»   » ರಾಗಿಣಿಗೆ ಅಶ್ಲೀಲ ಎಸ್ಎಂಎಸ್; ಉಮೇಶ್ ಬಂಧನ

ರಾಗಿಣಿಗೆ ಅಶ್ಲೀಲ ಎಸ್ಎಂಎಸ್; ಉಮೇಶ್ ಬಂಧನ

Posted By:
Subscribe to Filmibeat Kannada

ನಟಿ ರಾಗಿಣಿ ದ್ವಿವೇದಿ ಅವರಿಗೆ ಅಶ್ಲೀಲ ಎಸ್ಎಂಎಸ್ ಹಾಗೂ ಕರೆ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಗಿಣಿ ಅವರ ತಾಯಿಯ ಮೊಬೈಲ್ ಗೆ ರಾತ್ರಿ ವೇಳೆ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಸಹಾಯಕ ನಿರ್ದೇಶಕ ಎಂದು ಹೇಳಿಕೊಂಡು ಅಶ್ಲೀಲವಾಗಿ ಮಾತನಾಡಿ ಕಿರಿಕಿರಿ ಮಾಡುತ್ತಿದ್ದ.

ಈ ಬಗ್ಗೆ ಮಾತನಾಡಿರುವ ರಾಗಿಣಿ, "ಭಾನುವಾರ ರಾತ್ರಿ ವ್ಯಕ್ತಿಯೊಬ್ಬ ಅಮ್ಮನ ಫೋನ್ ಗೆ ನಿರಂತರವಾಗಿ ಕರೆ ಮಾಡಿದ್ದಾನೆ. ಈ ಮೊಬೈಲ್ ಸಂಖ್ಯೆ ಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಎಲ್ಲರ ಬಳಿ ಇದೆ...ಅಶ್ಲೀಲವಾಗಿ ಮಾತನಾಡಿದ್ದೂ ಅಲ್ಲದೆ, ಎಸ್ಎಂಎಸ್ ಗಳನ್ನೂ ಕಳುಹಿಸಿದ್ದಾನೆ." ಎಂದಿದ್ದಾರೆ.


ಈ ಸಂಬಂಧ ರಾಗಿಣಿ ಅವರ ತಂದೆ ಪೊಲೀಸರಿಗೆ ಸುದ್ದಿ ತಿಳಿಸಿದ್ದರು. ಕಡೆಗೂ ಪೊಲೀಸರು ಉಮೇಶ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಕೂಡಲೆ ಅಶ್ಲೀಲ ಎಸ್ಎಂಎಸ್ ಗಳನ್ನು ಕಳುಹಿಸಿದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸ್ ಇಲಾಖೆಗೆ ರಾಗಿಣಿ ಕೃತಜ್ಞತೆಗಳನ್ನೂ ತಿಳಿಸಿದ್ದಾರೆ.

ಶೀಘ್ರದಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡುವುದಾಗಿ ರಾಗಿಣಿ ತಿಳಿಸಿದ್ದಾರೆ. ಇನ್ನು ಬಂಧಿತ ಆರೋಪಿ ಉಮೇಶ್, ತಾನು ಪ್ರೀತಂ ಗುಬ್ಬಿ, ಆನಂದ್ ಪಿ ರಾಜು ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವುದಾಗಿ ತಿಳಿಸಿದ್ದಾನೆ. ಈತ ರಾತ್ರಿ 11.30 ರಿಂದ 2.13ರ ಸಮಯದಲ್ಲಿ ಕರೆ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
A person name Umesh who sent offensive SMS to Kannada actress Ragini Dwivedi's mothers mobile phone have taken into police custody. The late night calls were in bad taste and he sent SMSs as well said the actress.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada