»   » ಸಾಹಸಸಿಂಹ ಡಾ.ವಿಷ್ಣುವರ್ಧನ್ ಬರೆದ ಒಂದು ಪತ್ರ

ಸಾಹಸಸಿಂಹ ಡಾ.ವಿಷ್ಣುವರ್ಧನ್ ಬರೆದ ಒಂದು ಪತ್ರ

Posted By: ಉದಯರವಿ
Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ಎಂದರೆ ಅಭಿಮಾನಿಗಳ ಧಮನಿ ಧಮನಿಗಳಲ್ಲಿ ರಕ್ತ ಪುಟಿಯುತ್ತದೆ. ಅವರು ಇಂದು ಅಭಿಮಾನಿಗಳ ಜೊತೆ ಇದ್ದಿದ್ದರೆ ಬಹುಶಃ ಟ್ವಿಟ್ಟರ್ ಖಾತೆ ತೆರೆದಿರುತ್ತಿದ್ದರು. ಫೇಸ್ ಬುಕ್ ನಲ್ಲಿ ತಮ್ಮ ಹಾಗೂ ಕುಚಿಕು ಗೆಳೆಯನ ಫೋಟೋಗಳನ್ನು ಹಾಕಿ ಸಂಭ್ರಮಿಸುತ್ತಿದ್ದರು.

ಅವರು ಆ ಕೆಲಸ ಮಾಡಲು ಆಗದಿದ್ದರೂ ಅವರ ಅಭಿಮಾನಿಗಳು ಮಾತ್ರ ಮುಂದುವರಿಸುತ್ತಿದ್ದಾರೆ. ಈಗಾಗಲೆ ವಿಷ್ಣು ಅವರ ಹೆಸರಿನಲ್ಲಿ ಸಾಕಷ್ಟು ಫೇಸ್ ಬುಕ್ ಫ್ಯಾನ್ ಪೇಜ್ ಗಳು ಸೃಷ್ಟಿಯಾಗಿವೆ. ಅಭಿಮಾನಿಗಳು ಅವರ ಚಿತ್ರಗಳನ್ನು, ಡೈಲಾಗ್ ಗಳನ್ನು ಇನ್ನೂ ಮೆಲುಕು ಹಾಕುತ್ತಲೇ ಇದ್ದಾರೆ.

ಆದರೆ ಇ-ಮೇಲ್, ಟ್ಟಿಟ್ಟರ್ ಇಲ್ಲದ ಕಾಲದಲ್ಲಿ ವಿಷ್ಣು ಅವರು ಸ್ವತಃ ತಮ್ಮ ಕೈಯಾರೆ ಪತ್ರಗಳನ್ನು ಬರೆದು ಅಭಿಮಾನಿಗಳಿಗೆ ಉತ್ತರಿಸುತ್ತಿದ್ದರು. ಅದಕ್ಕೆ ನಿದರ್ಶನ ಎಂಬಂತೆ ಇಲ್ಲಿದೆ ನೋಡಿ ಅವರ ಹಸ್ತಾಕ್ಷರದ ಒಂದು ಪತ್ರ. ಈಗಿನ ಕಾಲದ ಅದೆಷ್ಟೋ ನಟರಿಗೆ ಈ ರೀತಿ ಮುದ್ದಾದ ಕನ್ನಡ ಅಕ್ಷರಗಳನ್ನು ಬರೆಯಲು ಬರಲ್ಲ ಎಂಬುದು ದುರಂತ ಸತ್ಯ.

Sahasa Simha Dr Vishnuvardhan

ಇಸವಿ 1990ರಲ್ಲಿ ಬರೆದ ಪತ್ರ ಇದು. ತಮ್ಮ ಅಭಿಮಾನಿ ಸತ್ಯಪ್ರಕಾಶ್ ಅವರಿಗೆ ಬರೆದ ಪತ್ರದ ಪ್ರತಿಯೊಂದು ಸಾಲುಗಳೂ ಸೊಗಸಾಗಿವೆ. "ನಿಮ್ಮಂತಹ ಅಭಿಮಾನಿಯನ್ನು ಪಡೆದ ನಾನು ಧನ್ಯ" ಎಂದು ಹೇಳಿರುವುದು ವಿಷ್ಣು ಅವರು ಅಭಿಮಾನಿಗಳನ್ನು ಎಷ್ಟೆಲ್ಲಾ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದರು ಎಂಬುದಕ್ಕೆ ಸಾಕ್ಷಿ ಈ ಪತ್ರ.

ಎಂದಿನಂತೆ ವಿಭಾ ಚಾರಿಟೆಬಲ್ ಟ್ರಸ್ಟ್ ಈ ಬಾರಿಯೂ (ಆ.18) ವಿಷ್ಣು ಹುಟ್ಟುಹಬ್ಬದ ನಿಮಿತ್ತ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಕ್ತದಾನ, ನೇತ್ರದಾನ, ಹೃದಯ ತಪಾಸಣೆ, ಕಣ್ಣಿನ ಪರೀಕ್ಷೆಯಂತಹ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. (ಫಿಲ್ಮಿಬೀಟ್ ಕನ್ನಡ)

English summary
A lovely letter written by late Sahasaha Simha Dr Vishnuvardhan to his beloved fan Sathya Prakash. The actor expressed his gratitude to his fan in the letter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada