twitter
    For Quick Alerts
    ALLOW NOTIFICATIONS  
    For Daily Alerts

    ಕಾಜಲ್ ಮೇಲಿನ ಆಸೆಯಿಂದ 60 ಲಕ್ಷ ಕಳೆದುಕೊಂಡ ಯುವಕ

    |

    Recommended Video

    ನಟಿಯರ ಮೇಲೆ ಹೆಚ್ಚು ಆಸೆ ಇದ್ರೆ ಹಿಂಗೆ ಆಗೋದು..?

    ಇದು ಇಂಟರ್ ನೆಟ್ ಜಗತ್ತು. ಈಗ ಯಾವುದೇ ಕೆಲಸ ಬೇಕಿದ್ರು ಕ್ಷಣ ಮಾತ್ರದಲ್ಲಿ ಕೂತಲ್ಲಿಯೇ ಆಗುತ್ತೆ. ಮೊಬೈಲ್ ಒಂದಿದ್ದರೇ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಬಹುದು. ಈ ತಂತ್ರಜ್ಞಾನದಿಂದ ಎಷ್ಟರ ಮಟ್ಟಿಗೆ ಒಳ್ಳೆಯ ಕೆಲಸಕ್ಕೆ ಆಗುತ್ತಿದೆಯೋ ಅದೇ ರೀತಿ ಕೆಟ್ಟ ಕೆಲಸಗಳು ನಡೆಯುತ್ತಿದೆ.

    ಇದಕ್ಕೆ ತಾಜಾ ಉದಾಹರಣೆ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಹೆಸರು ಬಳಸಿಕೊಂಡು ಯುವಕನ ಬಳಿ 60 ಲಕ್ಷ ದೋಚಿರುವ ರೋಚಕ ಕಥೆ. ಬ್ಲಾಕ್ ಮೇಲ್ ತಂತ್ರದಿಂದ ಸೈಬರ್ ಕಳ್ಳರು ಯುವಕನ ಬಳಿ ಹಲವು ಹಣ ವಸೂಲಿ ಮಾಡಿದ್ದಾರೆ.

    ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ಕಾಜಲ್ ಗೆ ನೆಟ್ಟಿಗರಿಂದ ಮೆಚ್ಚುಗೆ ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ಕಾಜಲ್ ಗೆ ನೆಟ್ಟಿಗರಿಂದ ಮೆಚ್ಚುಗೆ

    ನೀವು ಯಾರಿಗೂ ನಿಮ್ಮ ಅಕೌಂಟ್ ನಂಬರ್, ಬ್ಯಾಂಕ್ ವಿವರಗಳನ್ನ ನೀಡುವುದಿಲ್ಲ. ಆದರೂ ನಿಮ್ಮ ಖಾತೆಯಲ್ಲಿದ್ದ ಹಣ ಮಾಯವಾಗುತ್ತೆ. ಯಾವುದೇ ಆಪ್ ಬಳಸುತ್ತಿದ್ದರೇ ಇದ್ದಕಿದ್ದಂತೆ ಹಣ ಕಟ್ ಆಗುತ್ತದೆ. ಹೀಗೆ, ಆ ಯುವಕನನ್ನು ಸೈಬರ್ ಕಳ್ಳರು ವಂಚಿಸಿ 60 ಲಕ್ಷ ಲೂಟಿ ಮಾಡಿದ್ದಾರೆ. ಏನಿದು ಕಥೆ? ಕಾಜಲ್ ಅಗರ್ ವಾಲ್ ಗೂ ಈ ಪ್ರಕರಣಕ್ಕೂ ಏನು ಸಂಬಂಧ? ಮುಂದೆ ಓದಿ.....

    ನೆಚ್ಚಿನ ನಟಿಯನ್ನ ಭೇಟಿ ಮಾಡುವ ಅವಕಾಶ

    ನೆಚ್ಚಿನ ನಟಿಯನ್ನ ಭೇಟಿ ಮಾಡುವ ಅವಕಾಶ

    ತಮಿಳುನಾಡು ಮೂಲದ ಶ್ರೀಮಂತ ಮನೆತನ ಯುವಕನೊಬ್ಬ ಇಂಟರ್ ನೆಟ್ ಗೆ ಹೆಚ್ಚು ಅವಲಂಬಿತವಾಗಿದ್ದ. ಹಾಗಾಗಿ, ಕೆಲವು ವೆಬ್ ಸೈಟ್ ಗಳನ್ನು ಕೂಡ ಫಾಲೋ ಮಾಡ್ತಿದ್ದ. ಹೀಗೆ ಒಂದು ದಿನ ವೆಬ್ ಸೈಟ್ ಒಂದರಲ್ಲಿ ಒಂದು ಜಾಹೀರಾತು ಬಂದಿದೆ. 'ನಿಮ್ಮ ನೆಚ್ಚಿನ ನಟಿಯನ್ನ ಭೇಟಿ ಮಾಡುವ ಅವಕಾಶ' ನಿಮಗೆ ಸಿಗಲಿದೆ ಎಂಬ ಪ್ರಕಟಣೆ ಗಮನಿಸಿದ್ದಾನೆ.

    ಕಾಜಲ್ ಆಯ್ಕೆ ಮಾಡಿಕೊಂಡ ಯುವಕ

    ಕಾಜಲ್ ಆಯ್ಕೆ ಮಾಡಿಕೊಂಡ ಯುವಕ

    ನಿಮಗೆ ಇಷ್ಟವಾದ ನಟಿಯನ್ನ ಭೇಟಿ ಮಾಡುವ ಅವಕಾಶ ಎಂದಾಕ್ಷಣ ಮಿಸ್ ಮಾಡಿಕೊಳ್ಳಲು ಯಾರೂ ಇಷ್ಟಪಡಲ್ಲ. ಸರಿ, ಒಂದು ಸಲ ಟ್ರೈ ಮಾಡೋಣ ಅಂತ ಆ ಯುವಕ ನಿರ್ಧರಿಸಿ ಮುಂದುವರಿದ. ಕೆಲವು ನಟಿಯರ ಪೈಕಿ ಕಾಜಲ್ ಅಗರ್ ವಾಲ್ ಅವರ ಫೋಟೋ ಮೇಲೆ ಕ್ಲಿಕ್ ಮಾಡಿ ಆಯ್ಕೆ ಮಾಡಿಕೊಂಡ. ನಂತರ ಆ ನಟಿಗೆ ಸಂಬಂಧಿಸಿದ ಕೆಲವು ಮಾಹಿತಿಗಳುಳ್ಳ ಇನ್ನೊಂದು ಪೇಜ್ ಓಪನ್ ಆಯ್ತು.

    ಭಾರತದ ಈ ಸ್ಟಾರ್ ಕ್ರಿಕೆಟಿಗನ ಮೇಲೆ ಕಾಜಲ್ ಗೆ ಕ್ರಶ್ ಆಗಿತ್ತಂತೆ.!ಭಾರತದ ಈ ಸ್ಟಾರ್ ಕ್ರಿಕೆಟಿಗನ ಮೇಲೆ ಕಾಜಲ್ ಗೆ ಕ್ರಶ್ ಆಗಿತ್ತಂತೆ.!

    ಆಸೆಯಿಂದ ವಿವರಗಳನ್ನ ನೀಡಿದ

    ಆಸೆಯಿಂದ ವಿವರಗಳನ್ನ ನೀಡಿದ

    ಹೊಸದಾಗಿ ಓಪನ್ ಆಗಿದ್ದ ಪೇಜ್ ನಲ್ಲಿ ವ್ಯಕ್ತಿಗತವಾದ ಕೆಲವು ವಿವರಗಳನ್ನ ಕೇಳಲಾಗಿತ್ತು. ಕಾಜಲ್ ಅಗರ್ ವಾಲ್ ಭೇಟಿ ಮಾಡಬಹುದು ಎಂಬ ಆಸೆಯಿಂದ ಆ ಯುವಕ ತನಗೆ ಸಂಬಂಧಿಸಿದ ವಿವರಗಳನ್ನ ನೀಡಿದ. ಜೊತೆಗೆ ಕೆಲವು ಫೋಟೋಗಳನ್ನ ಕೂಡ ಶೇರ್ ಮಾಡಿದ. ಈ ವಿವರಗಳನ್ನ ಗಮನಿಸಿದ ಸೈಬರ್ ಕಳ್ಳರು ಈತ ಶ್ರೀಮಂತ ಮನೆತನದ ಯುವಕ ಎಂಬುದನ್ನ ಅರಿತು, ಆತನ ಫೋಟೋಗಳನ್ನ ಮಾರ್ಫಿಂಗ್ ಮಾಡಿ ಬ್ಲಾಕ್ ಮೇಲ್ ಮಾಡಿದ್ರು.

    50 ಸಾವಿರದಿಂದ 60 ಲಕ್ಷ ವಸೂಲಿ

    50 ಸಾವಿರದಿಂದ 60 ಲಕ್ಷ ವಸೂಲಿ

    ನಾವು ಕೇಳಿದಷ್ಟು ಹಣವನ್ನ ಕೊಟ್ಟಿಲ್ಲ ಅಂದ್ರೆ ಮಾರ್ಫಿಂಗ್ ಮಾಡಿದ ಫೋಟೋಗಳನ್ನ ಇಂಟರ್ ನೆಟ್ ನಲ್ಲಿ ಲೀಕ್ ಮಾಡ್ತೀವಿ ಎಂದು ಬೆದರಿಸಿದ್ದಾರೆ. ಆರಂಭದಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟು ಹಣ ಪಡೆದುಕೊಂಡಿದ್ದಾರೆ. ನಂತರ ಅದನ್ನೇ ಮುಂದುವರಿಸಿ 60 ಲಕ್ಷದ ವರೆಗೂ ಹಣ ವಸೂಲಿ ಮಾಡಿದ್ದಾರಂತೆ. ನಂತರ ಹಣದ ಜೊತೆ ಗೌರವವನ್ನ ಕಳೆದುಕೊಂಡ ಆ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಯುವಕನ ದೂರಿನ ಅನ್ವಯ ಆ ಸೈಬರ್ ಕಳ್ಳರನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    English summary
    A Tamilnadu based Fan Lost 60 Lakhs to meet Kajal Aggarwal.
    Friday, August 2, 2019, 13:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X