಮಾ ಹೆಸರಿನ ಬಗೆಬಗೆಯ ತಿಂಡಿ

ಚೆನ್ನೈನಲ್ಲಿ ಸಿಗಲಿದೆ ಶ್ರೀದೇವಿ ಸಿನಿಮಾ ಹೆಸರಿನ ಬಗೆಬಗೆಯ ತಿಂಡಿ

Posted By:
Subscribe to Filmibeat Kannada
ಚೆನ್ನೈನಲ್ಲಿ ಸಿಗಲಿದೆ ಶ್ರೀದೇವಿ ಸಿನಿಮಾ ಹೆಸರಿನ ಬಗೆಬಗೆಯ ತಿಂಡಿ | Filmibeat Kannada

ನಟಿ ಶ್ರೀದೇವಿ ಅಂದ್ರೆ ಯಾರಿಗ್ತಾನೆ ಇಷ್ಟ, ಅಭಿಮಾನ ಇಲ್ಲ ಹೇಳಿ.? ಒಂದ್ಕಾಲದಲ್ಲಿ ಬಹು ಬೇಡಿಕೆಯ ನಾಯಕಿ ಆಗಿ ಮೆರೆದ ಶ್ರೀದೇವಿ ಅದೆಷ್ಟೋ ಜನರ ಪಾಲಿಗೆ ಡ್ರೀಮ್ ಗರ್ಲ್ ಆಗಿದ್ದರು.

ಈಗಲೂ ನಟಿ ಶ್ರೀದೇವಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅಂಥವರ ಪೈಕಿ ಒಬ್ರು ಚೆನ್ನೈನಲ್ಲಿದ್ದಾರೆ. ಅವರು ಶ್ರೀದೇವಿ ರವರ ಅಂತಿಂಥ ಅಭಿಮಾನಿ ಅಲ್ಲ. ರೆಸ್ಟೋರೆಂಟ್ ಒಂದನ್ನು ಆರಂಭಿಸಲು ಹೊರಟಿರುವ ಆ ಅಭಿಮಾನಿ, ಅದರಲ್ಲಿನ ತಿಂಡಿಗಳಿಗೆ ಶ್ರೀದೇವಿ ಅಭಿನಯಿಸಿರುವ ಸಿನಿಮಾಗಳ ಹೆಸರುಗಳನ್ನು ಇಡುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಅಂದ್ಹಾಗೆ, ಆ ಅಭಿಮಾನಿಯ ಹೆಸರೇನು.? ತಮ್ಮ ರೆಸ್ಟೋರೆಂಟ್ ನಲ್ಲಿ ಯಾವ ಯಾವ ತಿಂಡಿಗಳಿಗೆ ಶ್ರೀದೇವಿ ಸಿನಿಮಾಗಳ ಹೆಸರನ್ನು ನಾಮಕರಣ ಮಾಡಿದ್ದಾರೆ ಎಂಬುದರ ವಿವರ ಲಭ್ಯವಾಗಿಲ್ಲ. ಆದ್ರೆ, ನೂರಕ್ಕೂ ಹೆಚ್ಚು ಖಾದ್ಯ ಗಳಿಗೆ ಶ್ರೀದೇವಿ ಅವರ ಸಿನಿಮಾಗಳ ಹೆಸರನ್ನ ಇಟ್ಟಿದ್ದಾರೆ ಎಂಬುದು ಮಾತ್ರ ಪಕ್ಕಾ.

ಈ ನಟಿ ಮದುವೆಯಾದಾಗ ರವಿಚಂದ್ರನ್ ಹಾರ್ಟ್ ಬ್ರೇಕ್ ಆಗಿತ್ತಂತೆ!

A Fan in Chennai opens Restaurant, names Dishes after Sridevi's movie

ರೆಸ್ಟೋರೆಂಟ್ ಸದ್ಯದಲ್ಲೇ ತೆರೆಯಲಿದ್ದು, ಅದರ ಉದ್ಘಾಟನೆಗಾಗಿ ಶ್ರೀದೇವಿ ಅವರಿಗೆ ಆಹ್ವಾನ ನೀಡಲಾಗಿದ್ಯಂತೆ. ಅಭಿಮಾನಿಯ ಆಮಂತ್ರಣವನ್ನು ಸ್ವೀಕರಿಸಿರುವ ಶ್ರೀದೇವಿ ಚೆನ್ನೈಗೆ ಹಾರುತ್ತಾರಾ ಎಂಬುದೇ ಸದ್ಯದ ಕುತೂಹಲ.

ಆದ್ರೆ, ತಮ್ಮ ರೆಸ್ಟೋರೆಂಟ್ ಉದ್ಘಾಟನೆಗೆ ಶ್ರೀದೇವಿ ಬಂದೇ ಬರುತ್ತಾರೆ ಎಂಬ ನಂಬಿಕೆ ಮೇಲೆ ರೆಸ್ಟೋರೆಂಟ್ ಮುಂದೆ ರೆಡ್ ಕಾರ್ಪೆಟ್ ಹಾಸಲು, ದೊಡ್ಡ ದೊಡ್ಡ ಬ್ಯಾನರ್, ಪೋಸ್ಟರ್ ಹಾಕಿಸಲು ಆ ಅಭಿಮಾನಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ.

ವಿಭಿನ್ನ ರೀತಿಯಲ್ಲಿ ಅಭಿಮಾನ ಮೆರೆದಿರುವ ಆ ಅಭಿಮಾನಿಯ ಆಸೆ ಈಡೇರಿಸುತ್ತಾರಾ ಶ್ರೀದೇವಿ ಅಂತ ಕಾದು ನೋಡ್ಬೇಕು.

English summary
A Fan in Chennai has opened a Restaurant and named the Dishes after Sridevi's movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada