»   » ಹುಚ್ಚ ವೆಂಕಟ್ ಚುನಾವಣೆ ಪ್ರಣಾಳಿಕೆಯಲ್ಲಿ ಬಂಪರ್ ಕೊಡುಗೆಗಳು: ಊಹೆಗೂ ಮೀರಿದ್ದು.!

ಹುಚ್ಚ ವೆಂಕಟ್ ಚುನಾವಣೆ ಪ್ರಣಾಳಿಕೆಯಲ್ಲಿ ಬಂಪರ್ ಕೊಡುಗೆಗಳು: ಊಹೆಗೂ ಮೀರಿದ್ದು.!

By Bk
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪ್ರಣಾಲಿಕೆ ಬಿಡುಗಡೆ ಮಾಡುತ್ತೆ. ನಮ್ಮ ಸರ್ಕಾರ ಬಂದ್ರೆ, ಜನರಿಗೆ ಯಾವ ಸೌಲಭ್ಯಗಳು ಸಿಗುತ್ತೆ, ಯಾವೆಲ್ಲ ಯೋಜನೆಗಳು ಜನಸಾಮಾನ್ಯರಿಗೆ ನೀಡುತ್ತೇವೆ ಎಂದು ಪೂರ್ವಭಾವಿ ಪಟ್ಟಿ ಸಿದ್ದ ಮಾಡುತ್ತಾರೆ. ಇದು ರಾಜಕೀಯ ಪಕ್ಷಗಳ ಸಂಪ್ರದಾಯ.

  ಈ ಬಾರಿ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು.. ಹೀಗಾಗಿ, ಒಂದು ವೇಳೆ ಹುಚ್ಚ ವೆಂಕಟ್ ಈ ಎಲೆಕ್ಷನ್ ನಲ್ಲಿ ಗೆದ್ದು ಬಿಟ್ಟರೇ....? ಎಂಬ ಪ್ರಶ್ನೆ ಕಾಡುತ್ತಿದೆ.

  ಆರ್ ಆರ್ ನಗರದಲ್ಲಿ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಸ್ಪರ್ಧೆ

  ಹೇಳಿ ಕೇಳಿ ಹುಚ್ಚ ವೆಂಕಟ್ ಕೆಲವು ಅಂಶಗಳನ್ನ, ಸಂಸ್ಕಾರಗಳನ್ನ, ಘಟನೆಗಳನ್ನ ವಿರೋಧಿಸುತ್ತಾ ಬಂದಿದ್ದಾರೆ. ಬಹುಶಃ ಅಧಿಕಾರಕ್ಕೆ ಬಂದ್ರೆ ನನ್ ಮಗಂದ್ ಅಂದುಕೊಂಡಿದ್ದನ್ನೆಲ್ಲವೂ ಕಾರ್ಯರೂಪಕ್ಕೆ ತಂದ್ರೂ ತರಬಹುದು. ಸದ್ಯಕ್ಕೆ, ಹುಚ್ಚ ವೆಂಕಟ್ ಅವರ ದೃಷ್ಟಿಯಲ್ಲಿ ನೋಡುವುದಾರೇ ಅವರ ಪ್ರಣಾಳಿಕೆ ಹೇಗಿರಬಹುದು ಎಂದು ಊಹೆ ಮಾಡಿ ಒಂದು ಪಟ್ಟಿ ನಿಮಗಾಗಿ ತಯಾರಾಗಿದೆ.....ಮುಂದೆ ಓದಿ....

  ಐಟಂ ಸಾಂಗ್ ಬ್ಯಾನ್

  ಹುಚ್ಚ ವೆಂಕಟ್ ಅವರ ಚುನಾವಣೆ ಪ್ರಣಾಳಿಕೆಯಲ್ಲಿ ಮೊದಲ ಅಂಶ 'ಐಟಂ ಸಾಂಗ್ ಬ್ಯಾನ್ ಆಗ್ಬೇಕು'. ಸಿನಿಮಾಗಳಲ್ಲಿ ನಟಿಯರಿಂದ ಐಟಂ ಸಾಂಗ್ ಮಾಡಿಸುತ್ತಾರೆ. ಹೆಣ್ಣು ಮಕ್ಕಳನ್ನ ಕೆಟ್ಟದಾಗಿ ತೋರಿಸುತ್ತಾರೆ ಎಂಬ ಹೋರಾಟ, ಪ್ರತಿಭಟನೆ ವೆಂಕಟ್ ಅವರು ಮಾಡುತ್ತಾ ಬಂದಿದ್ದಾರೆ. ಹೀಗಾಗಿ, ಐಟಂ ಸಾಂಗ್ ಬ್ಯಾನ್ ಆಗೋದು ಖಚಿತ.

  ಹೆಣ್ಣು ಮಕ್ಕಳಿಗೆ ಬಾಗಿನ

  ಹೆಣ್ಣು ಮಕ್ಕಳಿಗೆ, ಯುವತಿಯರಿಗೆ, ಮಹಿಳೆಯರಿಗೆ ಅನ್ಯಾಯವಾದರೇ ಹುಚ್ಚ ವೆಂಕಟ್ ಸಹಿಸಲ್ಲ. ಅದೇ ರೀತಿ ಯುವತಿಯರು ಮೈ ತುಂಬ ಬಟ್ಟೆ ಹಾಕಬೇಕು ಎಂಬ ವಾದ ವೆಂಕಟ್ ಅವರದ್ದು. ಹೀಗಾಗಿ, ಕ್ಷೇತ್ರದ ಎಲ್ಲ ಹೆಣ್ಣು ಮಕ್ಕಳಿಗೆ ಸೀರೆ, ಬಿಂದಿ, ಬಳೆ, ಹೂವು ಸೇರಿದಂತೆ ಬಾಗಿನ ನೀಡಬಹುದು.

  ಬ್ಲೂ ಶರ್ಟ್ ವಿತರಣೆ

  ಹುಚ್ಚ ವೆಂಕಟ್ ಕ್ಷೇತ್ರದ ಜನರಿಗೆ, ಅದರಲ್ಲೂ ಪ್ರತ್ಯೇಕವಾಗಿ ಗಂಡಸರಿಗೆ ನೀಲಿ ಬಣ್ಣದ ಶರ್ಟ್ ವಿತರಣೆ ಮಾಡಲಾಗುವುದು. ಯಾಕಂದ್ರೆ, ನೀಲಿ ಬಣ್ಣವೆಂದರೇ ಹುಚ್ಚ ವೆಂಕಟ್ ಅವರಿಗೆ ಸಿಕ್ಕಾಪಟ್ಟೆ ಇಷ್ಟ.

  ಹುಚ್ಚ ವೆಂಕಟ್ ಗೂ ಕಂಗನಾ ರನೌತ್ ಇಬ್ಬರಿಗೂ ಒಂದೇ ಆಸೆ.! ಈಡೇರುತ್ತಾ.?

  ಭರ್ಜರಿ ಮನೆ ಊಟ

  ಹುಚ್ಚ ವೆಂಕಟ್ ಅವರು ಹಸಿದವರಿಗೆ ಊಟ ಹಾಕ್ತಾರೆ. ಊಟ ಇಲ್ಲದರಿಗೆ ಅನ್ನ ಹಾಕ್ತಾರೆ. ಹಾಗಾಗಿ, ವೆಂಕಟ್ ಮನೆಗೆ ಹೋದ್ರೆ, ಎಲ್ಲರಿಗೂ ಭರ್ಜರಿ ಊಟ ನೀಡಬಹುದು. ಜೊತೆಗೆ ಬಾಟಲ್ ನೀರು, ಸಮೋಸ ಎಲ್ಲವೂ ನೀಡಬಹುದು. ಶಿವಣ್ಣ ಮನೆಗೆ ಹೋದ ವೇಳೆಯಲ್ಲಿ ಕುಡಿಯಲು ನೀರು ಕೊಟ್ಟಿಲ್ಲ ಎಂದು ವೆಂಕಟ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಈ ಯೋಜನೆಯೂ ಪ್ರಣಾಳಿಕೆಯಲ್ಲಿ ಇರಬಹುದು.

  ಯೂಟ್ಯೂಬ್ ಗೆ ಹೆಚ್ಚಿನ ಮಾನ್ಯತೆ

  ಹುಚ್ಚ ವೆಂಕಟ್ ಅವರು ಇಷ್ಟೊಂದು ದೊಡ್ಡ ಮಟ್ಟದ ಖ್ಯಾತಿ ಗಳಿಸಲು ಯೂಟ್ಯೂಬ್ ಕೂಡ ಪ್ರಮುಖ ಕಾರಣ. ಹೀಗಾಗಿ, ಮುಂದಿನ ದಿನಗಳಲ್ಲಿ ಯೂಟ್ಯೂಬ್ ಗೆ ಹೆಚ್ಚಿನ ಮಾನ್ಯತೆ ನೀಡಲು ವೆಂಕಟ್ ನಿರ್ಧರಿಸಬಹುದು. ಇಂಟರ್ ನೆಟ್ ಬಳಸಲು ಎಲ್ಲರಿಗೂ ವೈಫೈ ಕೂಡ ಉಚಿತವಾಗಿ ನೀಡಲು ಹುಚ್ಚ ವೆಂಕಟ್ ಮನಸ್ಸು ಮಾಡಬಹುದು.

  ಹಿರಿಯರಿಗೆ ಉಚಿತ 'ಎಕ್ಕಡ'

  ಹುಚ್ಚ ವೆಂಕಟ್ ಅವರು ಹಿರಿಯರ ಸಂಕಷ್ಟಕ್ಕೆ ಬಂದಿದ್ದಾರೆ. ವಯಸ್ಸಾದವರ ಕಾಲಿಗೆ ಉಚಿತವಾಗಿ ಎಕ್ಕಡ ನೀಡಬಹುದು. ಎಕ್ಕಡದ ಮೇಲೆ ವೆಂಕಟ್ ಅವರಿಗೆ ಅಪಾರ ಗೌರವವಿದೆ. ಬಹುಶಃ ಬಿಗ್ ಬಾಸ್ ಮನೆಯಲ್ಲಿ ತಂದೆಯ ಚಪ್ಪಲಿಯನ್ನ ತಲೆಮೇಲೆ ಇಟ್ಟುಕೊಂಡಿದ್ದ ಘಟನೆಯನ್ನ ನೀವು ನೆನಯಬಹುದು.

  ನಾಯಿಗಳಿಗೆ ಉಚಿತ ಬನ್

  ವೆಂಕಟ್ ಅವರು ಪ್ರಾಣಿ ಪ್ರಿಯರು. ಎಲ್ಲ ಸರ್ಕಾರಗಳು ಮನುಷ್ಯರಿಗೆ ಮಾತ್ರ ಯೋಜನೆ ನೀಡುತ್ತೆ. ಅದ್ರೆ, ವೆಂಕಟ್ ಅವರು ಪ್ರಾಣಿಗಳಿಗೂ ಆಫರ್ ನೀಡಬಹುದು. ಸಾಕು ನಾಯಿ ಮತ್ತು ಬೀದಿ ನಾಯಿಗಳಿಗೆ ಉಚಿತವಾಗಿ ಬನ್ ನೀಡಬಹುದು.

  ಯುವ ಕಲಾವಿದರಿಗೆ ತರಬೇತಿ

  ಹುಚ್ಚ ವೆಂಕಟ್ ಅವರು ನಟ-ನಿರ್ದೇಶಕ-ನಿರ್ಮಾಪಕ-ಸಾಹಿತಿ-ಗಾಯಕ ಎಲ್ಲವೂ ಆಗಿರುವುದರಿಂದ ಸಿನಿಮಾರಂಗದಲ್ಲಿ ತರಬೇತಿ ಕೇಂದ್ರ ಸ್ಥಾಪನೆ ಮಾಡಬಹುದು. ಸಿನಿಮಾಗೆ ಬರಬೇಕು ಎಂದುಕೊಂಡ ಯುವ ಕಲಾವಿದರಿಗೆ ಟ್ರೈನಿಂಗ್ ನೀಡಲು 'ಹುಚ್ಚ ವೆಂಕಟ್ ನಟನಾ ಶಾಲೆ' ತೆರೆಯಬಹುದು.

  ಶಾಸಕ ಮುನಿರತ್ನ ವಿರುದ್ಧ ರೊಚ್ಚಿಗೆದ್ದ ಹುಚ್ಚ ವೆಂಕಟ್

  ಕಾವೇರಿ ಹಾಡು ಕಡ್ಡಾಯ

  ಇನ್ನು ಹುಚ್ಚ ವೆಂಕಟ್ ಅವರ ನೆಚ್ಚಿನ ಗೀತೆ ಕಾವೇರಿ ಕಾವೇರಿ....ಹಾಡು ಎಲ್ಲ ಕಾರ್ಯಕ್ರಮಗಳಲ್ಲಿಯೂ ಕಡ್ಡಾಯವಾಗಬಹುದು. ಗಣೇಶ ಕಾರ್ಯಕ್ರಮ, ಹುಟ್ಟುಹಬ್ಬಗಳು, ಸಾರ್ವಜನಿಕ ಕಾರ್ಯಕ್ರಮಗಳು, ಸರ್ಕಾರಿ ಕಾರ್ಯಕ್ರಮಗಳು ಹೀಗೆ ಎಲ್ಲದರಲ್ಲೂ ಕಾವೇರಿ ಹಾಡು ಕಡ್ಡಾಯವಾಗಬಹುದು.

  ವಿದೇಶಿ ಅಭಿಮಾನಿಗಳಿಗೆ ವಿಮಾನ ಪಾಸ್

  ಇನ್ನು ಹುಚ್ಚ ವೆಂಕಟ್ ಅವರಿಗೆ ವರ್ಲ್ಡ್ ವೈಡ್ ಅಭಿಮಾನಿಗಳು ಇರುವುದರಿಂದ ದಿನನಿತ್ಯ ವಿದೇಶಕ್ಕೆ ಪ್ರಯಾಣ ಮಾಡುವ ವೆಂಕಟ್ ಫ್ಯಾನ್ಸ್ ಗೆ ಉಚಿತ ವಿಮಾನ ಪಾಸ್ ನೀಡಬಹುದು.

  ವಿಡಿಯೋ: ಶಿವಣ್ಣ ಬಗ್ಗೆ ಬಾಯಿಗೆ ಬಂದ್ಹಂಗೆ ಮಾತನಾಡಿರುವ ಹುಚ್ಚ ವೆಂಕಟ್

  ಕೊನೆಯದಾಗಿ ಮಾಧ್ಯಮದವರಿಗೆ...

  ಇನ್ನು ಹುಚ್ಚ ವೆಂಕಟ್ ಅವರು ಎಲ್ಲ ಸುದ್ದಿಗೋಷ್ಠಿಯಲ್ಲಿ ಹೇಳುತ್ತಾರೆ. ಮಾಧ್ಯಮದವರೇ ನನ್ನ ಈ ಯಶಸ್ಸಿಗೆ ಕಾರಣ. ಅವರೇ ನನಗೆ ಎಲ್ಲ ಅಂತ. ಹೀಗಾಗಿ, ಅವರಿಗೂ ಕೂಡ ವೆಂಕಟ್ ಕಡೆಯಿಂದ ಕೊಡುಗೆ ನೀಡಬಹುದು. ಏನೂ ಎಂಬುದರ ಬಗ್ಗೆ ಯೋಚನೆ ಮಾಡುವುದು ಸ್ವಲ್ಪ ಕಷ್ಟ. ಒಟ್ನಲ್ಲಿ, ಇಷ್ಟೆಲ್ಲ ಸಂಗತಿಗಳು ವೆಂಕಟ್ ಅವರ ಪ್ರಣಾಳಿಕೆಯಲ್ಲಿರಬಹುದು ಎಂಬ ಲೆಕ್ಕಾಚಾರ ನಮ್ಮದು.

  English summary
  Kannada Actor, Director, YouTube Star Huccha Venkat is contesting in upcoming Karnataka Assembly Elections 2018 from Rajarajeshwari Nagar Constituency, Bengaluru. Here is an imaginary, satire manifesto of Huccha Venkat.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more