»   » 'ಪ್ರಜಾಕಾರಣಿ' ಉಪೇಂದ್ರ ಬಗ್ಗೆ ಅಭಿಮಾನಿ ಬರೆದಿರುವ ಕವನ ಇದು

'ಪ್ರಜಾಕಾರಣಿ' ಉಪೇಂದ್ರ ಬಗ್ಗೆ ಅಭಿಮಾನಿ ಬರೆದಿರುವ ಕವನ ಇದು

Posted By:
Subscribe to Filmibeat Kannada

'ರಾಜಕೀಯ ತೊಲಗಲಿ, ಪ್ರಜಾಕೀಯ ಬರಲಿ' ಎನ್ನುತ್ತಾ 'ಪ್ರಜಾಕಾರಣ', 'ಪ್ರಜಾನೀತಿ' ಬಗ್ಗೆ ಮಾತನಾಡುತ್ತಿರುವ ಉಪೇಂದ್ರ 'ಉತ್ತಮ ಪ್ರಜಾ ಪಾರ್ಟಿ' ಸ್ಥಾಪಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹೊಸತನವನ್ನು ತಂದ ಉಪೇಂದ್ರ, ಸಮಾಜದಲ್ಲಿಯೂ ಹೊಸ ಬದಲಾವಣೆ ತರುತ್ತಾರೆ ಎಂಬ ನಂಬಿಕೆ ಹಲವರಲ್ಲಿ ಇದ್ದೇ ಇದೆ. ಇದೇ ಕಾರಣಕ್ಕೆ, ಉಪೇಂದ್ರ ರವರಿಗೆ ಸಪೋರ್ಟ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಉಪೇಂದ್ರ ಹಾಗೂ ಪ್ರಜಾಕೀಯಕ್ಕೆ ಜೈಕಾರ ಕೂಗುತ್ತಾ, ಬ್ಯಾಡರಹಳ್ಳಿಯ ನಾಗೇಶ್ ಎಂಬುವರು 'ಪ್ರಜಾಕೀಯ'ದ ಬಗ್ಗೆ ಒಂದು ಕವನ ಬರೆದಿದ್ದಾರೆ.

A Poem on Prajakeeya by his Upendra's fan

ಬಂದ ಬಂದ ಉಪ್ಪಿ ಬಂದ
ಪ್ರಜಾಕೀಯ ಹೊತ್ತು ತಂದ
ಜನ ಸಾಮಾನ್ಯರನ್ನು ಅಸಮಾನ್ಯರು ಎಂದ
ಹಣವಿಲ್ಲದೇ ಸ್ವಚ್ಛ ಪ್ರಜಾಕೀಯ ಕಟ್ಟುವೆನೆಂದ

ರಾಜನು ನಾನಲ್ಲ
ರಾಜಕೀಯ ಬೇಕಿಲ್ಲ
ಜಾತಿ ಮತ ನಮಗಿಲ್ಲ
ಪ್ರಾಮಾಣಿಕವಾಗಿ ಬದುಕೋಣ ಎಲ್ಲ

ಭ್ರಷ್ಟಾಚಾರ ನಿರ್ಮೂಲನೆ ಮಾಡುವೆನೆಂದು
ನಾಡಿನ ಜನತೆಯ ಸಲಹೆ ಪಡೆಯುವೆನೆಂದು
ಸ್ವಚ್ಛತೆಯ ನಾಡಿನ ಭವಿಷ್ಯದ ಕನಸನ್ನ ಕಂಡ
ಸಮಸ್ಯೆ ಪರಿಹಾರಕ್ಕೆಂದು ರಚಿಸಿದ್ದಾನೆ ತಂಡ

ಯುವ ಪೀಳಿಗೆ ಬಡಿದೆಚ್ಚರಿಸಿದ
ಪ್ರಜಾಕೀಯದ ಭಾಮದವ್ಯ ಸೃಷ್ಟಿಸಿದ
ಪ್ರಜೆಗಳನ್ನು ಒಗ್ಗೂಡಿಸಿದ
ಜನ ಸಾಮಾನ್ಯರಿಗೆ ಅರಿವು ಮೂಡಿಸಿದ
- ನಾಗೇಶ್, ಬ್ಯಾಡರಹಳ್ಳಿ

ಈ ಕವನ ಓದಿ ಖುಷಿ ಪಟ್ಟ ಉಪೇಂದ್ರ 'ಸೂಪರ್' ಎಂದು ಟ್ವೀಟ್ ಕೂಡ ಮಾಡಿದ್ದಾರೆ.

English summary
Take a look at the Poem on 'Prajakeeya' written by Upendra's fan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada